ಬಾಲಿವುಡ್ ಸ್ಟಾರ್ ಡೈರೆಕ್ಟರ್ ರೋಹಿತ್ ಶೆಟ್ಟಿ ತಂದೆ ಕನ್ನಡ ಸಿನಿಮಾದ ಖಡಕ್ ವಿಲ್ಲನ್! ಯಾರು ಗೊತ್ತಾ?

First Published Sep 25, 2024, 5:15 PM IST

ಬಾಲಿವುಡ್ ಸ್ಟಾರ್ ನಿರ್ದೇಶಕ ರೋಹಿತ್ ಶೆಟ್ಟಿ ಬಗ್ಗೆ ನಿಮಗೆ ಗೊತ್ತೆ ಇದೆ. ಆದ್ರೆ ಅವರ ತಂದೆ ಬಗ್ಗೆ ಏನಾದ್ರೂ ಗೊತ್ತಾ? ಅವರು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಅವರ ಬಗ್ಗೆ ಫುಲ್ ಡಿಟೇಲ್ಸ್ ತಿಳಿಯೋಣ. 
 

ಬಾಲಿವುಡ್ ನಲ್ಲಿ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ನೀಡುತ್ತಿರುವ ಸ್ಟಾರ್ ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) ಬಗ್ಗೆ ಕನ್ನಡಿಗರಿಗೆ ಗೊತ್ತೆ ಇದೆ. ಆದರೆ ಇವರ ತಂದೆ ಬಗ್ಗೆ ನಿಮಗೇನಾದ್ರೂ ಮಾಹಿತಿ ಇದ್ಯಾ? ಇಲ್ಲ ಅನ್ಸತ್ತೆ ಅಲ್ವಾ? ಯಾಕಂದ್ರೆ ಅವರ ತಂದೆ 70ರ ದಶಕಗಳಲ್ಲಿ ಸಿನಿಮಾ ಇಂಡಷ್ಟ್ರಿಯಲ್ಲಿ ಮಿಂಚಿದವರು. 
 

ರೋಹಿತ್ ಶೆಟ್ಟಿ ತಂದೆಯ ಹೆಸರು ಎಂಬಿ ಶೆಟ್ಟಿ (MB Shetty). ಅವರ ನಿಜವಾದ ಹೆಸರು ಮುದ್ದು ಬಾಬು ಶೆಟ್ಟಿ. ಆದರೆ ಸಿನಿಮಾಗಳಲ್ಲಿ ಜನಪ್ರಿಯತೆ ಪಡೆದದ್ದು ಮಾತ್ರ ಶೆಟ್ಟಿ, ಎಂಬಿ ಶೆಟ್ಟಿ, ಫೈಟರ್ ಶೆಟ್ಟಿಯಾಗಿ. ಬಾಡಿ ಬಿಲ್ಡರ್ ಮತ್ತು ಬಾಕ್ಸರ್ ಆಗಿದ್ದ ಎಂ.ಬಿ ಶೆಟ್ಟಿ ನೋಡೋದಕ್ಕೆ ಖಡಕ್ ವಿಲನ್ ರೀತಿಯೇ ಇದ್ದರು, ಹಾಗಾಗಿಯೇ ಬಾಲಿವುಡ್ ಹಾಗೂ ಕನ್ನಡ ಸಿನಿಮಾಗಳಲ್ಲಿ ಇವರು ಗುರುತಿಸಿಕೊಂಡಿದ್ದಾರೆ. 
 

Latest Videos


ಮಂಗಳೂರಿನಲ್ಲಿ ಹುಟ್ಟಿದ ಎಂ.ಬಿ ಶೆಟ್ಟಿ ಮಾತೃ ಭಾಷೆ ತುಳು. ಉದ್ಯೋಗವನ್ನರಸಿ ಮುಂಬೈಗೆ ತೆರಳಿದ ಶೆಟ್ಟಿ ಅಲ್ಲಿಯೇ ನೆಲೆಯೂರಿದರು. ಮೊದಲಿಗೆ ಕಾಟನ್ ಗ್ರೀನ್ ಹೊಟೇಲ್ ನಲ್ಲಿ ವೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶೆಟ್ಟಿ, ನಂತರ ಬಾಕ್ಸಿಂಗ್ ಮತ್ತು ಬಾಡಿ ಬಿಲ್ಡಿಂಗ್ ಗೆ (Body Building) ಇಳಿದರು. ಇವರ ಎತ್ತರದ ಶರೀರ, ಕೂದಲಿಲ್ಲದ ಬೋಳು ತಲೆ, ಆ ಖಡಕ್ ಲುಕ್ ಇವರನ್ನ ಹೀರೋ ಪಾತ್ರಕ್ಕೆ ಮೀಸಲಿಡುವಂತೆ ಮಾಡಿತು. 
 

ಭಾರತೀಯ ಸಿನಿಮಾಗಳಲ್ಲಿ ಫೈಟ್ ಮಾಸ್ಟರ್, ಸ್ಟಂಟ್ ಮ್ಯಾನ್ (Stuntman), ಆಕ್ಷನ್ ಕೊರಿಯೋಗ್ರಾಫರ್, ಹಾಗೂ ನಟನಾಗಿ ಗುರುತಿಸಿಕೊಂಡ ಶೆಟ್ಟಿ, 1956ರಲ್ಲಿ ಹೀರ್ ಸಿನಿಮಾ ಮೂಲಕ ಫೈಟ್ ಇನ್ಸ್ಟ್ರಕ್ಟರ್ ಆಗಿ ಭಡ್ತಿ ಪಡೆದರು. ಅಲ್ಲದೆ ವಿನಲ್ ಆಗಿ ಹಲವಾರು ಹಿಂದಿ ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು ಶೆಟ್ಟಿ. 
 

ಸುಮಾರು 700ಕ್ಕೂ ಹೆಚ್ಚು ಸಿನಿಮಾಗಳಿಗೆ ಆಕ್ಷನ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ ಶೆಟ್ಟಿ, ಡಾನ್, ದ ಗ್ರೇಟ್ ಗಾಂಬ್ಲರ್, ತ್ರಿಶೂಲ್, ದಿವಾರ್, ಶಾಲಿಮಾರ್ ನಂತಹ ಹಿಟ್ ಚಿತ್ರಗಳಿಗೂ ಆಕ್ಷನ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು. 
 

ಇವರ ವಯಕ್ತಿಕ ಜೀವನದ ಬಗ್ಗೆ ಹೇಳೊದಾದ್ರೆ, ಎಂಬಿ ಶೆಟ್ಟಿ ಎರಡು ಮದುವೆಯಾಗಿದ್ದಾರೆ. ಇವರ ಮೊದಲ ಪತ್ನಿ ವಿನೋದಿನಿ, ಅವರಿಗೆ ಇಬ್ಬರು ಹುಡುಗರು, ಇಬ್ಬರು ಹುಡುಗಿಯರು ಸೇರಿ ನಾಲ್ವರು ಮಕ್ಕಳು. ಅವರಲ್ಲಿ ನಿರ್ದೇಶಕರಾಗಿರುವ ಹೃದಯ್ ಕೂಡ ಒಬ್ಬರು. ಎಂಬಿ ಶೆಟ್ಟಿ ದ್ವಿತೀಯ ಪತ್ನಿ ರತ್ನ ಅವರಿಗೆ ಒಬ್ಬ ಮಗ, ಅವರೇ ಖ್ಯಾತ ನಿರ್ದೇಶಕ (popular director) ರೋಹಿತ್ ಶೆಟ್ಟಿ. 
 

ಇನ್ನು ಎಂಬಿ ಶೆಟ್ಟಿ ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ಖಡಕ್ ವಿಲನ್ ಆಗಿ ನಟಿಸಿದ್ದರು. ವಿಷ್ಣುವರ್ಧನ್ ಮತ್ತು ರಜನಿಕಾಂತ್ ಅಭಿನಯದ ಕಿಲಾಡಿ ಕಿಟ್ಟು, ಡಾ. ರಾಜಕುಮಾರ್ ಅವರ ಆಪರೇಷನ್ ಡೈಮಂಡ್ ರಾಕೆಟ್ (operation dimond rocket), ರುಸ್ತುಂ ಜೋಡಿ, ಸಿಂಹದ ಮರಿ ಸೈನ್ಯ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದರು. 
 

51ನೇ ವಯಸ್ಸಿನಲ್ಲಿ ಸಾವನ್ನಪ್ಪಿದ ಎಂಬಿ ಶೆಟ್ಟಿ ಡಿಪ್ರೆಶನ್ ನಿಂದಲೇ ಸಾವನ್ನಪ್ಪಿದರು ಎನ್ನಲಾಗುತ್ತೆ. ಅತ್ಯುತ್ತಮ ಸ್ಟಂಟ್ ಮಾಸ್ಟರ್ ಆಗಿದ್ದ ಶೆಟ್ಟಿ, 1980ರಲ್ಲಿ ಶತ್ರುಘ್ನ ಸಿನ್ಹಾರ ಒಂದು ಸಿನಿಮಾಕ್ಕೆ ಸ್ಟಂಟ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಟೈಮಿಂಗ್ ವ್ಯತ್ಯಾಸವಾಗಿ ಬಾಂಬ್ ಸಿಡಿದು ಸ್ಟಂಟ್ ಮೆನ್ ಒಬ್ಬರು ಸುಟ್ಟು ಭಸ್ಮವಾಗಿದ್ದರು. ಇದರ ಹೊಣೆಯನ್ನು ತನ್ನ ಮೇಲೆ ಹಾಕಿಕೊಂಡ ಶೆಟ್ಟಿ, ಅದೇ ಯೋಚನೆಯಲ್ಲಿ ಡಿಪ್ರೆಶನ್ ಗೆ ತೆರಳಿ, ಕುಡಿತಕ್ಕೆ ದಾಸರಾಗಿ, ಕೊನೆಗೆ 1982ರಲ್ಲಿ ಸಾವನ್ನಪ್ಪಿದ್ದರು. 
 

click me!