ಸಪ್ತ ಸಾಗರ ಬ್ಯೂಟಿ ರುಕ್ಮಿಣಿ ವಸಂತ್ ಬೋಲ್ಡ್ ಲುಕ್ ವೈರಲ್… ಚೈತ್ರಾ ಆಚಾರ್ ಸಹವಾಸದ ಮಹಿಮೆ ಎಂದ ಫ್ಯಾನ್ಸ್!

Published : Oct 19, 2024, 04:33 PM ISTUpdated : Oct 20, 2024, 08:37 AM IST

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಮಧ್ಯಮ ವರ್ಗದ ಹುಡುಗಿ ಪ್ರಿಯಾ ಪಾತ್ರದಲ್ಲಿ ಮಿಂಚಿ, ಕನ್ನಡಿಗರ ಮನಸ್ಸು ಕದ್ದಿದ್ದ ಚೆಲುವೆ ರುಕ್ಮಿಣಿ ವಸಂತ್, ತುಂಬಾನೆ ಸ್ಟೈಲಿಶ್ ಆಗಿ ಪೋಸ್ ನೀಡಿದ್ದು, ಅಭಿಮಾನಿಗಳಿಗೆ ಮಾತ್ರ ನಟಿ ಫೋಟೊ ಬೇಸರ ತಂದಿದೆ.   

PREV
17
ಸಪ್ತ ಸಾಗರ ಬ್ಯೂಟಿ ರುಕ್ಮಿಣಿ ವಸಂತ್ ಬೋಲ್ಡ್ ಲುಕ್ ವೈರಲ್… ಚೈತ್ರಾ ಆಚಾರ್ ಸಹವಾಸದ ಮಹಿಮೆ ಎಂದ ಫ್ಯಾನ್ಸ್!

ನಿಜವಾದ ಪ್ರೀತಿ ಅಂದ್ರೆ ಹೇಗಿರಬೇಕು ಅನ್ನೋದನ್ನ ತುಂಬಾನೆ ಮಧುರವಾಗಿ, ಇಡೀ ದೇಶಕ್ಕೆ ತಿಳಿಸಿ ಹೇಳಿದ ಸಿನಿಮಾ ಅಂದ್ರೆ ಅದು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ (Rakshith Shetty) ಮತ್ತು ರುಕ್ಮಿಣಿ ವಸಂತ್ ಜೋಡಿ, ಕನ್ನಡಿಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಇಬ್ಬರ ನೈಜ್ಯ ಅಭಿನಯ, ಪ್ರೀತಿಗಾಗಿ ಹಾತೊರೆಯುವ ರೀತಿ, ಪ್ರೀತಿ ಅಂದ್ರೆ ಹೀಗೂ ಇರುತ್ತಾ ಎನ್ನುವಷ್ಟು ಸುಂದರವಾದ ಕಥಾ ಹಂದರ ವೀಕ್ಷಕರ ಮನಸ್ಸನ್ನ ಮುಟ್ಟಿತ್ತು. 
 

27

ಸಪ್ತ ಸಾಗರದಾಚೆ ಎಲ್ಲೋ (Saptha Sagaradache Ello) ಸಿನಿಮಾದಲ್ಲಿ ಸಿಂಪಲ್ ಆಗಿ ಸಲ್ವಾರ್ ಸೂಟ್ ಧರಿಸಿ, ಮಧ್ಯಮ ವರ್ಗದ ಹುಡುಗಿಯಾಗಿ, ಕಣ್ಣಿನಲ್ಲೇ ಮಾತನಾಡಿದ ಪ್ರಿಯಾ ವೀಕ್ಷಕರ ಹೃದಯಕ್ಕೆ ತಲುಪಿದ್ದರು ಅನ್ನೋದು ನಿಜಾ. ಹಾಗಾಗಿ ವೀಕ್ಷಕರು ನಿಜ ಜೀವನದಲ್ಲೂ ರುಕ್ಮಿಣಿ ವಸಂತ್ ಪ್ರಿಯಾ ಆಗಿರಬೇಕೆಂದು ಬಯಸ್ತಿದ್ದಾರೆ. 
 

37

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರುಕ್ಮಿಣಿ ವಸಂತ್ (Rukmini Vasanth) ಹೆಚ್ಚಾಗಿ ಟ್ರೆಡಿಶನಲ್ ಲುಕ್ ನಲ್ಲೇ ಫೋಟೊ ಶೂಟ್ ಮಾಡಿಸಿರುತ್ತಾರೆ. ಕಾರ್ಯಕ್ರಮಗಳಲ್ಲೂ, ಫೋಟೊಶೂಟ್ ಗಳಲ್ಲೂ ನಟಿ ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಆಗೋಮ್ಮೆ ಈಗೊಮ್ಮೆ ಮಾಡರ್ನ್ ಆಗಿ ಕಾಣಿಸುತ್ತಾರೆ. ಆದರೆ ಯಾವತ್ತೂ ಬೋಲ್ಡ್ ಎನಿಸುವಂತೆ ಡ್ರೆಸ್ ಮಾಡಿದ್ದೇ ಇಲ್ಲ. 
 

47

ಆದರೆ ಇದೀಗ ನಟಿ ತಮ್ಮ ಇನ್’ಸ್ಟಾಗ್ರಾಂ ಪೇಜ್ ನಲ್ಲಿ ಹೊಸ ಫೋಟೊಗಳನ್ನು ಅಪ್ ಲೋಡ್ ಮಾಡಿದ್ದು, ಕೆಲವು ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ನಟಿಯ ಹೊಸ ಲುಕ್ ಗೆ ಮನಸೋತರೆ, ಇನ್ನೊಂದಿಷ್ಟು ಅಭಿಮಾನಿಗಳು ನಟಿ ಬೋಲ್ಡ್ ಲುಕ್ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ. 
 

57

ಕ್ಯಾಪ್ಶನ್ ಹಾಕೋದು ನಿಮ್ಮ ಜವಾಬ್ಧಾರಿ ( Outsourcing caption responsibilities to you) ಎನ್ನುವ ಕ್ಯಾಪ್ಶನ್ ನೀಡಿ ಫೋಟೊ ಶೇರ್ ಮಾಡಿರುವ ರುಕ್ಮಿಣಿ ವಸಂತ್ ಗೆ ನಟಿ ಹಾಗೂ ಸ್ನೇಹಿತೆ ಚೈತ್ರಾ ಆಚಾರ್ ವಾಟ್ ಎನ್ನುತ್ತಾ ಅಚ್ಚರಿಯ ಕಾಮೆಂಟ್ ಮಾಡಿದ್ದಾರೆ, ಇನ್ನು ನಟಿ ಆರಾಧನಾ ರಾಮ್ ಪ್ರೆಟಿಯೆಸ್ಟ್ ಎಂದಿದ್ದಾರೆ. ಜೊತೆಗೆ ಅಭಿಮಾನಿಗಳು ಕೂಡ ಕ್ರಶ್, ಬ್ಯೂಟಿ, ಹಾಟ್, ಇದನ್ನ ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ. 

67

ರುಕ್ಮಿಣಿ ವಸಂತ್ ನೀಲಿ ಬಣ್ಣದ ಡೆನಿಮ್ ಧರಿಸಿದ್ದು, ಅದಕ್ಕೆ ಸ್ಟ್ರಿಪ್ಡ್ ವೈಟ್ ಮತ್ತು ಬ್ಲೂ ಬಣ್ಣದ ಡೀಪ್ ವಿ ನೆಕ್ ಇರುವ ಶರ್ಟ್ ಧರಿಸಿದ್ದಾರೆ. ಕ್ಲೀವೇಜ್ ಕಾಣಿಸುವಂತೆ ನಟಿ ಪೋಸ್ ನೀಡಿದ್ದು, ಇದು ಕೆಲವು ಅಭಿಮಾನಿಗಳಿಗೆ ಬೇಸರ ತಂದಿದೆ. ಬೇರೆ ಚಿತ್ರರಂಗಕ್ಕೆ ಹೋದ ನಂತರ ಎಲ್ಲವೂ ಬದಲಾಗುತ್ತಿದೆ ಎಂದಿದ್ದಾರೆ. ಅಷ್ಟೇ ಅಲ್ಲ ಕ್ಲೀವೇಜ್ ಕಾಣಿಸೋ ಫೋಟೊಕ್ಕೂ ಕಾಮೆಂಟ್ ಮಾಡಿದ್ದು, ನಾವು ಅಭಿಮಾನಿಗಳಾಗಿ ನಿಮ್ಮಿಂದ ಇಂಥ ಫೋಟೊ ಮಾತ್ರ ನಿರೀಕ್ಷೇ ಮಾಡಿರಲಿಲ್ಲ. ನಿಮಗೆ ಅದು ಸೂಟ್ ಆಗಲ್ಲ ಎಂದು ಬರೆದುಕೊಂಡಿದ್ದಾರೆ. 
 

77

ಇನ್ನೂ ಕೆಲವು ಜನ ಒಂದು ಹೆಜ್ಜೆ ಮುಂದೆ ಹೋಗಿ ಇದಕ್ಕೆಲ್ಲಾ ಚೈತ್ರಾ ಆಚಾರ್ ಕಾರಣ ಎನ್ನುವಂತೆ ದೂರಿದ್ದಾರೆ. ಮೇಡಂ ಒಂದ್ ರಿಕ್ವೆಸ್ಟ್... ನೀವ್  ಯಾವಾಗ್ಲೂ ಡಿಸೆಂಟ್ ಫೋಟೊ ಪೋಸ್ಟ್ ಮಾಡಿ... ಚೈತ್ರ ಆಚಾರ್ ಮಾತ್ ಕೇಳೋಕ್ ಹೋಗ್ಬೇಡಿ. ಅವರ ಮಾತಿಗೆ ನೀವು ತಲೆ ಕೆಡಿಸ್ಕೋಬೇಡಿ.  ಅವರು ಬೇಕಾದ್ರೆ ಅರ್ಧ ಬಟ್ಟೆ ಹಾಕ್ಲಿ, ನೀವು ಹಾಕ್ಬೇಡಿ ಎಂದಿದ್ದಾರೆ. ಚೈತ್ರಾ ಆಚಾರ್ (Chaithra Achar) ಜೊತೆ ಹೆಚ್ಚು ಟೈಮ್ ಇದ್ರೆ ಹೀಗೆ ಆಗೋದು ಎಂದು ಸಹ ಕಾಮೆಂಟ್ ಮಾಡಿದ್ದಾರೆ. 
 

Read more Photos on
click me!

Recommended Stories