ಕೋಟಿ ರಾಮು ಸಮಾಧಿ ಪೂಜೆ ಸಲ್ಲಿಸಿದ ಪತ್ನಿ ಮಾಲಾಶ್ರೀ ಮತ್ತು ಮಕ್ಕಳು!

Published : Apr 27, 2023, 04:00 PM IST

ತೋಟದ ಮನೆಯಲ್ಲಿರುವ ಕೋಟಿ ರಾಮು ಸಮಾಧಿ ಪೂಜೆ ಸಲ್ಲಿಸಿದ ಕುಟುಂಬಸ್ಥರು. ಸೋಷಿಯಲ್ ಮೀಡಯಾದಲ್ಲಿ ಮಾಲಾಶ್ರೀ ಪೋಸ್ಟ್‌. 

PREV
18
ಕೋಟಿ ರಾಮು ಸಮಾಧಿ ಪೂಜೆ ಸಲ್ಲಿಸಿದ ಪತ್ನಿ ಮಾಲಾಶ್ರೀ ಮತ್ತು ಮಕ್ಕಳು!

ಕನ್ನಡ ಚಿತ್ರರಂಗದಲ್ಲಿ ಮೊದಲು ಕೋಟಿಗಟ್ಟಲೆ ಬಜೆಟ್ ಹಾಕಿ ಸಿನಿಮಾ ಮಾಡಿ ನಿರ್ದೇಶಕ ಕೋಟಿ ರಾಮು ಏಪ್ರಿಲ್ 26, 2021ರಲ್ಲಿ ಅಗಲಿದರು. 

28

ನಿನ್ನೆ ಎರಡನೇ ವರ್ಷ ಪುಣ್ಯಸ್ಮರಣೆಯಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಮಾಲಾಶ್ರೀ ಮತ್ತು ರಾಧನಾ ರಾಮ್‌ ಪೋಸ್ಟ್‌ ಹಾಕಿದ್ದಾರೆ.

38

'ನಿನ್ನನ್ನು ಮಿಸ್ ಮಾಡಿಕೊಂಡಾಗಲೆಲ್ಲಾ ಒಮ್ಮೆ ಕಣ್ಣು ಮುಚ್ಚಿದರೆ ಸಾಕು ನನ್ನ ಮನಸ್ಸಿನಲ್ಲಿ ನೀನಿರುವೆ. ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿರುವೆ ಕುಟ್ಟ' ಎಂದು ಮಾಲಾಶ್ರೀ ಬರೆದುಕೊಂಡಿದ್ದಾರೆ. 

48

'ಪ್ರತಿ ದಿನವೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೀವಿ. ನೀವು ನಮ್ಮನ್ನು ನೋಡುತ್ತಿದ್ದೀರಿ ಎಂದು ನನಗೆ ಗೊತ್ತಿದೆ, ನಮ್ಮನ್ನು ಕಾಪಾಡುತ್ತಿರುವುದು ಮಾರ್ಗದರ್ಶನ ನೀಡುತ್ತಿರುವುದು ನೀವೇ' ಎಂದು ರಾಧನಾ ಬರೆದುಕೊಂಡಿದ್ದಾರೆ. 

58

 'ನಿಜಕ್ಕೂ ಇದು ಬಹಳ ನೋವು ಮತ್ತು ದುಃಖದ ಸಂಗತಿ. ರಾಮು ಸರ್ ಅವರು ಕನ್ನಡ ಸಿನಿಮಾರಂಗಕ್ಕೆ ಬಹಳಷ್ಟು ಬೆಲೆಕಟ್ಟಲಾಗದಷ್ಟು ಕಾಣಿಕೆಯನ್ನು ನೀಡಿದ್ದಾರೆ. ಇಂದು ಮಕ್ಕಳು ಬೆಳೆಯುವುದನ್ನು ನೋಡಲು ಅವರ ಇರಬೇಕಿತ್ತು' ಎಂದು ಶರತ್ ಎನ್ನುವ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ.

68

ಮೊದಲ ವರ್ಷ ಪುಣ್ಯಸ್ಮರಣೆಯನ್ನು ಅದ್ಧೂರಿಯಾಗಿ ಮಾಡಿದ್ದರು. ರಾಮು ಇಷ್ಟದ ಮನೆಯಲ್ಲಿ ನೆಚ್ಚಿನ ಆಹಾರವಿಟ್ಟು ಪೂಜೆ ಸಲ್ಲಿಸಿದ್ದರು.

78

'ನೀವಿಲ್ಲದೆ ವರ್ಷ ಕಳೆಯಿತ್ತು ಆದರೆ ನಮ್ಮ ಮನಸ್ಸಿನಲ್ಲಿ ನೀವು ಸದಾ ಇರುತ್ತೀರಿ. ಅದೆಷ್ಟೋ ಕೋಟಿ ಕ್ಷಣಗಳು ಒಟ್ಟಿಗೆ ಕಳೆಯಬೇಕಿತ್ತು' ಎಂದು ಕಳೆದ ವರ್ಷ ಮಾಲಾಶ್ರೀ ಬರೆದಿದ್ದರು.

88

'ವರ್ಷಗಳು ಕಳೆಯಲ್ಲಿ ನೆನಪುಗಳು ಸದಾ ಉಳಿಯುತ್ತದೆ. ನೀವು ನಮ್ಮ ಮನಸ್ಸಿನಲ್ಲಿ ಸದಾ ಇರುತ್ತೀರಿ' ಎಂದಿದ್ದರು ರೆಬೆಲ್ ಲೇಡಿ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories