ದುಬಾರಿ ಕಾರಿನ ಒಡೆಯನಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ

Published : Jul 02, 2022, 05:06 PM IST

ಸ್ಯಾಂಡಲ್ ವುಡ್‌ನ ಖ್ಯಾತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಐಷಾರಾಮಿ ಕಾರಿನ ಒಡೆಯರಾಗಿದ್ದಾರೆ. ಡಿಫ್ರೆಂಡ್ ನಿರ್ದೇಶಕ ರಿಷಬ್ ಶೆಟ್ಟಿ ದುಬಾರಿ ಕಾರುಗಳಲ್ಲಿ ಒಂದಾಗಿರುವ ಆಡಿ ಕ್ಯೂ7 ಕಾರನ್ನು ಖರೀದಿಸಿದ್ದಾರೆ.  

PREV
16
ದುಬಾರಿ ಕಾರಿನ ಒಡೆಯನಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ

ಸ್ಯಾಂಡಲ್ ವುಡ್‌ನ ಖ್ಯಾತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಐಷಾರಾಮಿ ಕಾರಿನ ಒಡೆಯರಾಗಿದ್ದಾರೆ. ಹೌದು, ರಿಷಬ್ ಶೆಟ್ಟಿ ದುಬಾರಿ ಕಾರುಗಳಲ್ಲಿ ಒಂದಾಗಿರುವ ಆಡಿ ಕ್ಯೂ7 ಕಾರನ್ನು ಖರೀದಿಸಿದ್ದಾರೆ.
 

26

ಈ ಆಡಿ ಕ್ಯೂ7 ಸೆಲೆಬ್ರಿಟಿಗಳ ಕಾರು ಆಯ್ಕೆಗಳಲ್ಲಿ ಇದು ಜನಪ್ರಿಯವಾಗಿದೆ. ಐಷಾರಾಮಿ ಆಡಿ ಕ್ಯೂ7 ಕಾರನ್ನು ಕೊಂಡುಕೊಂಡ ಸಂಭ್ರಮವನ್ನು ಪ್ರಗತಿ ಶೆಟ್ಟಿ ಸಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

36

ಆಡಿ ಕ್ಯೂ7 ಕಾರಿನ ಮುಂದೆ ನಿಂತು ರಿಷಬ್ ಮತ್ತು ಪತ್ನಿ ಪ್ರಗತಿ ಶೆಟ್ಟಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.  ಜೊತೆಯಲ್ಲಿ ಇಬ್ಬರು ಮಕ್ಕಳನ್ನು ನೋಡಬಹುದು. ಪ್ರಗತಿ ಶೆಟ್ಟಿ ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. 

46

ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ 2017ರಲ್ಲಿ ಹಸೆಮಣೆ ಏರಿದರು. ಈ ದಂಪತಿಗೆ ಇಬ್ಬರು ಮಕ್ಕಳು. ಮೊದಲ ಮಗನಿಗೆ ರಣ್ವಿತ್ ಶೆಟ್ಟಿ ಹೆಸರಿಟ್ಟಿದ್ದಾರೆ. ಆದರೆ ಇನ್ನು ಎರಡನೇ ಮಗುವಿನ ಫೋಟೋ ಮತ್ತು ಹೆಸರನ್ನು ಇನ್ನು ರಿವೀಲ್ ಮಾಡಿಲ್ಲ. 

56

ಸ್ಟಾರ್​​ ನಿರ್ದೇಶಕ ಹಾಗೂ ನಟ ರಿಷಬ್​ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ಗರುಡ ಗಮನ ವೃಷಭ ವಾಹನ ಸೂಪರ್ ಹಿಟ್ ಆಗಿದೆ. ಇತ್ತೀಚಿಗಷ್ಟೆ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ ಮೂಲಕ ರಿಷಬ್ ಅಭಿಮಾನಿಗಳ ಮುಂದೆ ಬಂದಿದ್ದರು. 
 

66

ಸದ್ಯ ಬೆಲ್ ಬಾಟಂ 2, ಮಹಾನೀಯರೆ ಮಹಿಳೆಯರೇ, ಆಂಟಗೋನಿ ಶೆಟ್ಟಿ, ಕಾಂತರ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಆಡಿ ಕ್ಯೂ ಖರೀದಿಸಿ ಸಂಭ್ರಮಿಸುತ್ತಿದ್ದಾರೆ. 

Read more Photos on
click me!

Recommended Stories