ಕಳೆದ ಕೆಲವು ತಿಂಗಳ ಹಿಂದೆ ಸ್ಯಾಂಡಲ್‌ವುಡ್ ನಟ ಕಾರ್ತಿಕ್ ಜಯರಾಮ್ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಅದಕ್ಕೆ ಕಾರಣವಾಗಿದ್ದು ಜೆಕೆ ಶೇರ್ ಮಾಡಿದ್ದ ಹೊಸ ಪೋಸ್ಟ್.
ಜೆಕೆ ಒಂದು ಫ್ಯಾಷನ್ ಡಿಸೈನರ್ ಅಪರ್ಣ ಸಮಂತಾ ಜೊತೆಗಿನ ಸೆಲ್ಫಿ ಪೋಸ್ ನೀಡಿದ್ದ ಫೋಟೋ ಶೇರ್ ಮಾಡಿ ಲೈಫ್ ಲೈನ್ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಹಾಕುತ್ತಿದ್ದಂತೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದರು. ಜೆಕೆ ಮದುವೆಯಾಗುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್‌ನಲ್ಲಿ ಸಂತಸ ಹಂಚಿಕೊಳ್ಳುತ್ತಿದ್ದರು.
ಆದರೆ ಮಾಧ್ಯಮದ ಜೊತೆ ಮಾತನಾಡಿ ಇದು ಸುಳ್ಳು ಸುದ್ದಿ ತಮ್ಮಿಬ್ಬರ ನಡುವೆ ಏನು ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಬಳಿಕ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಇತ್ತೀಚೆಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ನಟ ಜೆಕೆಗೆ ಅಪರ್ಣ ಸಮಂತಾ ಪ್ರೀತಿಯ ವಿಶ್ ಮಾಡಿದ್ದಾರೆ. ಈ ಮೂಲಕ ಅಪರ್ಣ ಮತ್ತು ಜೆಕೆ ಇಬ್ಬರ ಪ್ರೀತಿ ವಿಚಾರವನ್ನು ಅಧಿಕೃತ ಗೊಳಿಸಿದ್ದಾರೆ.
ಜೆಕೆ ಜೊತೆಗೆ ಆಪ್ತವಾಗಿರುವ ಫೋಟೋ ಶೇರ್ ಮಾಡಿ ಅಪರ್ಣಾ ತನ್ನ ಜೀವನದ ಪ್ರೀತಿಗೆ ಹುಟ್ಟುಹಬ್ಬ ಶುಭಾಶಯಗಳು ಎಂದು ಹೇಳಿದ್ದಾರೆ. 'ನನ್ನ ಜೀವನದ ಪ್ರೀತಿಗೆ ಜನ್ಮದಿನದ ಶುಭಾಶಯಗಳು. ಅತ್ಯಂತ ಪ್ರೀತಿಯ ಗೆಳೆಯ ಮತ್ತು ಸ್ನೇಹಿತನಾಗಿದ್ದಕ್ಕಾಗಿ ಧನ್ಯವಾದಗಳು. ನನ್ನ ಎಲ್ಲಾ ಹಂತಗಳು ಮತ್ತು ನನ್ನನ್ನು ಪ್ರೀತಿಸಿದ್ದಕ್ಕಾಗಿ' ಎಂದು ಹೇಳಿದ್ದಾರೆ.
ಇಬ್ಬರೂ ಸದಾ ಫ್ಯಾಷನ್ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಇಬ್ಬರ ಪ್ರೀತಿ ಅಧಿಕೃತಗೊಳಿಸಿದ್ದಾರೆ.