ಕಿಚ್ಚ ಸುದೀಪ್ ದಾಂಪತ್ಯ ಜೀವನಕ್ಕೆ 23ವರ್ಷ… ಡಿವೋರ್ಸ್ ಪಡೆಯಲು ಹೋಗಿ ಮತ್ತೆ ಒಂದಾದ ಜೋಡಿಯ ಪ್ರೇಮ್ ಕಹಾನಿ ಇಲ್ಲಿದೆ…

Published : Oct 18, 2024, 05:58 PM ISTUpdated : Oct 20, 2024, 08:29 AM IST

ಕಿಚ್ಚ ಸುದೀಪ್ ಮತ್ತು ಪ್ರಿಯಾ ದಂಪತಿಗಳು ಇವತ್ತು ತಮ್ಮ 23ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಇವರ ಸುಂದರವಾದ ಪ್ರೇಮ್ ಕಹಾನಿ ಇಲ್ಲಿದೆ.   

PREV
17
ಕಿಚ್ಚ ಸುದೀಪ್ ದಾಂಪತ್ಯ ಜೀವನಕ್ಕೆ 23ವರ್ಷ… ಡಿವೋರ್ಸ್ ಪಡೆಯಲು ಹೋಗಿ ಮತ್ತೆ ಒಂದಾದ ಜೋಡಿಯ ಪ್ರೇಮ್ ಕಹಾನಿ ಇಲ್ಲಿದೆ…

ಕರುನಾಡ ಚಕ್ರವರ್ತಿ ಅಂತಾನೆ ಜನಪ್ರಿಯತೆ ಪಡೆದಿರೋ ಕಿಚ್ಚ ಸುದೀಪ್ (Kiccha Sudeep) ತಮ್ಮ ಸಿನಿಮಾಗಳಿಂದ ಎಷ್ಟು ಜನಪ್ರಿಯತೆ ಪಡೆದಿದ್ದಾರೋ ಅದಕ್ಕಿಂತ ಹೆಚ್ಚು ಬಿಗ್ ಬಾಸ್ ಶೋ ನಿರೂಪಕರಾಗಿ ಜನಪ್ರಿಯತೆ ಪಡೆದಿದ್ದಾರೆ. ಜೊತೆಗೆ ತಮ್ಮ ವೈವಾಹಿಕ ಜೀವನದಿಂದಲೂ ಸುದ್ದಿಯಲ್ಲಿದ್ದ ನಟ ಕಿಚ್ಚ ಸುದೀಪ್. 
 

27

ಇವತ್ತು ಕಿಚ್ಚ ಸುದೀಪ್ ಮತ್ತು ಪ್ರಿಯಾ (Priya sudeep) ದಂಪತಿಗಳ 23ನೇ ವಿವಾಹ ವಾರ್ಷಿಕೋತ್ಸವ. ಆನಿವರ್ಸರಿ ಸಂಭ್ರಮದಲ್ಲಿರುವ ಜೋಡಿಗೆ ಮಗಳು ಸಾನ್ವಿ ಸುದೀಪ್ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ವಿಶ್ ಮಾಡಿದ್ದಾರೆ. ಒಂದೊಮ್ಮೆ, ಡಿವೋರ್ಸ್ ವರೆಗೂ ಹೋಗಿದ್ದ ಈ ಜೋಡಿಯ ದಾಂಪತ್ಯ ಮತ್ತೆ ಬೆಸೆದುಕೊಂಡು ಇದೀಗ ಸುಖ ದಾಂಪತ್ಯ ಜೀವನ ನಡೆಸುತ್ತಿರುವ ಸುದೀಪ್ -ಪ್ರಿಯಾ ದಂಪತಿಗಳ ಪ್ರೇಮ್ ಕಹಾನಿ ಇಲ್ಲಿದೆ ನೋಡಿ. 

37

ಕಿಚ್ಚ ಸುದೀಪ್ ಮತ್ತು ಪ್ರಿಯಾ ಭೇಟಿಯಾಗಿದ್ದು, ಕಾಲೇಜಿನಲ್ಲಿ ಇಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಸುದೀಪ್ ನಟನೆಯಲ್ಲಿ ಮುಂದುವರೆಯೋದಕ್ಕಾಗಿ ನಟನೆ ಕಲಿಯುತ್ತಿದ್ದರೆ, ಪ್ರಿಯಾ ಗಗನ ಸಖಿಯಾಗುವ ಕನಸು ಕಂಡಿದ್ದರಂತೆ, ಇಬ್ಬರು ಆರಂಭದಲ್ಲಿ ಸ್ನೇಹಿತರಾಗಿಯೇ ಇದ್ದರು. ಪ್ರಿಯಾ ಮೊದಲ ಭೇಟಿಯಲ್ಲೇ ಸುದೀಪ್ ಗೆ ಇಷ್ಟವಾಗಿದ್ದರಂತೆ, ಪ್ರಿಯಾ ಅವರಿಗೂ ಸುದೀಪ್ ಅವರ ಬೇಸ್ ವಾಯ್ಸ್ ತುಂಬಾನೆ ಹಿಡಿಸಿತ್ತು. 

47

ಪ್ರಿಯಾ ರಾಧಾಕೃಷ್ಣ ಎನ್ನುವ ಈ ಮಲಯಾಳಿ ಹುಡುಗಿ ಆರಂಭದಲ್ಲಿ ಏರ್ ಹೋಸ್ಟೆಸ್ ಆಗಿ ಕೆಲಸ ಮಾಡಿ, ನಂತರ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದರಂತೆ. 2000ನೇ ಇಸವಿಯಲ್ಲಿ ಇವರಿಬ್ಬರು ಭೇಟಿಯಾಗಿದ್ದರು. ಭೇಟಿಯಾದ ಒಂದು ವರ್ಷದಲ್ಲೇ ಸ್ನೇಹ, ಸ್ನೇಹದಿಂದ ಪ್ರೇಮ, ಅಲ್ಲಿಂದ ಮದುವೆವರೆಗೂ ಇವರ ಭಾಂದವ್ಯ ವೃದ್ಧಿಯಾಗಿತ್ತು. ಈ ಜೋಡಿ 2001ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 
 

57

ಈ ಮುದ್ದಾದ ಜೋಡಿಗೆ 2004ರಲ್ಲಿ ಸಾನ್ವಿ ಹುಟ್ಟಿದ್ದಳು. ಮದುವೆಯಾಗಿ 14 ವರ್ಷಗಳ ಕಾಲ ದಾಂಪತ್ಯ ಜೀವನ(married life)  ತುಂಬಾನೆ ಸುಂದರವಾಗಿ ಸಾಗುತ್ತಿತ್ತು. ಆದರೆ 2015ರಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡೋದಕ್ಕೆ ಶುರುವಾಗಿತ್ತು. ಇಬ್ಬರು ಬೆಂಗಳೂರಿನ ಕೌಟುಂಬಿಕೆ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಕೂಡ ಸಲ್ಲಿಸಿದ್ದರು. 
 

67

ಮಾಹಿತಿಗಳ ಪ್ರಕಾರ, ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸುವ ಮೊದಲು ಅವರು 4 ವರ್ಷಗಳ ಕಾಲ ಈ ಜೋಡಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ, ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾಗಲೂ ಅವರು ತಮ್ಮ ಮಗಳಿಗಾಗಿ ಜೊತೆಯಾಗುತ್ತಿದ್ದರಂತೆ.  ಸುದೀಪ್ ಮಗಳನ್ನ ಪ್ರಿಯಾ ಕಸ್ಟಡಿಗೆ ನೀಡಲು ನಿರ್ಧರಿಸಿದ್ದರು. ಅಷ್ಟೇ ಅಲ್ಲ ಪತ್ನಿಗೆ 19 ಕೋಟಿ ನೀಡುವುದಾಗಿಯೂ ಭಾರಿ ಸುದ್ದಿಯಾಗಿತ್ತು. 
 

77

ಆದರೆ ಸಮಯ ಯಾವಾಗ್ಲೂ ಒಂದೇ ರೀತಿ ಇರೋದಿಲ್ಲ. ಕೆಲ ವರ್ಷಗಳ ಬಳಿಕ ಸುದೀಪ್ ಮತ್ತು ಪ್ರಿಯಾ ಮತ್ತೆ ಒಂದಾದರು. ತಮ್ಮ ದಾಂಪತ್ಯ ಜೀವನಕ್ಕೆ ಎರಡನೇ ಅವಕಾಶ ನೀಡಲು ಈ ಜೋಡಿ ನಿರ್ಧರಿಸಿತು, ಜೊತೆಗೆ ತಮ್ಮ ಮುದ್ದಿನ ಮಗಳು ಸಾನ್ವಿಗಾಗಿ ಇಬ್ಬರು ಜೊತೆಯಾದರು. ಈಗ ಮತ್ತೆ ಈ ಜೋಡಿ ಸುಂದರವಾದ ದಾಂಪತ್ಯ ಜೀವನವನ್ನು ನಡೆಸುವ ಮೂಲಕ ಸಂತೋಷವಾಗಿ ಬಾಳುತ್ತಿದ್ದಾರೆ. 
 

click me!

Recommended Stories