ಕಾಟೇರ ದರ್ಶನ್ ಜೀವನದಲ್ಲಿ ಅ'ಪವಿತ್ರ' ಕೆಲಸಗಳೇ ಜಾಸ್ತಿ!

First Published | Jun 11, 2024, 3:34 PM IST

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರವ ನಟ ದರ್ಶನ್, ಈ ಹಿಂದೆಯೂ 28 ದಿನ ಜೈಲುವಾಸ ಅನುಭವಿಸಿದ್ದರು. ದರ್ಶನ್ ವಿವಾದಗಳ ಕುರಿತ ಮಾಹಿತಿ ಇಲ್ಲಿದೆ.

ಸಾರಥಿ ಸಿನಿಮಾ ದರ್ಶನ್‌ಗೆ ದೊಡ್ಡ ಹಿಟ್ ಕೊಟ್ಟ ಚಿತ್ರ. ಈ ಸಂದರ್ಭದಲ್ಲಿ ಮೊದಲ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಹಲ್ಲೆ ಸಂಬಂಧ ವಿಜಯಲಕ್ಷ್ಮಿ ಪೊಲೀಸ್ ಠಾಣೆಯಲ್ಲಿ ದರ್ಶನ್ ವಿರುದ್ಧ ದೂರು ದಾಖಲಿಸಿದ್ದರು. ದೂರು ದಾಖಲಾದ ಬಂಧನಕ್ಕೊಳಗಾಗಿದ್ದ ದರ್ಶನ್ 28 ದಿನ ಜೈಲುವಾಸ ಅನುಭವಿಸಿದ್ದರು. ನಂತರ ದಂಪತಿ ರಾಜಿ ಮಾಡಿಕೊಂಡರು ಮತ್ತು 2013 ರಲ್ಲಿ ದರ್ಶನ್ ಅವರನ್ನು ಖುಲಾಸೆಗೊಳಿಸಲಾಯಿತು. ಪತ್ನಿ ಮೇಲೆ ಎರಡ್ಮೂರು ಬಾರಿ ಹಲ್ಲೆ ನಡೆಸಿರುವ ಆರೋಪಗಳು ಕೇಳಿ ಬಂದಿದ್ದವು.

ಯಜಮಾನ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಅಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರು ಎಂಬ ಆರೋಪಗಳು ಕೇಳಿ ಬಂದಿದ್ದವು. ಆದ್ರೆ ಈ ಸಂಬಂಧ ಯಾವುದೇ ದೂರು ದಾಖಲಾಗಿರಲಿಲ್ಲ. ದರ್ಶನ್ ಬಳಿಯಲ್ಲಿ ಹುಲಿ ಉಗುರಿನ ಪೆಂಡೆಂಟ್ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಅದು ನಕಲಿ ಪೆಂಡೆಂಟ್ ಎಂದು ತಿಳಿದು ಬಂದಿತ್ತು. ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿತ್ತು. 

Tap to resize

ರಾಬರ್ಟ್ ಸಿನಿಮಾ ನಿರ್ದೇಶಕ ಉಮಾಪತಿ, ದರ್ಶನ್ ಹೆಸರು ಬಳಸಿಕೊಂಡು ಸುಮಾರು 20 ಕೋಟಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಕಾಟೇರ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಸಿನಿಮಾ ಟೈಟಲ್ ಕುರಿತು ನಿರ್ದೇಶಕ ಉಮಾಪತಿ ಮತ್ತು ದರ್ಶನ್ ನಡುವೆ ವಾಕ್ಸಮರ ಉಂಟಾಗಿತ್ತು. ತಗಡು ಎಂಬ ಪದಗಳನ್ನು ಬಳಸಿ ದರ್ಶನ್ ನಿಂದಿಸಿದ್ದರು. 

ಕಾಟೇರಾ ಸಿನಿಮಾ ಸಕ್ಸಸ್ ಸಮಾರಂಭದಲ್ಲಿ ನನಗೆ ಸೆಲೆಬ್ರಿಟಿಗಳಿದ್ದರೆ ಸಾಕು, ಯಾವಳಿದ್ದರೆ ನನಗೇನು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಮಹಿಳಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ದೂರು ದಾಖಲಿಸಿದ್ದವು. ರಾಜ್ಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾಗಿತ್ತು. ಜೆಟ್‌ಲಾಗ್‌ ಪಬ್‌ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ ಸಂಬಂಧವೂ ದರ್ಶನ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇನ್ನು ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಅನುಮತಿ ಇಲ್ಲದೇ ಪಕ್ಷಿಯೊಂದನ್ನು ಸಾಕಿದ್ದಾರೆ ಎಂದು ದೂರು ದಾಖಲಾಗಿತ್ತು. ಈ ಸಂಬಂಧವೂ ದರ್ಶನ್ ವಿಚಾರಣೆಗೆ ಒಳಗಾಗಿದ್ದರು. 2023ರಲ್ಲಿ ದರ್ಶನ್ ಮತ್ತು ಫಾರ್ಮ್‌ಹೌಸ್ ಮ್ಯಾನೇಜರ್ ನಾಗರಾಜ್ ವಿರುದ್ಧ ಅರಣ್ಯ ಇಲಾಖೆಯು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ವಲಸೆ ಹಕ್ಕಿಯೊಂದಿಗೆ ಪೋಸ್ ನೀಡಿದ್ದಕ್ಕಾಗಿ ಪ್ರಕರಣ ದಾಖಲಾಗಿತ್ತು.

ಇನ್ನು ಬೆಂಗಳೂರಿನ ದರ್ಶನ್ ಮನೆ ಪಕ್ಕದಲ್ಲಿ ಕಾರ್ ಪಾರ್ಕ್ ಮಾಡಿದ್ದರಿಂದ ನಾಯಿಗಳ ಮೂಲಕ ದಾಳಿ ನಡೆಸಿದ್ದರು ಎಂದು ವಕೀಲೆ ದೂರು ದಾಖಲಿಸಿದ್ದರು. ಈ ಸಂಬಂಧವೂ ಪೊಲೀಸರ ಮುಂದೆ ಹಾಜರಾಗಿ ದರ್ಶನ್ ವಿಚಾರಣೆಗೆ ಒಳಗಾಗಿದ್ದರು.

2018ರಲ್ಲಿ ಮೈಸೂರಿನ ಕ್ರಾಫ್ಟ್ ಬಜಾರ್ ಎದುರುಗಡೆ ರಸ್ತೆಯಲ್ಲಿ ದರ್ಶನ್ ಕಾರ್ ಅಪಘಾತಕ್ಕೊಳಗಾಗಿತ್ತು. ಅಪಘಾತ ನಡೆದ ಸ್ಥಳದಲ್ಲಿ ಕಾರ್ ಇರಲಿಲ್ಲ. ರಾತ್ರೋರಾತ್ರಿ ಅಪಘಾತಕ್ಕೊಳಾಗಿದ್ದ ಕಾರ್‌ನ್ನು ಮೈಸೂರಿನಿಂದ ಬೆಂಗಳೂರಿಗೆ ಶಿಫ್ಟ್ ಮಾಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಡಿವೈಡರಿಗೆ ಡಿಕ್ಕಿ ಹೊಡೆದಿದ್ದರಿಂದ ಕಾರಿನ ಮುಂದೆ ಎಡಭಾಗ ಸಂಪೂರ್ಣ ಸಜ್ಜು ಗುಜ್ಜಾಗಿತ್ತು.

Darshan Rakshitha Prem

ಬೆಂಗಳೂರಿನಲ್ಲಿರುವ ದರ್ಶನ್ ನಿವಾಸ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳು ಬಹುದಿನಗಳಿಂದಲೂ ಕೇಳಿ ಬರುತ್ತಿದೆ. ಸಂದರ್ಶನವೊಂದರಲ್ಲಿ ನಿರ್ದೇಶಕ ಪ್ರೇಮ್ ವಿರುದ್ಧ ಅವನೇನು ದೊಡ್ಡ ಪುಡಾಂಗ? ಅವನಿಗೆನೂ ಎರಡು ಕೊಂಬಿದೆಯಾ ಎಂದಿದ್ದರು. ಈ ಹೇಳಿಕೆಗೆ ರಕ್ಷಿತಾ ಮತ್ತು ಪ್ರೇಮ್ ಅಸಮಾಧಾನ ಹೊರ ಹಾಕಿದ್ದರು.

ದರ್ಶನ್ ಹಿಂಬಾಲಕರಿಂದ ನನಗೆ ಜೀವ ಬೆದರಿಕೆಯಿದೆ ಎಂದು ನಿರ್ಮಾಪಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು. ದರ್ಶನ್ ಪ್ರಚೋದನೆಯಿಂದಾಗಿ ಅವರ ಹಿಂಬಾಲಕರು, ಅವರ ರೌಡಿಗಳು ನನಗೆ ಮೊಬೈಲ್ ಕರೆ ಹಾಗೂ ವಾಟ್ಸ್ ಆ್ಯಪ್ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ರಕರ್ತ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು.ಮೈಸೂರಿನ ಹೋಟೆಲ್ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು. 

Latest Videos

click me!