ದಿಯಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿ ಇಟ್ಟ ಸರಳ ಸಿಗ್ದ ಸುಂದರಿ ಖುಷಿ ರವಿ ಹೊಸ ಲುಕ್ ನಲ್ಲಿ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದ್ದಾರೆ. ಬೆಂಗಳೂರಿನ ಕೆ ಆರ್ ಮಾರುಕಟ್ಟೆಯಲ್ಲಿ ಬೆಳಂ ಬೆಳಗ್ಗೆ ಹೂವುಗಳ ಮಧ್ಯೆ ಫೋಟೋಗೆ ಫೋಸ್ ಕೊಟ್ಟಿದ್ದಾರೆ.
ತಿಳಿನೀಲಿ ಬಣ್ಣದ ಸೀರೆಯುಟ್ಟು ಹೋಮ್ಲಿ ಲುಕ್ ನಲ್ಲಿ ಕಂಗೊಳಿಸಿರುವ ಖುಷಿಯ ಚೆಂದದ ಪಟ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಹೂವುಗಳ ಮಧ್ಯೆ ಮತ್ತೊಂದು ಹೂವು ನೋಡಿ ಫ್ಯಾನ್ಸ್ ಮನಮೋಹಕ ಎನ್ನುತ್ತಿದ್ದಾರೆ.
ವಿಂಟೇಜ್ ಲುಕ್ ನಲ್ಲಿ ಬಹಳ ಸೊಗಸಾಗಿ ಮೂಡಿಬಂದಿರುವ ಫೋಟೋಶೂಟ್ ಹಿಂದಿನ ಶಕ್ತಿ ನಿರ್ಮಾಪಕ ನಾಗರಾಜ್ ಸೋಮಯಾಜಿ. ಈ ಸ್ಪೆಷಲ್ ಫೋಟೋಶೂಟ್ ಐಡಿಯಾ ಹಾಗೂ ಫೋಟೋಗ್ರಫಿ ಕೈಚಳಕ ಇವರದ್ದೆ. ತಮ್ಮದೇ ಫೋಕಸ್ ಸ್ಟುಡಿಯೋನಡಿ ಬ್ಯೂಟಿಫುಲ್ ಫೋಟೋಶೂಟ್ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿ ಕಾರ್ಯಕ್ರಮಗಳು ಸೇರಿದಂತೆ ಒಂದಿಷ್ಟು ತಾರೆಯರಿಗೆ ಫೋಕಸ್ ಫೋಟೋಗ್ರಫಿ ಸ್ಟುಡಿಯೋ ಅಚ್ಚುಮೆಚ್ಚು. ಮದುವೆ ಕಾರ್ಯಕ್ರಮಗಳ ಸೇರಿದಂತೆ ಇನ್ನಿತರ ಶುಭ ಸಂದರ್ಭದ ಚೆಂದದ ಫೋಟೋಗಳನ್ನು ಸೆರೆಹಿಡಿಯುವಲ್ಲಿ ಈ ಸ್ಟುಡಿಯೋ ಹೆಸರುವಾಸಿ. ಇದೀಗ ದಿಯಾ ಅವರನ್ನು ಸುಂದರವಾಗಿ ಸೆರೆಹಿಡಿದ್ದಾರೆ.
ನಟಿ ಖುಷಿ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸುಂದರ ಫೋಟೋಗಳನ್ನು ನಟಿ ಖುಷಿ ರವಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಖುಷಿ ದಿಯಾ ಸಿನಿಮಾ ಮೂಲಕ ದೊಡ್ಡದ ಖ್ಯಾತಿ ಗಳಿಸಿದರು. ಈ ಸಿನಿಮಾ ಖುಷಿ ಅವರಿಗೆ ದೊಡ್ಡ ಸಕ್ಸಸ್ ತಂದುಕೊಟ್ಟಿತು. ಆದರೆ ಆ ಸಿನಿಮಾ ಬಳಿಕ ಖುಷಿ ಮತ್ತೆ ತೆರೆಮೇಲೆ ಮಿಂಚಿಲ್ಲ.
ಖುಷಿ ಸದ್ಯ ಸ್ಪೂಕಿ ಕಾಲೇಜ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್‌ಗೆ ಖುಷಿ ಎದುರು ನೋಡುತ್ತಿದ್ದಾರೆ. ಇನ್ನೂ ನಕ್ಷೆ ಎನ್ನುವ ಮತ್ತೊಂದು ಸಿನಿಮಾಮಾಡಿತ್ತಿದ್ದಾರೆ. ಖುಷಿ ಅವರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.