ಅತ್ತ ದರ್ಶನ್ ಜೈಲು ಪಾಲು, ವೈರಲ್ ಆಗ್ತಿದೆ ದಿನಕರ್ ತೂಗುದೀಪ ಮುದ್ದಾದ ಫ್ಯಾಮಿಲಿ ಫೋಟೊ

Published : Jul 08, 2024, 05:33 PM IST

ಎಲ್ಲ ಕಡೆ ದರ್ಶನ್ ತೂಗುದೀಪ ಅವರ ಜೈಲು ಸುದ್ದಿಯೇ ಸದ್ದು ಮಾಡುತ್ತಿರುವ ಮಧ್ಯೆ ಇದೀಗ ಅವರ ಸಹೋದರ ದಿನಕರ್ ತೂಗುದೀಪ ಅವರ ಮುದ್ದಾದ ಫ್ಯಾಮಿಲಿ ಫೋಟೋ ವೈರಲ್ ಆಗುತ್ತಿದೆ.   

PREV
17
ಅತ್ತ ದರ್ಶನ್ ಜೈಲು ಪಾಲು,  ವೈರಲ್ ಆಗ್ತಿದೆ ದಿನಕರ್ ತೂಗುದೀಪ ಮುದ್ದಾದ ಫ್ಯಾಮಿಲಿ ಫೋಟೊ

ಕನ್ನಡ ಸಿನಿಮಾ ಲೋಕಕ್ಕೆ ಹಿಟ್ ಚಿತ್ರಗಳನ್ನು ನೀಡಿರುವ ಖ್ಯಾತ ನಿರ್ದೇಶಕ ದಿನಕರ್ ತೂಗುದೀಪ (Dinakar Thoogudeepa). ಇವರ ತಂದೆ ಸ್ಯಾಂಡಲ್ ವುಡ್ ನ ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಮತ್ತು ಸಹೋದರ ದರ್ಶನ್ ತೂಗುದೀಪ ಅನ್ನೋದನ್ನ ವಿಶೇಷವಾಗಿ ಹೇಳುವ ಅಗತ್ಯವೇ ಇಲ್ಲ. 
 

27

ಅಣ್ಣ ದರ್ಶನ್‌ನಂತೆ ನಟನಾಗುವ ಕನಸು ಹೊತ್ತು ಅಯ್ಯೋ ಪಾಂಡು (Ayyo pandu) ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ದಿನಕರ್ ಜನಪ್ರಿಯತೆ ಗಳಿಸಿದ್ದು ನಿರ್ದೇಶಕನಾಗಿ. ಬೆರಳೆಣಿಕೆಯಷ್ಟೇ ಸಿನಿಮಾ ಮಾಡಿದ್ರೂ, ಮಾಡಿದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್. 
 

37

ಜೊತೆ ಜೊತೆಯಲಿ, ನವಗ್ರಹ, ಸಾರಥಿ, ಲೈಫ್ ಜೊತೆ ಒಂದು ಸೆಲ್ಫಿಯಂತಹ ಹಿಟ್ ಚಿತ್ರಗಳನ್ನು ನೀಡಿದ್ದ ದಿನಕರ್. ಅಯ್ಯೋ ಪಾಂಡು, ಬುಲ್ ಬುಲ್, ಚಕ್ರವರ್ತಿ, ಕೈವಾ ಸಿನಿಮಾಗಳಲ್ಲಿ ನಟರಾಗಿಯೂ ಅಭಿನಯಿಸಿದ್ದರು. ನವಗ್ರಹ 2 ಮಾಡುವ ಯೋಚನೆಯಲ್ಲಿಯೂ ಇದ್ದರು ದಿನಕರ್. 
 

47

ಸದ್ಯ ಸಹೋದರ ದರ್ಶನ್ ಅವರ ಕೊಲೆ ಆರೋಪ, ಜೈಲು ವಾಸ, ಪವಿತ್ರ ಗೌಡ (Pavithra Gowda) ಜೊತೆಗಿನ ಸಂಬಂಧದ ಸುದ್ದಿಯೇ ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಈ ಹೊತ್ತಲ್ಲಿ, ದಿನಕರ್ ತೂಗುದೀಪ್ ಅವರ ಮುದ್ದಾದ ಫ್ಯಾಮಿಲಿ ಫೋಟೊ ಸಹ ವೈರಲ್ ಆಗುತ್ತಿದೆ. 
 

57

ಹೌದು, ದಿನಕರ್ ಪತ್ನಿ ಮತ್ತು ಮಕ್ಕಳೊಂದಿಗಿನ ಫೋಟೋ ಇಂಟರ್ನೆಟ್ ನಲ್ಲಿ ಸದ್ದು ಮಾಡ್ತಿದೆ. ದಿನಕರ್ ತೂಗುದೀಪ ಅವರ ಪತ್ನಿ ಹೆಸರು ಮಾನಸ (Manasa Dinakar). ಈ ಜೋಡಿಗಳು 2008 ಆಗಸ್ಟ್ 21 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಸಹ ಇದ್ದಾರೆ. 
 

67

ಮಾನಸ ದಿನಕರ್ ಕೂಡ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡವರು. ದಿನಕರ್ ತೂಗುದೀಪ ನಿರ್ದೇಶನದ ಕೊನೆಯ ಚಿತ್ರ ಲೈಫ್ ಜೊತೆ ಒಂದು ಸೆಲ್ಫಿ (life jothe ondu selfie) ಚಿತ್ರಕ್ಕೆ ಕಥೆ ಬರೆದವರು ಕೂಡ ಮಾನಸ. ಈ ಜೋಡಿ ಜೊತೆಯಾಗಿ ಸರಳವಾಗಿ ಬದುಕು ನಡೆಸುತ್ತಿದ್ದಾರೆ. 
 

77

ಇನ್ನು ದರ್ಶನ್ (Darshan Thoogudeepa) ಕೋಟ್ಯಾಧಿಪತಿಯಾಗಿದ್ದು, ಇವರ ಗೆಳತಿ ಪವಿತ್ರಾ ಗೌಡ ಕೂಡ ಮೂರಂತಸ್ತಿನ ಬಂಗಲೆಯಲ್ಲಿ ನೆಲೆಸುತ್ತಿದ್ದಾರೆ ಎನ್ನುವ ಗಾಳಿ ಸುದ್ದಿ ಹರಿಯುತ್ತಿರುವಾಗ, ದಿನಕರ್ ತೂಗುದೀಪ ಇನ್ನೂ ಬಾಡಿಗೆ ಮನೆಯಲ್ಲಿ ಹೆಂಡ್ತಿ ಮಕ್ಕಳೊಂಡಿಗೆ ವಾಸವಿದ್ದಾರೆ ಎಂದು ಸ್ವತಃ ಅವರೇ ತಿಳಿಸಿದ್ದಾರೆ. ಅಮ್ಮ ಹೇಳಿದಂತೆ, ಯಾರ ಬಳಿಯೂ ಕೈ ಚಾಚದೇ ತಮ್ಮ ದುಡ್ಡಲ್ಲೇ ಮನೆ ಮಾಡಬೇಕೆಂದು ಕನಸು ಕಂಡಿರುವ ದಿನಕರ್, ಈಗಾಗಲೇ ಸೈಟ್ ತೆಗೆದುಕೊಂಡಿದ್ದು, ಮನೆಯನ್ನೂ ಕಟ್ಟಿಸುತ್ತಿದ್ದಾರಂತೆ.  
 

Read more Photos on
click me!

Recommended Stories