ಕಡಲನ್ನು ಹೆಚ್ಚು ಗೌರವಿಸಲು ಕಲಿತೆ: Rukmini Vasanth

Published : Sep 23, 2022, 10:37 AM IST

ಬಾನದಾರಿಯಲ್ಲಿ ಚಿತ್ರದಲ್ಲಿ ಸರ್ಫಿಂಗ್‌ ಮಾಡುವ ಪಾತ್ರ.  ಸ್ವಿಮ್ಮಿಂಗ್ ಟೀಚರ್ ಪಾತ್ರ ಹೇಗಿದೆ ಗೊತ್ತಾ?

PREV
17
ಕಡಲನ್ನು ಹೆಚ್ಚು ಗೌರವಿಸಲು ಕಲಿತೆ: Rukmini Vasanth

 ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ಪ್ಯಾಶನೇಟ್‌ ಪ್ರೇಮಿಯಾಗಿ ಕಾಣಿಸಿಕೊಂಡಿರುವ ರುಕ್ಮಿಣಿ ವಸಂತ್‌ ಕೊಂಚ ಗೆಟಪ್‌ ಬದಲಿಸಿದ್ದಾರೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕನಾಗಿ ನಟಿಸುತ್ತಿರುವ  ರುಕ್ಮಿಣಿ.

27

 ‘ಬಾನದಾರಿಯಲ್ಲಿ’ ಚಿತ್ರದಲ್ಲಿ ಸರ್ಫಿಂಗ್‌ ಮಾಡುವ ಪಾತ್ರದಲ್ಲಿ ಪೂರ್ತಿ ವಿಭಿನ್ನವಾಗಿ ಕಾಣಿಸಿಕೊಂಡಿರುವ ರುಕ್ಮಿಣಿ ಸಿನಿಮಾ ಪ್ರೇಮಿಗಳ ಮನಗೆಲ್ಲುವಂತೆ ಕಾಣಿಸುತ್ತಿದ್ದಾರೆ. ಪ್ರೀತಂ ಗುಬ್ಬಿ ನಿರ್ದೇಶನದ ಈ ಸಿನಿಮಾದ ಶೂಟಿಂಗ್‌ ಫೋಟೋಗಳು ಅಚ್ಚರಿ ಹುಟ್ಟಿಸಿವೆ.

37

ಈ ಫೋಟೋ ಹಿಂದಿನ ಕತೆ ರುಕ್ಮಿಣಿಯವರ ಮಾತಲ್ಲಿ ಕೇಳುವುದೇ ಸಂತೋಷ. ‘ಬಾನ ದಾರಿಯಲ್ಲಿ ಚಿತ್ರದ ನನ್ನ ಪಾತ್ರ ಸ್ವಲ್ಪ ಅಡ್ವೆಂಚರಸ್‌ ಆಗಿರುವ ಪಾತ್ರ. ಸ್ವಿಮ್ಮಿಂಗ್‌ ಟೀಚರ್‌ ನಾನು. ಫ್ರೀ ಟೈಮಲ್ಲಿ ಸರ್ಫಿಂಗ್‌ ಮಾಡುವ ಅಭ್ಯಾಸ. 

47

 ಆದರೆ ನನಗೆ ಸರ್ಫಿಂಗ್‌ ಗೊತ್ತಿರಲಿಲ್ಲ. ಮೊದಲಿನಿಂದಲೂ ನಾನು ಸ್ಪೋಟ್ಸ್‌ರ್‍ ಇಷ್ಟಪಡುವ ಹುಡುಗಿಯೇನೂ ಅಲ್ಲ. ಈ ಚಿತ್ರಕ್ಕಾಗಿ ಚಿತ್ರತಂಡ ನನಗೆ ಮಂಗಳೂರಿನಲ್ಲಿ ಸರ್ಫಿಂಗ್‌ ಕೋಚಿಂಗ್‌ಗೆ ಸೇರಿಸಿತು. ಆರಂಭದಲ್ಲಿ ತುಂಬಾ ಕಷ್ಟವೂ ಆಯಿತು. 

57

ಭಯವೂ ಇತ್ತು. ಬ್ಯಾಲೆನ್ಸ್‌ ಸಿಗುವವರೆಗೆ ಪ್ರತೀ ಸಲವೂ ಬೀಳುತ್ತಿದ್ದೆ. ಮೂರು ನಾಲ್ಕು ದಿನ ಉಪ್ಪು ನೀರು ಕುಡಿದ ಮೇಲೆ ಸ್ವಲ್ಪ ಬ್ಯಾಲೆನ್ಸ್‌ ಸಾಧಿಸಿದೆ. ಈ ಪ್ರಕ್ರಿಯೆಯಲ್ಲಿ ನಾನು ಕಡಲನ್ನು ಹೆಚ್ಚು ಗೌರವಿಸುವುದನ್ನು ಕಲಿತೆ. 

67

ಕಡಲನ್ನು ಗೌರವಿಸಿದರೆ ಕಡಲು ಕೈ ಹಿಡಿಯುತ್ತದೆ. ಈಗ ಭಯವಿಲ್ಲದೆ ಸರ್ಫಿಂಗ್‌ ಮಾಡುವಷ್ಟುಧೈರ್ಯ ಬಂದಿದೆ. ಶೂಟಿಂಗ್‌ ಮುಗಿದಿದೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲಿ ಜಾಸ್ತಿ ತೀವ್ರವಾಗಿರುವ ಪಾತ್ರ ನನ್ನದು. 

77

ಇಲ್ಲಿ ಸ್ವಲ್ಪ ಬಬ್ಲಿ ಪಾತ್ರ. ಅಲ್ಲಿಂದ ಇಲ್ಲಿಗೆ ಬಂದಾಗ ಒಂಥರಾ ನಿರಾಳ ಭಾವ ಆವರಿಸಿತ್ತು. ಬೇರೆ ಬೇರೆ ಥರದ ಪಾತ್ರದಲ್ಲಿ ನಟಿಸುವ ಅವಕಾಶ ಈಡೇರಿದ ಸಂತೋಷವಾಯಿತು. ಗಣೇಶ್‌ ಸರ್‌ ಜೊತೆ ನಟಿಸಿದ್ದು ಅಪೂರ್ವ ಅನುಭವ’ ಎನ್ನುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories