ಡಾಲಿಯ 'ರತ್ನನ್‌ ಪ್ರಪಂಚ'ಕ್ಕೆ ಎಂಟ್ರಿ ಕೊಟ್ಟ ಮಲಯಾಳಂ ಬೆಡಗಿ ರೆಬಾ ಜಾನ್‌!

First Published | Aug 27, 2020, 4:41 PM IST

ಡಾಲಿ ಧನಂಜಯ್ ಅವರ ಬಹುನಿರೀಕ್ಷಿತ ಚಿತ್ರ 'ರತ್ನನ್ ಪ್ರಪಂಚ'ಕ್ಕೆ ನಾಯಕಿ ಆಯ್ಕೆ ಆಗಿದ್ದಾರೆ. ಮಂಗಳೂರಿನ ಮಲಯಾಳಿ  ಕುಟುಂಬಕ್ಕೆ ಸೇರಿದ ರೆಬಾ ಮೋನಿಕಾ ಜಾನ್‌ ಡಾಲಿ ಜೊತೆ ಸ್ಕ್ರೀನ್ ಶೇರ್ ಮಾಡಿ ಕೊಳ್ಳುತ್ತಿದ್ದಾರೆ. ಯಾರೀ ರೆಬಾ, ಅವರ ಹಿನ್ನೆಲೆ ಏನು ಇಲ್ಲಿದೆ ನೋಡಿ....

ರೆಬಾ ಹುಟ್ಟಿದ್ದು ಫೆಬ್ರವರಿ 4,1994ರಲ್ಲಿ. ಮೂಲತಃ ಮಂಗಳೂರಿನವರಾಗಿದ್ದು, ಮಲಯಾಳಿ ಕುಟುಂಬಕ್ಕೆ ಸೇರಿದ್ದಾರೆ.
ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ ಪದವಿ ಪಡೆದುಕೊಂಡಿದ್ದಾರೆ.
Tap to resize

ಮಲಯಾಳಂನ 'ಜಾಕೋಬಿಂಟೆ ಸ್ವರ್ಗರಾಜ್ಯಂ' ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ್ದರು.
ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರೆಬಾ ಎರಡು ಕನ್ನಡ ಚಿತ್ರಗಳಿಗೆ ಸಹಿ ಹಾಕಿದ್ದಾರೆ.
ನಟ ರಿಷಿ ಜೊತೆ 'ಸಕಲಕಲಾ ವಲ್ಲಭ' ಚಿತ್ರದಲ್ಲಿ ನಟಿಸಿದ್ದಾರೆ.
ಕಳೆದ ವರ್ಷ ವಿಜಯ್‌ ನಟನೆಯ 'ಬಿಗಿಲ್' ಸಿನಿಮಾದಲ್ಲೂ ಅಭಿನಯಿಸಿದ್ದರು.
ಸದ್ಯಕ್ಕೆ ಡಾಲಿ ಧನಂಜಯ್ ಜೊತೆ 'ರತ್ನನ್ ಪ್ರಪಂಚ'ಕ್ಕೆ ಸಹಿ ಮಾಡಿದ್ದಾರೆ.
2013ರಲ್ಲಿ 'Midukki' ರಿಯಾಲಿಟಿ ಶೋನಲ್ಲಿ ದ್ವಿತಿಯ ಸ್ಥಾನ ಪಡೆದುಕೊಂಡಿದ್ದರು.
ರೆಬಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋ ಶೋಟ್‌ಗಳಿವು.
'ದಯವಿಟ್ಟು ಗಮನಿಸಿ' ಖ್ಯಾತಿಯ ರೋಹಿತ್‌ ಪದಕಿ 'ರತ್ನನ್ ಪ್ರಪಂಚ'ಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

Latest Videos

click me!