ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಲಿವುಡ್ ಹಂಗಾಮ ಸ್ಟೈಲ್ ಐಕಾನ್ ಅವಾರ್ಡ್ 2023 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅವಾರ್ಡ್ ಕಾರ್ಯಕ್ರಮಕ್ಕೆ ಡೇವಿಡ್ ಕೋಮಾ ಡಿಸೈನ್ ಮಾಡಿರುವ ಬ್ಲ್ಯಾಕ್ ಆಂಡ್ ಸಿಲ್ವರ್ ಬಣ್ಣದ ಸ್ಟ್ರಾಪ್‌ಲೆಸ್ ಮ್ಯಾಕ್ಸಿ ಧರಿಸಿದ್ದಾರೆ.
ಈ ಗೌನ್‌ನ ಬೆಲೆ 3 ಲಕ್ಷ 49 ಸಾವರಿ ಎನ್ನಲಾಗಿದೆ. ಇದನ್ನು Plexi and crystal embroidery stripe gown ಎಂದು ಕರೆಯಲಾಗುತ್ತದೆ.
ಈ ಫೋಟೋಗಳಲ್ಲಿ ರಶ್ಮಿಕಾ ಮಂದಣ್ಣ ನೋಡಲು ಹಾಲಿವುಡ್ ನಾಯಕಿಯರ ರೀತಿ ಕಾಣಿಸುತ್ತಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಮಕ್ಕಳು ದಯವಿಟ್ಟು ಈ ಫೋಟೋ ನೋಡಬೇಡಿ ರಾತ್ರಿ ನಿದ್ರೆ ಬರಲ್ಲ ಎಂದು ಒಬ್ಬ ಕಾಮೆಂಟ್ ಮಾಡಿದರೆ ಮತ್ತೊಬ್ಬ ಇದು ದೆವ್ವ ಅಲ್ಲ ಕಣ್ರೋ ರಶ್ಮಿಕಾ ಮಂದಣ್ಣ ಸುಮ್ಮನೆ ಇರೋ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
'ಬಾಲಿವುಡ್ ಹಂಗಾಮಾ ಅವಾರ್ಡ್ ಕಾರ್ಯಕ್ರಮಕ್ಕೆ ನಾನು ಧರಿಸಿರುವ ಬಟ್ಟೆ ಇದು. ಇದು ನಿಮಗೆ ಓಕೆನಾ?' ಎಂದು ಬರೆದುಕೊಂಡು ಅಭಿಮಾನಿಗಳ ಅಭಿಪ್ರಾಯ ಕೇಳಿದ್ದಾರೆ.