ಅವಕಾಶದ ಹೆಸರಲ್ಲಿ ಮಂಚಕ್ಕೆ ಕರೆಯುತ್ತಾರೆ: ಚಿತ್ರರಂಗದ ಕರಾಳತೆಯನ್ನು ಬಿಚ್ಚಿಟ್ಟ ಸಂಯುಕ್ತಾ ಹೆಗಡೆ

Published : Nov 06, 2025, 12:23 AM IST

ನಾಯಕಿಯಾಗಿ ನಿಮ್ಮ ಹೆಸರು ಘೋಷಣೆಯಾಗಿರುತ್ತದೆ. ನಿಮ್ಮ ಮನೆಮಂದಿ, ಸ್ನೇಹಿತರು, ಇಂಡಸ್ಟ್ರಿಯವರೆಲ್ಲ ನಿಮ್ಮನ್ನು ಅಭಿನಂದಿಸಿರುತ್ತಾರೆ. ಇನ್ನೇನು ಪ್ರಾಜೆಕ್ಟ್‌ ಶುರುವಾಗಬೇಕು ಅನ್ನುವಷ್ಟರಲ್ಲಿ ನಿಮ್ಮನ್ನು ಪಲ್ಲಂಗಕ್ಕೆ ಕರೆಯುತ್ತಾರೆ ಎಂದರು ಸಂಯುಕ್ತಾ ಹೆಗಡೆ.

PREV
16
ಕಾಸ್ಟಿಂಗ್‌ ಕೌಚ್‌

‘ಕಿರಿಕ್‌ ಪಾರ್ಟಿ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ನಟಿ ಸಂಯುಕ್ತಾ ಹೆಗಡೆ ಕಾಸ್ಟಿಂಗ್‌ ಕೌಚ್‌ ಬಗ್ಗೆ ದನಿ ಎತ್ತಿದ್ದಾರೆ. ಪಾಡ್‌ಕಾಸ್ಟ್‌ ಒಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ನೀವು ಸಿನಿಮಾ ಪ್ರಾಜೆಕ್ಟ್‌ ಒಂದರಲ್ಲಿ ಅವಕಾಶ ಪಡೆಯುತ್ತೀರಿ ಅಂತಿಟ್ಟುಕೊಳ್ಳಿ.

26
ಪಲ್ಲಂಗಕ್ಕೆ ಕರೆಯುತ್ತಾರೆ

ನಾಯಕಿಯಾಗಿ ನಿಮ್ಮ ಹೆಸರು ಘೋಷಣೆಯಾಗಿರುತ್ತದೆ. ನಿಮ್ಮ ಮನೆಮಂದಿ, ಸ್ನೇಹಿತರು, ಇಂಡಸ್ಟ್ರಿಯವರೆಲ್ಲ ನಿಮ್ಮನ್ನು ಅಭಿನಂದಿಸಿರುತ್ತಾರೆ. ನೀವು ಖುಷಿಯಲ್ಲಿ ತೇಲುತ್ತಿರುತ್ತೀರಿ. ಇನ್ನೇನು ಪ್ರಾಜೆಕ್ಟ್‌ ಶುರುವಾಗಬೇಕು ಅನ್ನುವಷ್ಟರಲ್ಲಿ ನಿಮ್ಮನ್ನು ಪಲ್ಲಂಗಕ್ಕೆ ಕರೆಯುತ್ತಾರೆ.

36
ಎಲ್ಲಾ ಕಡೆಯೂ ಇದೇ ಸ್ಥಿತಿ

ಒಪ್ಪಿದರೆ ಪ್ರಾಜೆಕ್ಟ್‌ನಲ್ಲಿ ಮುಂದುವರಿಕೆ, ಇಲ್ಲವಾದರೆ ನಿಮ್ಮ ಜಾಗಕ್ಕೆ ಇನ್ನೊಬ್ಬ ನಾಯಕಿ ಬರುತ್ತಾಳೆ ಎಂದು ಚಿತ್ರರಂಗದಲ್ಲಿನ ಕರಾಳತೆಯನ್ನು ವಿವರಿಸಿದ್ದಾರೆ. ದಕ್ಷಿಣ ಭಾರತೀಯ ಸಿನಿಮಾಗಳಿಂದ ಬಾಲಿವುಡ್‌ ಸಿನಿಮಾಗಳವರೆಗೆ ಎಲ್ಲಾ ಕಡೆಯೂ ಇದೇ ಸ್ಥಿತಿ ಇದೆ.

46
ವೃತ್ತಿಪರತೆ ಇಲ್ಲದ ನಟಿ ಎಂಬ ಹಣೆಪಟ್ಟಿ

ನಿರ್ಮಾಪಕ, ನಾಯಕ ಅಂತಲ್ಲ, ಅನೇಕರು ಈ ರೀತಿ ಹೆಣ್ಣುಮಕ್ಕಳಿಗೆ ಅವಕಾಶ ನೀಡುವ ಹೆಸರಲ್ಲಿ ದೌರ್ಜನ್ಯ ಮಾಡುತ್ತಾರೆ. ನಾನು ಇಂಥದ್ದಕ್ಕೆ ನೋ ಅಂದಿದ್ದಕ್ಕೆ ನನಗೆ ವೃತ್ತಿಪರತೆ ಇಲ್ಲದ ನಟಿ ಎಂಬ ಹಣೆಪಟ್ಟಿ ಬಂತು.

56
ನನ್ನ ಘನತೆಯನ್ನು ಎಲ್ಲರೂ ಗೌರವಿಸಿದ್ದಾರೆ

ಆದರೆ ನಾನು ಈವರೆಗೆ ನಟಿಸಿದ ಹತ್ತು ಸಿನಿಮಾ, ರಿಯಾಲಿಟಿ ಶೋಗಳಲ್ಲಿ ನನ್ನ ಘನತೆಯನ್ನು ಎಲ್ಲರೂ ಗೌರವಿಸಿದ್ದಾರೆ. ನನ್ನ ಗೌರವಕ್ಕೆ ಕುಂದುಬರುವ ಕಡೆ ನಾನು ಕೆಲಸ ಮಾಡಿಲ್ಲ.

66
ಎಲ್ಲಕ್ಕಿಂತ ಆತ್ಮಗೌರವ ಮುಖ್ಯ

ಆತ್ಮಗೌರವ ಎಲ್ಲಕ್ಕಿಂತ ಮುಖ್ಯ ಎಂದೂ ಸಂಯುಕ್ತಾ ಹೇಳಿದ್ದಾರೆ. ಜೊತೆಗೆ ಆರಂಭ ಕಾಲದಲ್ಲಿ ತನ್ನನ್ನು ಪೊರೆದ ರಕ್ಷಿತ್‌ ಶೆಟ್ಟಿ, ರಿಷಬ್‌ ಶೆಟ್ಟಿ ಬಗೆಗೆ ಅಭಿಮಾನದಿಂದ ಮಾತನಾಡಿದ್ದಾರೆ.

Read more Photos on
click me!

Recommended Stories