ಈಜುಕೊಳದಲ್ಲಿ ಪತಿ ಜೊತೆ ಟಗರು ಪುಟ್ಟಿಯ ಕಲರವ - ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಮಾನ್ವಿತಾ

Published : Jul 08, 2024, 11:47 AM IST

ಚಂದನವನದ ಟಗರು ಪುಟ್ಟಿ ಅಂತಾನೇ ಫೇಮಸ್ ಆಗಿರುವ ನಟಿ ಮಾನ್ವಿತಾ ಕಾಮತ್ ಪತಿ ಜೊತೆ ಕಳೆದ ರೊಮ್ಯಾಂಟಿಕ್ ಕ್ಷಣಗಳ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. 

PREV
17
ಈಜುಕೊಳದಲ್ಲಿ ಪತಿ ಜೊತೆ ಟಗರು ಪುಟ್ಟಿಯ ಕಲರವ - ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಮಾನ್ವಿತಾ

ಈಜುಕೊಳದಲ್ಲಿ ಪತಿಯೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪತಿ ಅರುಣ್ ಜೊತೆ ಬಾಲಿಗೆ ತೆರಳಿರುವ ಮಾನ್ವಿತಾ ಕಾಮತ್ ಕ್ವಾಲಿಟಿ ಸಮಯ ಕಳೆಯುತ್ತಿದ್ದಾರೆ.

27

ಮದುವೆ ಬಳಿಕ ಖಾಸಗಿ ಜೀವನಕ್ಕೆ ಒತ್ತು ನೀಡಿರುವ ಮಾನ್ವಿತಾ ಕಾಮತ್ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸೋದು ವಿರಳವಾಗಿದೆ. ಪತಿ ಹಾಗೂ ಕುಟುಂಬಕ್ಕೆ ಮಾನ್ವಿತಾ ಕಾಮತ್ ಮೊದಲ ಆದ್ಯತೆ ನೀಡುತ್ತಿದ್ದಾರೆ.

37

ಬಾಲಿಯ ರೆಸ್ಟೋರೆಂಟ್ ವೊಂದರ ಪ್ರೈವೇಟ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಾನ್ವಿತಾ ಮತ್ತು ರೊಮ್ಯಾಂಟಿಕ್ ಕ್ಷಣಗಳನ್ನು ಕಳೆದಿದ್ದಾರೆ. ಈಜುಕೊಳದ ಒಂದು ಬದಿಯಲ್ಲಿ ಮಾನ್ವಿತಾ ಕುಳಿತಿದ್ದರೆ, ಅರುಣ್ ಈಜುತ್ತಾ ಪತ್ನಿಗಾಗಿ ಆಹಾರ ತೆಗೆದುಕೊಂಡು ಬರುತ್ತಿರೋದು ಕಾಣಬಹುದು.

47

ಇದರ ಜೊತೆ ಬಾಲಿಯಲ್ಲಿ ಪ್ರವಾಸಿ ತಾಣಗಳಿಗೆ ಮಾನ್ವಿತಾ ಮತ್ತು ಅರುಣ್ ಭೇಟಿ ನೀಡುತ್ತಿದ್ದಾರೆ. ಅಲ್ಲಿ ತೆಗೆದುಕೊಂಡ ಫೋಟೋ ಹಾಗೂ ವಿಡಿಯೋಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

57

ಪೋಷಕರು ತೋರಿಸಿದ ಹುಡುಗನನ್ನೇ ಮಾನ್ವಿತಾ ಕಾಮತ್ ಮದುವೆಯಾಗಿದ್ದಾರೆ. ಮಾನ್ವಿತಾ ಮದುವೆ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಕೊಂಕಣಿ ಸಂಪ್ರದಾಯದಂತೆ ನಡೆದಿತ್ತು. ಮದುವೆಗೆ ಎರಡು ಕುಟುಂಬದ ಆತ್ಯಾಪ್ತರು ಹಾಗೂ ಸಿನಿ ಬಳಗದ ಆಪ್ತ ವಲಯದ ಸ್ನೇಹಿತರನ್ನು ಆಹ್ವಾನಿಸಲಾಗಿತ್ತು.

67

ಮದುವೆ ಫೋಟೋ ಹಂಚಿಕೊಂಡಿದ್ದ ಮಾನ್ವಿತಾ ಕಾಮತ್, ಇದು ಪತಿ ಕೊಡಿಸಿದ ಮೊದಲ ಸೀರೆ ಎಂದು ಹೇಳಿದ್ದರು. ಗಂಡ ಕೊಡಿಸುವ ಮೊದಲ ಸೀರೆ ಮನಸ್ಸಿಗೆ ತುಂಬಾನೇ ಹತ್ತಿರವಾಗಿರುತ್ತದೆ, ವಿಶೇಷ ಜಾಗ ಪಡೆಯುತ್ತದೆ ಎಂದು ಬರೆದುಕೊಂಡಿದ್ದಾರೆ.

77

ಇದೀಗ ಬಾಲಿಯಲ್ಲಿಯ ಮಾನ್ವಿತಾ ಕಾಮತ್ ಮತ್ತು ಅರುಣ್ ಫೋಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ನಿಮ್ಮ ಜೋಡಿ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಹಾರೈಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories