ಮುದ್ದಾದ ಕುಟುಂಬದ ಫೋಟೋ ಹಂಚಿಕೊಂಡ ರಿಷಬ್ ಶೆಟ್ಟಿ ಪತ್ನಿ; ಕರ್ಲಿ ಫ್ಯಾಮಿಲಿ ಎಂದ ಫ್ಯಾನ್ಸ್

First Published | May 7, 2023, 5:45 PM IST

ಮುದ್ದಾದ ಕುಟುಂಬದ ಫೋಟೋ ಹಂಚಿಕೊಂಡ ರಿಷಬ್ ಶೆಟ್ಟಿ ಪತ್ನಿ. ಕರ್ಲಿ ಫ್ಯಾಮಿಲಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. 

ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ರಿಷಬ್ ಶೆಟ್ಟಿ ಸದ್ಯ ಕಾಂತಾರ-2 ಪಾರ್ಟ್-2ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸಗಳ ನಡುವೆಯೂ ರಿಷಬ್ ಶೆಟ್ಟಿ ಕುಟುಂಬದ ಜೊತೆಯೂ ಸಮಯ ಕಳೆಯುತ್ತಾರೆ. 

ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರು ಮುದ್ದಾದ ಮಕ್ಕಳ ಜೊತೆ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

Tap to resize

ಇಬ್ಬರು ಮಕ್ಕಳ ಜೊತೆ  ಪ್ರಗತಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಮಸ್ತ್ ಪೋಸ್ ನೀಡಿದ್ದಾರೆ. ಫೋಟೋಗಳನ್ನು ಶೇರ್ ಮಾಡಿ ಪ್ರಗತಿ ಶೆಟ್ಟಿ ಫ್ಯಾಮಿಲಿ ಎಂದು ಕ್ಯಾಪ್ಷನ್ ನೀಡಿದ್ದಾರೆ. 

ರಿಷಬ್ ಶೆಟ್ಟಿ ಸುಂದರ ಫೋಟೋಗಳು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಿಷಬ್ ಕುಟುಂಬಕ್ಕೆ ಲೈಕ್ಸ್ ಒತ್ತಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. 

ಹಚ್ಚ ಹಸಿರಿನ ನಡುವೆ ರಿಷಬ್ ಕುಟುಂಬ ಕ್ಯಾಮರಾಗೆ ಮಸ್ತ್ ಪೋಸ್ ನೀಡಿದ್ದಾರೆ. ಅಭಿಮಾನಿಗಳು ಪ್ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. ನೂರು ವರ್ಷಗಳ ಕಾಲ ನೀವೆಲ್ಲ ಚೆನ್ನಾಗಿ ಬಾಳಿ ಶೆಟ್ರೇ ಎಂದು ಹೇಳುತ್ತಿದ್ದಾರೆ. ಮುದ್ದಾದ ಕುಟುಂಬ, ಸುಂದರವಾದ ಕುಟುಂಬ ಎಂದು ಹೇಳುತ್ತಿದ್ದಾರೆ. ಕರ್ಲಿ ಕುಟುಂಬ ಎಂದು ಹೇಳುತ್ತಿದ್ದಾರೆ. 

ರಿಷಬ್ ಶೆಟ್ಟಿ ಸದ್ಯ ಕಾಂತಾರ-2ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ರಿಷಬ್ ಕಾಂತಾರ - 2 ಸ್ಟ್ರಿಪ್ಟ್ ನಲ್ಲಿ ನಿರತರಾಗಿದ್ದಾರೆ. ಈ ಬಗ್ಗೆ ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಸದ್ಯದಲ್ಲೇ ಶೂಟಿಂಗ್ ಪ್ರಾರಂಭಿಸುವ ಸಾಧ್ಯತೆ ಇದೆ.  

Latest Videos

click me!