2016 ಜನವರಿ 22 ರಂದು ರಿಲೀಸ್ ಆದ ಈ ಚಿತ್ರವನ್ನು ರಿಷಭ್ ಶೆಟ್ಟಿ ಡೈರಕ್ಷನ್ ಮಾಡಿದ್ದರು. ಚಿತ್ರಕಥೆ ಕೂಡ ಇವರದ್ದೇ. ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ಹರಿಪ್ರಿಯಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ನಕ್ಸಲ್ ಪೀಡಿತ ಪ್ರದೇಶದ ಸಮಸ್ಯೆಗಳನ್ನು ಇಟ್ಟುಕೊಂಡು ಮಾಡಿದ ನವಿರಾದ ಪ್ರೇಮಕಥೆ. ಈ ಚಿತ್ರದ ಹಾಡುಗಳು ಇಂದಿಗೂ ಕಿವಿಯಲ್ಲಿ ಗುಯ್ ಗುಡುತ್ತಿರುತ್ತದೆ. ಈ ಚಿತ್ರಕ್ಕೆ 10ರಲ್ಲಿ 7.5 ರೇಟಿಂಗ್ ಇದೆ.
2016 ಡಿಸೆಂಬರ್ 30 ರಂದು ಬಿಡುಗಡೆಯಾದ ಸಿನೆಮಾ. ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳ ಬದುಕಿನಲ್ಲಿ ನಡೆಯುವ ಕಥೆ ಇದಾಗಿದೆ. ರಿಷಭ್ ಶೆಟ್ಟಿ ಕಥೆ ಬರೆದು ನಿರ್ದೆಶಿಸಿದ್ದ ಈ ಚಿತ್ರ ಬ್ಲಾಕ್ ಬ್ಲಸ್ಟರ್ ಹಿಟ್ ಆಗಿತ್ತು. ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ ಲೀಡ್ ರೋಲ್ ನಲ್ಲಿದ್ದರು. ರಶ್ಮಿಕಾ ಮಂದಣ್ಣಗೆ ಬಹುದೊಡ್ಡ ಬ್ರೆಕ್ ಕೊಟ್ಟ ಸಿನೆಮಾ ಕಿರಿಕ್ ಪಾರ್ಟಿ. ಈ ಚಿತ್ರಕ್ಕೆ 8.3 ರೇಟಿಂಗ್ ಇದೆ. ಈ ಚಿತ್ರಕ್ಕೆ ಬೆಸ್ಟ್ ಡೈರೆಕ್ಟರ್ ಸೈಮಾ ಅವಾರ್ಡ್ ಮತ್ತು ಬೆಸ್ಟ್ ಡೈರೆಕ್ಟರ್ ಸೌತ್ ಫಿಲಂ ಪೇರ್ ಆವಾರ್ಡ್ ಸಿಕ್ಕಿದೆ.
ಆಗಸ್ಟ್ 24, 2018ರಲ್ಲಿ ಬಂದ ಚಿತ್ರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ. ಇದೊಂದು ಮಕ್ಕಳ ಚಿತ್ರ. ಈ ಚಿತ್ರ ಕೂಡ ರಿಷಭ್ ನಿರ್ದೆಶನದಲ್ಲಿ ಮೂಡಿಬಂತು. ಹಲವಾರು ಪ್ರಶಸ್ತಿಯನ್ನು ಬಾಚಿಕೊಂಡಿತು. ಜನ ಮನ್ನಣೆ ಪಡೆಯಿತು. ಕನ್ನಡ ಮತ್ತು ಕನ್ನಡ ಶಾಲೆ ಉಳಿವಿಗಾಗಿ ಮಕ್ಕಳು ಹೋರಾಡುವ ಚಿತ್ರ ಇದಾಗಿದೆ. ನ್ಯಾಷನಲ್ ಫಿಲ್ಮ್ ಅವಾರ್ಡ್ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿ ಕೂಡ ಇದಕ್ಕೆ ಲಭಿಸಿದೆ. ಈ ಚಿತ್ರಕ್ಕೆ 8.7 ರೇಟಿಂಗ್ ಇದೆ.
30 ಸೆಪ್ಟೆಂಬರ್ 2022ರಂದು ಬಿಡುಗಡೆಯಾಗಿ ಇಡೀ ಭಾರತೀಯ ಚಿತ್ರರಂಗ ಮಾತ್ರವಲ್ಲ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ಮತ್ತು ವಿಭಿನ್ನ ಸಂಸ್ಕೃತಿ, ನಂಬಿಕೆ, ಆಚರಣೆಯ ಬಗ್ಗೆ ತಿಳಿಸಿದ ಚಿತ್ರ ಅದು ಕಾಂತಾರ. ರಿಷಭ್ ನಿರ್ದೇಶಿಸಿ ನಟಿಸಿದ ಚಿತ್ರ ಇದಾಗಿದ್ದು, ಇಂದಿಗೂ ಟ್ರೆಂಡಿಂಗ್‌ನಲ್ಲಿರುವ ಚಿತ್ರ. ಗಲ್ಲಾಪಟ್ಟಿಯನ್ನು ಕೊಳ್ಳೆ ಹೊಡೆದು ಇತಿಹಾಸ ಸೃಷ್ಟಿಸಿದ ಚಿತ್ರ. ಈ ಸಿನೆಮಾದ ಬಳಿಕ ರಿಷಭ್ ಗೆ ಡಿವೈನ್ ಸ್ಟಾರ್ ಎಂಬ ಹೆಸರು ಬಂತು. ಮಾತ್ರವಲ್ಲ ಹಲವಾರು ವಿಭಾಗಗಳಲ್ಲಿ, ಹಲವಾರು ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಆಸ್ಕರ್‌ಗೂ ನಾಮ ನಿರ್ದೆಶನಗೊಂಡಿತ್ತು.
ಇದೀಗ ಕಾಂತಾರ -1 ಚಿತ್ರ, ಮೊದಲನೇ ಅಧ್ಯಾಯ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ರಿಷಭ್ ಶೆಟ್ಟಿ ನಟಿಸಿ ನಿರ್ದೆಶಿಸಿರುವ ಈ ಸಿನೆಮಾದ ಮೊದಲ ಟೀಸರ್ ರಿಲೀಸ್ ಆಗಿದ್ದು, ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಂಬಾಳೆ ಸಂಸ್ಥೆಯಿಂದ ಮೂಡಿಬರುತ್ತಿರುವ ಈ ಚಿತ್ರದ 6 ಭಾಷೆಗಳ ಟೀಸರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಎರಡೇ ದಿನಕ್ಕೆ 1.5 ಕೋಟಿ ಜನ ಟೀಸರ್ ವೀಕ್ಷಣೆ ಮಾಡಿದ್ದಾರೆ. ಟೀಸರ್ ನೋಡಿದ ಬಳಿಕ ನಿರೀಕ್ಷೆ ಹೆಚ್ಚಿದೆ.