ವಿಚಿತ್ರ ಕಾಂಬಿನೇಷನ್‌, ವಿಚಿತ್ರ ಲುಕ್, ವಿಚಿತ್ರ ಕತೆ: 45 ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೇನು?

First Published | Jan 16, 2025, 6:08 PM IST

ಅರ್ಜುನ್ ಜನ್ಯಾ ನಿರ್ದೇಶನ ಮಾಡಿರುವ, ರಮೇಶ್ ರೆಡ್ಡಿ ನಿರ್ಮಾಣ ಮಾಡಿರುವ ಬಹು ನಿರೀಕ್ಷಿತ ಸಿನಿಮಾ ‘45’ ಆಗಸ್ಟ್‌ 15ರಂದು ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಬಿಡುಗಡೆಯಾಗಲಿದೆ.

ಶಿವರಾಜ್‌ ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ ನಟಿಸಿರುವ, ಅರ್ಜುನ್ ಜನ್ಯ ನಿರ್ದೇಶನ ಮಾಡಿರುವ, ರಮೇಶ್ ರೆಡ್ಡಿ ನಿರ್ಮಾಣ ಮಾಡಿರುವ ಬಹು ನಿರೀಕ್ಷಿತ ಸಿನಿಮಾ ‘45’ ಆಗಸ್ಟ್‌ 15ರಂದು ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಬಿಡುಗಡೆಯಾಗಲಿದೆ.

ಬಿಡುಗಡೆ ದಿನಾಂಕ ಘೋಷಣೆ ಕಾರ್ಯಕ್ರಮದಲ್ಲಿ ಉಪೇಂದ್ರ, ‘ವಿಚಿತ್ರ ಕಾಂಬಿನೇಷನ್‌, ವಿಚಿತ್ರ ಲುಕ್, ವಿಚಿತ್ರ ಕತೆ, ಅದ್ಭುತ ವಿಷಯ ಇಟ್ಟುಕೊಂಡು ಮಾಡಿರುವ ಸಿನಿಮಾ ಇದು’ ಎಂದರು.

Tap to resize

ರಾಜ್ ಬಿ ಶೆಟ್ಟಿ, ‘ನಾನು ಈ ಸಿನಿಮಾ ಮಾಡಲ್ಲ, ನಂಗೆ ನಿರ್ದೇಶನ ಮಾಡಬೇಕು ಎಂದು ಹೇಳಿದ್ದೆ. ಅರ್ಜುನ್ ಜನ್ಯಾ ಸರ್ ಒತ್ತಾಯ ಮಾಡಿ ನಟಿಸುವಂತೆ ಮಾಡಿದರು. ಈಗ ಹೆಮ್ಮೆಯಾಗುತ್ತಿದೆ. ಈ ಸಿನಿಮಾದಲ್ಲಿ ನಟಿಸಿದ್ದು ನನ್ನ ಭಾಗ್ಯ’ ಎಂದರು.

ಅರ್ಜುನ್ ಜನ್ಯಾ, ‘ನಮ್ಮ ಸಿನಿಮಾದ ಒರಿಜಿನಲ್ ಗ್ಯಾಂಗ್‌ಸ್ಟರ್‌ ರಮೇಶ್ ರೆಡ್ಡಿ ಅವರು. ನನ್ನನ್ನು ನಂಬಿ ಕೋಟಿಗಳ ಹಣ ಹೂಡಿಕಿದ್ದಕ್ಕೆ ಅವರಿಗೆ ನಾನು ಚಿರಋಣಿ’ ಎಂದರು.

ನಿರ್ಮಾಪಕ ರಮೇಶ್ ರೆಡ್ಡಿ, ‘ಉತ್ತಮ ಕಂಟೆಂಟ್ ಇರುವ ಸಿನಿಮಾ. ಇದು 100 ಕೋಟಿ ಗಳಿಕೆಯ ಸಿನಿಮಾ ಆಗುವ ಕುರಿತು ನಿರೀಕ್ಷೆ ಇದೆ’ ಎಂದರು.

ಈ ಸಂದರ್ಭದಲ್ಲಿ ಸಚಿವ ರಾಮಲಿಂಗಾ ರೆಡ್ಡಿ, ಕೆವಿಎನ್‌ ಸಂಸ್ಥೆಯ ವೆಂಕಟ್‌ ನಾರಾಯಣ್, ಆನಂದ್ ಆಡಿಯೋ ಸಂಸ್ಥೆಯ ಆನಂದ್ ಮತ್ತು ಚಿತ್ರತಂಡದವರು ಹಾಜರಿದ್ದರು.

Latest Videos

click me!