ಹೊಂಬಾಳೆ ಫಿಲ್ಮಂ ನಿರ್ಮಾಣ, ರಿಷಬ್ ಶೆಟ್ಟಿ ನಿರ್ದೇಶನ ಮತ್ತ ನಟನೆಯ ಕಾಂತಾರ ಸಿನಿಮಾದಲ್ಲಿ ಪತ್ನಿ ಪ್ರಗತಿ ಮತ್ತು ಮಕ್ಕಳು ಅಭಿನಯಿಸಿದ್ದಾರೆ.
ರಾಜಮನೆತನಕೆ ಸೇರಿದ ಮಹಿಳೆ ಪಾತ್ರದಲ್ಲಿ ಪ್ರಗತಿ ಮಿಂಚಿದ್ದಾರೆ. ಜೊತೆಗಿರುವ ಪುಟ್ಟ ಮಕ್ಕಳು ಕೂಡ ರಿಷಬ್ ಮಕ್ಕಳು, ಮಗ ರಣ್ವಿತ್ ಮತ್ತು ಪುತ್ರಿ ರಾಧ್ಯಾ.
'ಕಾಂತಾರ ತಂಡದ ಜೊತೆ ನನ್ನ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆದಿರುವೆ ಎಂದೂ ಮರೆಯಲಾಗದು' ಎಂದು ಪ್ರಗತಿ ಬರೆದುಕೊಂಡಿದ್ದಾರೆ.
'ಸಿನಿಮಾ ಆರಂಭದಲ್ಲಿ ನಾನು ಎರಡನೇ ಮಗುವಿನಗೆ ಗರ್ಭಿಣಿ ಆಗಿದ್ದೆ ಹಾಗೂ ಸಿನಿಮಾ ಮುಗಿಯುವಷ್ಟರಲ್ಲಿ ಎರಡನೇ ಮಗುವಿನ ಜೊತೆ ನಟಿಸಿದೆ' ಎಂದು ಪ್ರಗತಿ ಹೇಳಿದ್ದಾರೆ.
'ಈ ಸಿನಿಮಾದಲ್ಲಿ ಕಲಾವಿದೆ ಹಾಗೂ ವಸ್ತ್ರ ವಿನ್ಯಾಸ ಮಾಡುವ ಕೆಲಸ ಮಾಡಿರುವೆ. ಇಂತಹ ಅವಕಾಶ ಪಡೆಯುವುದಕ್ಕೆ ಪುಣ್ಯ ಮಾಡಿದ್ದೆ' ಎಂದಿದ್ದಾರೆ ಪ್ರಗತಿ.
'ದೊಡ್ಡ ಮಗ ನೋಡಲು ಪಕ್ಕಾ ರಿಷಬ್, ಇದು ನಿಮ್ಮ ಮದುವೆ ಸೀರೆ ಅಲ್ವಾ? ಕಾಂತಾರ ಭಾಗ 2ರಲ್ಲಿ ನೀವು ಇರಬೇಕು' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
Vaishnavi Chandrashekar