ಚಿತ್ರಗಳು: ಚಾರ್ಲಿ 777 ಕ್ಲೈಮಾಕ್ಸ್ ನಡುವೆಯೂ ಷಷ್ಠಿ ಪೂಜೆಗೆ ಹಾಜರಾದ ರಕ್ಷಿತ್ ಶೆಟ್ಟಿ

First Published | Dec 20, 2020, 10:30 PM IST

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಚಾರ್ಲಿ 777 ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಕೊಂಚ ಬಿಡುವು ಮಾಡಿಕೊಂಡು ತಮ್ಮ ಕುಟುಂಬದ ದೊಡ್ಡಮನೆಯಲ್ಲಿ ನಡೆದ ಷಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದರ ಫೋಟೋ ಝಲಕ್ ಇಲ್ಲಿದೆ ನೋಡಿ. 

ಚಾರ್ಲಿ 777 ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿ ಭಾನುವಾರ ಅಲೆವೂರಿನ ತಮ್ಮ ಕುಟುಂಬದ ದೊಡ್ಡ ಮನೆಯಲ್ಲಿ ನಡೆದ ಷಷ್ಠಿ ಕಾರ್ಯಕ್ರಮದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ಪ್ರತಿವರ್ಷ ಎಲ್ಲೆ ಇದ್ದರೂ ಷಷ್ಠಿಯಂದು ಮನೆಗೆ ನಾಗ ದೇವರ ಪೂಜೆಯಲ್ಲಿ ಭಾಗವಹಿಸುವ ರಕ್ಷಿತ್, ಈಗ ಚಾರ್ಲಿ 777 ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಬ್ಯುಸಿ ಇದ್ದರೂ, ಕುಟುಂಬದವರ ಜೊತೆ ಪೂಜೆಯಲ್ಲಿ ಭಾಗವಹಿಸಿದರು.
Tap to resize

ಈ ವೇಳೆ ಅಭಿಮಾನಿ ಮಕ್ಕಳ ಜೊತೆ ಫೋಟೋಗೆ ಪೋಸ್ ಕೊಟ್ಟರು.
ಇದೇ ಸಂದರ್ಭದಲ್ಲಿ ನಾಗಬನದಲ್ಲಿಯೇ ಬೊಡಾ ಶೀರ ಎಂಬ ತುಳು ಚಲನಚಿತ್ರದ ಪೂಸ್ಟರನ್ನು ಕೂಡ ಬಿಡುಗಡೆಗೊಳಿಸಿದರು. ಈ ಸಿನೆಮಾದ ನಿರ್ದೇಶಕ - ನಿರ್ಮಾಪಕ ದಿಕ್ಸನ್ ಜೆಡಿ, ನಟಿ ರೊಲೆಂಡ್ ಅಲಿಶಾ, ಸಹ ನಿರ್ದೇಶಕ ಅದಿತ್ಯರಾಜ್, ನಟಿ ಶಮಿತ ಸಾಲಿಯಾನ್ ಮುಂತಾದವರು ಉಪಸ್ಥಿತದ್ದರು.
rakshith shetty shashti pooja

Latest Videos

click me!