'ಕಿರಿಕ್ ಪಾರ್ಟಿ'ಯ ಸಂಯುಕ್ತಾ ಹೆಗ್ಡೆ ಹಲವು ವಿಷಯಗಳಿಗೆ ಕಿರಿಕ್ ಮಾಡಿಕೊಂಡು ಕಿರಿಕ್ ಹುಡುಗಿ ಎಂದೂ ಎನಿಸಿಕೊಂಡಿದ್ದರು. ಅವರು ತಮ್ಮ ಬದುಕನ್ನು ಭಗವದ್ಗೀತೆ ಬದಲಾಯಿಸಿದ ಬಗ್ಗೆ ಮಾತನಾಡಿದ್ದಾರೆ.
ಸಂಯುಕ್ತಾ ಬೆಂಗಳೂರಿನಲ್ಲಿ ಕ್ರಿಶ್ಚಿಯನ್ ತಾಯಿ ಮತ್ತು ಹಿಂದೂ ಬ್ರಾಹ್ಮಣ ತಂದೆಗೆ ಜನಿಸಿದರು. ಆಕೆಯ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಕೆಳಗಿನಮನೆ. ಸಂಯುಕ್ತಾ ತನ್ನ ಶಾಲಾ ಶಿಕ್ಷಣವನ್ನು ಸೇಂಟ್ ಪಾಲ್ಸ್ ಇಂಗ್ಲಿಷ್ ಶಾಲೆಯಲ್ಲಿ ಮಾಡಿದರು.
ಸಂಯುಕ್ತಾ ಹೇಳುವಂತೆ, 'ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ನನ್ನ ತಾಯಿ ಕ್ರಿಶ್ಚಿಯನ್ ಮತ್ತು ತಂದೆ ಬ್ರಾಹ್ಮಣ. ನಾವು ಒಂದೇ ಮನೆಯಲ್ಲಿ ಎರಡು ಧರ್ಮಗಳನ್ನು ಅನುಸರಿಸುತ್ತೇವೆ. ನಾನು ಮಿಶ್ರ ತಳಿ!'
ಮನೋವಿಜ್ಞಾನ ಮತ್ತು ಪತ್ರಿಕೋದ್ಯಮದಲ್ಲಿ ಬಿಎ ವ್ಯಾಸಂಗ ಮಾಡಿರುವ ಸಂಯುಕ್ತಾ 16ನೇ ವಯಸ್ಸಿನಲ್ಲೇ ಕಿರಿಕ್ ಪಾರ್ಟಿ ಚಿತ್ರದಲ್ಲಿ ಅಭಿನಯಿಸಿ ಹೆಸರು ಮಾಡಿದರು.
ನಂತರ ಕೆಲ ಚಿತ್ರಗಳಲ್ಲಿ ಅದೃಷ್ಟ ಪರೀಕ್ಷಿಸಿದರೂ ಅದು ಆಕೆಯ ಕೈ ಹಿಡಿಯಲಿಲ್ಲ. ಸಧ್ಯ 5 ವರ್ಷಗಳ ಬಳಿಕ ನಟಿ 'ಕ್ರೀಂ' ಚಿತ್ರದ ಮೂಲಕ ನಟನೆಗೆ ಮರಳಿದ್ದಾರೆ.
ವೃತ್ತಿಪರ ನೃತ್ಯಗಾರ್ತಿಯೂ ಆಗಿರುವ ಸಂಯುಕ್ತಾ ತಮ್ಮ ಧಾರ್ಮಿಕ ಮನೋಭಾವದ ಬಗ್ಗೆ ಇತ್ತೀಚೆಗೆ ರ್ಯಾಪಿಡ್ ರಶ್ಮಿ ಜೊತೆ ಮಾತನಾಡಿದ್ದಾರೆ.
ಅವರು ಜೀವನದ 18 ವರ್ಷಗಳ ಕಾಲ ಕ್ರೈಸ್ತ ಧರ್ಮ ಅನುಸರಿಸಿದರು. ನಂತರ ದೇವರಲ್ಲಿ ನಂಬಿಕೆಯನ್ನೇ ಕಳೆದುಕೊಂಡು ಏಥಿಸ್ಟ್ ಆಗಿದ್ದರಂತೆ.
ಆದರೆ, ಮನೆಯ ಸಣ್ಣ ಸಣ್ಣ ರಗಳೆಗಳಿಗೂ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಿದ್ದ ಸಂಯುಕ್ತಾ ಕಡೆಗೊಂದು ದಿನ ಭಗವದ್ಗೀತೆಯನ್ನು ಓದಿದರಂತೆ.
ಈ ಓದು ಅವರ ನಂಬಿಕೆಯನ್ನು ಸಂಪೂರ್ಣ ಬದಲಾಯಿಸಿತಂತೆ. ಅಷ್ಟೇ ಅಲ್ಲ, ಅವರ ಮನಸ್ಸನ್ನು ಸಾಕಷ್ಟು ಹಿತವಾಗಿಟ್ಟುಕೊಳ್ಳಲು ಸಹಾಯ ಮಾಡಿತು.
ಅವರು ಈಗ ತಾವು ಶಿವನ ಭಕ್ತೆ ಎಂದು ಹೇಳಿಕೊಳ್ಳುತ್ತಾರೆ. ಜೊತೆಗೆ, ಈ ವಿಷಯವಾಗಿ ತಮ್ಮ ಜೀವನದಲ್ಲಾದ 2 ಪವಾಡಗಳನ್ನು ಹಂಚಿಕೊಂಡಿದ್ದಾರೆ.
ಒಮ್ಮೆ ಅವರು ಗೆಳೆಯರೊಂದಿಗೆ ಕೇದಾರನಾಥಕ್ಕೆ ಹೊರಟಿದ್ದರಂತೆ. ಕಡೆ ಕ್ಷಣದಲ್ಲಿ ಯಾತ್ರೆ ಕ್ಯಾನ್ಸಲ್ ಆಯಿತು. ಇದರಿಂದ ಅರು ಬೇಜಾರು ಮಾಡಿಕೊಂಡಿರುವಾಗಲೇ, ಹಲವು ಸಮಯದಿಂದ ಸಂಪರ್ಕದಲ್ಲಿರದ ಮತ್ತೊಬ್ಬ ಗೆಳೆಯರು ಕರೆ ಮಾಡಿ, ಕೇದಾರನಾಥಕ್ಕೆ ಹೊರಟಿದ್ದೇವೆ, ಬರ್ತೀಯಾ ಕೇಳಿದರಂತೆ. ಕಡೆಗೂ ಅವರು ಶಿವನ ದರ್ಶನ ಮಾಡಿ ಬಂದರು.
ಇನ್ನೊಂದು ಪವಾಡ ಎಂದರೆ, ಕೇದಾರನಾಥಕ್ಕೆ ಹೋದಾಗ ಒಳ ಹೋಗಲು ಫೋನ್ ಸ್ಕ್ಯಾನ್ ಮಾಡಬೇಕಿತ್ತು. ಆದರೆ, ಅದಾಗಲೇ ಅರ ಫೋನ್ ಡೆಡ್ ಆಗಿತ್ತು. ಏನಪ್ಪಾ ಮಾಡುವುದು ಎಂದುಕೊಂಡಾಗಲೇ ಫೋನ್ ಆನ್ ಆಗಿ ಸ್ಕ್ಯಾನ್ ಮಾಡಲು ಸಾಧ್ಯವಾಯಿತು ಎಂದಿದ್ದಾರೆ.