ಹನಿಮೂನ್’ಗೆ ಮಾಲ್ಡೀವ್ಸ್ ಹೋಗ್ತಾರೆ ಅಂದ್ಕೊಂಡ್ರೆ ದುಬೈನಲ್ಲಿ ಮಗು ಜೊತೆ ಪೋಸ್ ಕೊಟ್ರು ಸೋನಲ್ -ತರುಣ್ !

Published : Sep 25, 2024, 04:00 PM ISTUpdated : Sep 25, 2024, 04:26 PM IST

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ಸೆಲೆಬ್ರಿಟೀಸ್ ಸೋನಲ್ ಮೊಂತೆರೋ ಮತ್ತು ತರುಣ್ ಸುಧೀರ್ ಮಗುವಿನ ಜೊತೆಗಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.   

PREV
16
ಹನಿಮೂನ್’ಗೆ ಮಾಲ್ಡೀವ್ಸ್ ಹೋಗ್ತಾರೆ ಅಂದ್ಕೊಂಡ್ರೆ ದುಬೈನಲ್ಲಿ ಮಗು ಜೊತೆ ಪೋಸ್ ಕೊಟ್ರು ಸೋನಲ್ -ತರುಣ್ !

ಸ್ಯಾಂಡಲ್ ವುಡ್ ಹೊಸ ಸೆಲೆಬ್ರಿಟಿ ಜೋಡಿಗಳಾದ ತರುಣ್ ಸುದೀರ್ (Tarun Sudhir)- ಸೋನಲ್ ಮೊಂತೆರೋ ಎಲ್ಲಿಗೆ ಹನಿಮೂನ್ ಹೋಗ್ತಾರೆ ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿತ್ತು, ಮಾಲ್ಡೀವ್ಸ್ ಗೆ ಹೋಗೋದಾಗಿ ಸಹ ಹೇಳಿದ್ದರು. ಆದರೆ ಇದೀಗ ದುಬೈಗೆ ಹಾರಿದ್ದಾರೆ ಜೋಡಿಗಳು. 
 

26

ನಿನ್ನೆ ಸೋನಲ್ ಮೊಂತೆರೋ (Sonal Monteiro) ತರುಣ್ ಕೈ ಹಿಡಿದು, ಏರ್ ಪೋರ್ಟ್ ನಲ್ಲಿ ನಡೆಯುವ ವಿಡಿಯೋ ಪೋಸ್ಟ್ ಮಾಡಿದ್ದರು. ಹನಿಮೂನ್ ಗೆ ಹೋಗ್ತಿದ್ದಾರೆ ಅಂದ್ಕೊಂಡ್ರೆ, ಇದೀಗ ಈ ಜೋಡಿ ದುಬೈನಲ್ಲಿ ಐಐಎಫ್’ಎ ಉತ್ಸವದಲ್ಲಿ ಭಾಗಿಯಾಗಲು ತೆರಳಿದ್ದು ಅಲ್ಲಿ ತಮ್ಮ ನೆಂಟರಿಷ್ಟರ ಮನೆಗೆ ತೆರಳಿದ್ದಾರೆ. 
 

36

ದುಬೈನಲ್ಲಿ (Dubai) ಸೋನಲ್ ಮತ್ತು ತರುಣ್ ಮುದ್ದಾದ ಮಗುವಿನ ಜೊತೆಗೆ ಫೋಟೊ ತೆಗೆಸಿಕೊಂಡಿದ್ದು, ಈ ಫೋಟೊ ಸೋಶಿಯಲ್ ಮಿಡೀಯಾದಲ್ಲಿ ವೈರಲ್ ಆಗುತ್ತಿದೆ. ಹನಿಮೂನ್ ಗೆ ಅಂತ ಹೋದೋರ ಕೈಯಲ್ಲಿ ಮಗು ಎಲ್ಲಿಂದ ಬಂತು ಅಂತಾನೂ ಜನ ಪ್ರಶ್ನಿಸಿದ್ದಾರೆ. ಆದರೆ ರಿಯಲ್ ಕಥೆ ಬೇರೆನೆ ಇದೆ. 
 

46

ಸೋನಲ್ ದುಬೈನಲ್ಲಿರುವ ತಮ್ಮ ಕಸಿನ್ ಮನೆಗೆ ತೆರಳಿದ್ದು, ಅವರ ಮಗುವಿನ ಜೊತೆಗೆ ಸಮಯ ಕಳೆದು ಫೋಟೊ ತೆಗೆಸಿಕೊಂಡಿದ್ದಾರೆ. ಸೋನಲ್ ಸಹೋದರಿ ಫೋಟೊ ಶೇರ್ ಮಾಡಿದ್ದು, ಕೈಲೆನ್ಸ್ ಮೊದಲ ಬಾರಿ ಸೋನಲ್ ಮೌಶಿ ಮತ್ತು ತರುಣ್ ಮಾಮನನ್ನ ಭೇಟಿಯಾಗ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ. 
 

56

ಸ್ಯಾಂಡಲ್ ವುಡ್ ನಿರ್ದೇಶಕ ತರುಣ್ ಹಾಗೂ ನಟಿ ಸೋನಲ್​ ತಿಂಗಳ ಹಿಂದೆಯಷ್ಟೇ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರದ್ದು ಹಿಂದೂ ಸಂಪ್ರದಾಯದಂತೆ ಮೊದಲಿಗೆ ವಿವಾಹ ನಡೆದಿದ್ದು, ಬಳಿಕ ಸೋನಲ್ ಧರ್ಮವಾದ ಕ್ರಿಶ್ಚಿಯನ್ ವಿಧಿ ವಿಧಾನದಂತೆ ಮಂಗಳೂರಿನ ಚರ್ಚ್ ನಲ್ಲಿ ಕ್ರಿಶ್ಚಿಯನ್ ವೆಡ್ಡಿಂಗ್ (Christian Wedding) ಕೂಡ ನಡೆದಿತ್ತು. 
 

66

ಅಭಿಸಾರಿಕೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸೋನಲ್  ಸದ್ಯಕ್ಕೆ ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬುದ್ಧಿವಂತ 2 ಮತ್ತು ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.  ಇನ್ನು ಖಳನಟ ಸುಧೀರ್ ಪುತ್ರರಾಗಿರುವ ತರುಣ್ ಸುಧೀರ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು, ಕನ್ನಡಕ್ಕೆ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 
 

Read more Photos on
click me!

Recommended Stories