'ಸಪ್ತಸಾಗರದಾಚೆ ಎಲ್ಲೋ' ಸಹನಟ ರಕ್ಷಿತ್ ಶೆಟ್ಟಿ ಅವರ ವಿಭಿನ್ನ ವ್ಯಕ್ತಿತ್ವದ ಬಗ್ಗೆ ನಟಿ ರುಕ್ಮಿಣಿ ವಸಂತ್ ಮಾತನಾಡಿದ್ದಾರೆ. ಸಿನಿಮಾ ಶೂಟಿಂಗ್ನಲ್ಲಿ ಮಧ್ಯರಾತ್ರಿ 2 ಗಂಟೆಗೆ ನಡೆದ ಘಟನೆಯ ಬಗ್ಗೆಯೂ ಅವರು ವಿವರಿಸಿದ್ದಾರೆ.
ಸ್ಯಾಂಡಲ್ವುಡ್ ಸ್ಟಾರ್ ನಟರಾದ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅವರ ಸಪ್ತಸಾಗರದಾಚೆ ಎಲ್ಲೋ (Sapta Sagaradaache Ello) ಎ ಮತ್ತು ಬಿ ಸೈಡ್ಗಳು ಬ್ಲಾಕ್ಬಸ್ಟರ್ ಆಗಿದ್ದ ಸಿನಿಮಾ. ಇದರಿಂದ ಅವರಿಬ್ಬರ ಕೆಮೆಸ್ಟ್ರಿಯಲ್ಲಿ ಕೋಟ್ಯಂತರ ಮಂದಿ ಇಷ್ಟಪಟ್ಟಿದ್ದಾರೆ. ಈ ಸಿನಿಮಾದ ಬಳಿಕ ರುಕ್ಮಿಣಿ ವಸಂತ್ ಅವರಿಗೆ ಹಲವು ಅವಕಾಶಗಳು ಅರಸಿ ಬಂದದ್ದೂ ನಿಜ.
26
ಸೈಲೆಂಟ್ ಆಗಿರೋ ರಕ್ಷಿತ್ ಶೆಟ್ಟಿ
ಅಷ್ಟಕ್ಕೂ ರಕ್ಷಿತ್ ಶೆಟ್ಟಿ ಅವರು, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ , ಎರಡು ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡವರು. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಎರಡೂ ಸೈಡ್ಗಳು ರಿಲೀಸ್ ಆದ ಮೇಲೆ ಸ್ವಲ್ಪ ಸೈಲೆಂಟ್ ಆಗಿದ್ದಾರೆ. ಅವರ ಬಹುನಿರೀಕ್ಷಿತ ರಿಚರ್ಡ್ ಆ್ಯಂಟೋನಿ ಚಿತ್ರೀಕರಣವನ್ನು ಯಾವಾಗ ಪ್ರಾರಂಭಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ನಡುವೆಯೇ Rapid Rashmi ಯುಟ್ಯೂಬ್ ಚಾನೆಲ್ಗೆ ರುಕ್ಮಿಣಿ (Rukmini Vasanth) ಅವರು ನಟ ರಕ್ಷಿತ್ ಶೆಟ್ಟಿ ಅವರ ಇನ್ನೊಂದು ಮುಖವನ್ನೂ ಪರಿಚಯಿಸಿದ್ದಾರೆ.
36
ರಕ್ಷಿತ್ ಕುರಿತು ರುಕ್ಮಿಣಿ ವಸಂತ್
ರಕ್ಷಿತ್ ಅವರು ತುಂಬಾ ಡಿಫರೆಂಟ್. ಅವರು ತಮ್ಮ ಪ್ರತಿಯೊಂದು ಸಿನಿಮಾವನ್ನೂ ಆಧ್ಯಾತ್ಮಿಕ ದೃಷ್ಟಿಯಲ್ಲಿ ನೋಡುತ್ತಾರೆ. ತಮ್ಮ ಸಿನಿಮಾಕ್ಕಾಗಿ ತುಂಬಾ ಸುಂದರವಾಗಿ ತಯಾರಿ ನಡೆಸುತ್ತಾರೆ. ಸಿನಿಮಾ ಬಿಡುಗಡೆಯಾದಾಗ ದುಡ್ಡು, ಮಾರ್ಕೆಟ್ ಎಲ್ಲಾ ನೋಡುವುದು ಸಾಮಾನ್ಯ. ಆದರೆ, ಅವರು ನೋಡುವ ದೃಷ್ಟಿಯೇ ಬೇರೆ. ಸ್ಪಿರಿಚ್ಯುವಲ್ ಆಗಿ ನೋಡುವುದರಿಂದ ಅವರು ಈ ಮಟ್ಟಿನ ಯಶಸ್ಸನ್ನು ಗಳಿಸಿದ್ದಾರೆ ಎಂದಿದ್ದಾರೆ ರುಕ್ಮಿಣಿ ವಸಂತ್
ಇದೇ ವೇಳೆ ಮಧ್ಯರಾತ್ರಿ 2 ಗಂಟೆಗೆ ನಡೆದ ಘಟನೆಯೊಂದನ್ನೂ ಈ ಸಂದರ್ಭದಲ್ಲಿ ಅವರು ನೆನಪು ಮಾಡಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ (Rakshit Shetty) ಅವರು ಎಷ್ಟೊಂದು ಕೂಲ್ ಆಗಿ ಇರುತ್ತಾರೆ, ಪರಿಸ್ಥಿತಿಯನ್ನು ಹೇಗೆ ಮ್ಯಾನೇಜ್ ಮಾಡುತ್ತಾರೆ ಎನ್ನುವ ಬಗ್ಗೆ ಅವರು ತಿಳಿಸಿದ್ದಾರೆ.
56
ಫೋಟೋ ಬ್ಯಾನ್
ಸಾಮಾನ್ಯವಾಗಿ ಶೂಟಿಂಗ್ನಲ್ಲಿ ಸಿನಿಮಾದ ಕಾಸ್ಟ್ಯೂಮ್ನಲ್ಲಿ ಇರುವ ಕಾರಣ, ಅದು ಲೀಕ್ ಆಗುತ್ತದೆ ಎನ್ನುವ ಕಾರಣಕ್ಕೆ ಫೋಟೋ ಕೊಡುವಂತಿಲ್ಲ. ಇದು ನಮಗೆ ಇರುವ ಕಡ್ಡಾಯ ನಿಯಮ. ಆದರೆ ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಶೂಟಿಂಗ್ ವೇಳೆ ಮಧ್ಯರಾತ್ರಿ 2 ಗಂಟೆಗೆ ಬಂದ ಅಭಿಮಾನಿಯೊಬ್ಬ ಫೋಟೋಗಾಗಿ ವಿಪರೀತ ಗಲಾಟೆ ಮಾಡಿದ. ಫೋಟೋ ಕೊಡಲಿಲ್ಲ ಎನ್ನುವ ಕಾರಣಕ್ಕೆ ಸಿಕ್ಕಾಪಟ್ಟೆ ರೇಗಾಡಿದ ಎಂದು ನೆನಪಿಸಿಕೊಡಿದ್ದಾರೆ.
66
ಕೂಲ್ ಮನುಷ್ಯ
ಆ ಬಳಿಕ, ರಕ್ಷಿತ್ ಶೆಟ್ಟಿ ಅವರು ಅಷ್ಟು ಬಿಜಿ ಇದ್ದರು ಕೂಡ ಕಾಮ್ ಆಗಿ ಆ ವ್ಯಕ್ತಿಯ ಬಳಿ ಅರ್ಧ ಗಂಟೆ ಚರ್ಚಿಸಿ ಇರುವ ವಿಷಯವನ್ನು ಮನವರಿಕೆ ಮಾಡಿಕೊಟ್ಟರು. ಪರಿಸ್ಥಿತಿಯನ್ನು ಅಷ್ಟು ಕೂಲ್ ಆಗಿ ಹ್ಯಾಂಡಲ್ ಮಾಡಿದರು. ಅವರು ಕೇವಲ ಒಬ್ಬ ನಟ ಮಾತ್ರವಲ್ಲ, ವಿಭಿನ್ನ ರೀತಿಯ ವ್ಯಕ್ತಿತ್ವವೂ ಅವರಲ್ಲಿ ಇರುವುದನ್ನು ಅವರಿಂದ ನೋಡಿ ಎಲ್ಲರೂ ಕಲಿಯಬೇಕು ಎಂದು ಶ್ಲಾಘಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.