ರವಿಚಂದ್ರನ್​ ರೀತಿ ಉಪ್ಪಿನಕಾಯಿ ಬಾಟ್ಲಿ ತೋರಿಸಿದ್ರೆ ಸೆರಗು ಸರ್ಸೋ ಸಮಸ್ಯೆನೇ ಆಗ್ತಿರಲಿಲ್ಲ- ಜಯಮಾಲಾ

Published : Mar 22, 2026, 04:48 PM IST

ನಟ ಪ್ರೇಮ್ ಅವರ 'ಸೆರಗು ಸರ್ಸೆ' ಹಾಡಿನ ಡಬಲ್ ಮೀನಿಂಗ್ ಸಾಹಿತ್ಯದ ವಿವಾದದ ಕುರಿತು ಹಿರಿಯ ನಟಿ ಜಯಮಾಲಾ ಪ್ರತಿಕ್ರಿಯಿಸಿದ್ದಾರೆ. ರವಿಚಂದ್ರನ್ ಅವರ ಹಳೆಯ ಹಾಡನ್ನು ಉಲ್ಲೇಖಿಸಿ, ಪ್ರೇಮ್ ಅವರ ಹಾಡಿನಲ್ಲಿ ಆದ ತಪ್ಪೇನೆಂದು ವಿವರಿಸಿದ್ದಾರೆ.

PREV
16
ಸೆರಗು ಸರ್ಸೆ ವಿವಾದ

ನಟ ಪ್ರೇಮ್​ ಅವರ ಸೆರಗು ಸರ್ಸೆ ಹಾಡಿನ ವಿವಾದ ಈಗಲೂ ಸಾಕಷ್ಟು ಸದ್ದು ಮಾಡುತ್ತಲೇ ಇದೆ. ಈ ಹಾಡನ್ನು ಸೋಷಿಯಲ್​ ಮೀಡಿಯಾದಿಂದ ಡಿಲೀಟ್​ ಮಾಡಲಾಗಿದೆ. ಈ ಹಾಡಿನ ಬದಲು ಬೇರೆ ಹಾಡನ್ನು ಬರೆಯುವುದಾಗಿ ಪ್ರೇಮ್​ ಇದಾಗಲೇ ಹೇಳಿದ್ದಾರೆ.

26
ಇದೇ ಮೊದಲಲ್ಲ

ಅಷ್ಟಕ್ಕೂ ಸ್ಯಾಂಡಲ್​ವುಡ್​ ಸೇರಿದಂತೆ ಇತರ ಭಾಷೆಗಳಲ್ಲಿ ಡಬಲ್​ ಮೀನಿಂಗ್​ ಹಾಡಿಗಂತೂ ಬರವೇ ಇಲ್ಲ. ಅಶ್ಲೀಲ ಸಾಹಿತ್ಯ ಎಂದು ಇದೀಗ ಏನು ಕೂಗು ಕೇಳ್ತಿದ್ಯೋ, ಆ ರೀತಿಯ ಸಾಹಿತ್ಯ ಬರೆದು ಮಧ್ಯೆ ಬೇರೆ ಬೇರೆ ವಸ್ತುಗಳನ್ನು ತೋರಿಸಿ, ಆ ಡಬಲ್​ ಮೀನಿಂಗ್​ಗಳನ್ನು ಅಲ್ಲಿಯೇ ಮುಚ್ಚಿಹಾಕಿರುವುದು ಸಾಕಷ್ಟು ಇದೆ. ಆದರೆ ಪ್ರೇಮ್​ ಅವರು ಸದ್ಯ ಸಿಕ್ಕಾಕಿಕೊಂಡು ಬಿಟ್ಟಿದ್ದಾರೆ ಅಷ್ಟೇ ಎನ್ನುವ ಮಾತು ಕೇಳಿಬರುತ್ತಿದೆ.

36
ಜಯಮಾಲಾರಿಗೆ ಪ್ರಶ್ನೆ

ಇದೀಗ, ಇದೇ ಮಾತನ್ನು ಹಿರಿಯ ನಟಿ ಜಯಮಾಲಾ ಅವರಿಗೆ ಪ್ರಶ್ನಿಸಲಾಗಿದೆ. publicnext_official ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್ ಮಾಡಲಾಗಿದೆ.

46
ರವಿಚಂದ್ರನ್​ ಹಾಡಿನಲ್ಲೂ...

ರವಿಚಂದ್ರನ್ ಅವರ song ಅಲ್ಲಿ ಹೇ ಗಂಗು ಅದು ಕ್ಲಚ್ ಹಿಡಿಯಬೇಕಾ ಒತ್ತು ಎತ್ತು ಎಲ್ಲ ಇದ್ದವು. ಇದು ಡಬಲ್​ ಮೀನಿಂಗ್​ ಹಾಡೇ. ಆದರೆ ಕೊನೆಗೆ ಅಲ್ಲಿ bike ತೋರಿಸಲಾಗಿತ್ತು. ಹಾಗಿದ್ದ ಮೇಲೆ ಪ್ರೇಮ್​ ಹಾಡಿಗೆ ಯಾಕೆ ಗಲಾಟೆ ಆಗಿದ್ದು, ಏಕೆಂದ್ರೆ ಪ್ರೇಮ್​ ಅವರು ಹೇಳುವಂತೆ ಉಪ್ಪಿನಕಾಯಿ, ಬಾಟಲು ಎಲ್ಲಾ ಇದ್ದವಲ್ಲ ಎಂದು ಜಯಮಾಲಾ ಅವರಿಗೆ ಪ್ರಶ್ನೆ ಮಾಡಲಾಗಿದೆ.

56
ಜಯಲಾಮಾ ಏನಂದ್ರು?

ಅದಕ್ಕೆ ಜಯಮಾಲಾ ಅವರು, ಹೌದು. ಆದರೆ ಪ್ರೇಮ್​ ಅವರು ತಮ್ಮ ಹಾಡಿನಲ್ಲಿ ಬಾಟಲು, ಉಪ್ಪಿನಕಾಯಿ ಎಲ್ಲವನ್ನೂ ಮೊದಲೇ ತೋರಿಸಿಬಿಟ್ಟಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಅದನ್ನು ತೋರಿಸಲಿಲ್ಲ. ಅದಕ್ಕಾಗಿಯೇ ಹೀಗಾಯಿತು ಎಂದಿದ್ದಾರೆ.

66
ನೆಟ್ಟಿಗರ ಆಗ್ರಹ

ಒಟ್ಟಿನಲ್ಲಿ, ಇನ್ನು ಮುಂದೆ ಇಂಥ ಅಶ್ಲೀಲ ಸಾಹಿತ್ಯ ಬರೆಯುವ ಮುನ್ನ ನೂರೊಂದು ಬಾರಿ ಯೋಚನೆ ಮಾಡುವ ಪರಿಸ್ಥಿತಿ ಸದ್ಯಕ್ಕಾದರೂ ಬಂದಿರುವುದು ಒಳ್ಳೆಯ ಬೆಳವಣಿಗೆ. ಆದರೆ ಇಂಥ ಸಾಹಿತ್ಯ ಬರೆದು ಬೇರೊಂದು ವಸ್ತುವನ್ನು ತೋರಿಸಿ ಅಶ್ಲೀಲ ಸಾಹಿತ್ಯವೇ ಅಲ್ಲ ಎಂದು ಸಮಜಾಯಿಷಿ ಕೊಡುವುದು ಕೂಡ ನಿಲ್ಲಬೇಕಿದೆ ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories