ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ಚಿತ್ರದ ಹೆಸರು ‘ಸೂತ್ರಧಾರಿ’.
26
ಚಂದನ್ ಶೆಟ್ಟಿಗೆ ಜೋಡಿಯಾಗಿ ಅಪೂರ್ವ ನಟಿಸುತ್ತಿದ್ದಾರೆ. ಕಿರಣ್ ಕುಮಾರ್ ನಿರ್ದೇಶನ, ನವರಸನ್ ನಿರ್ಮಾಣದ ಚಿತ್ರವಿದು. ಖ್ಯಾತ ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಚಿತ್ರದ ಟೈಟಲ್ ಬಿಡುಗಡೆ ಮಾಡಿದರು.
36
ಚಂದನ್ ಶೆಟ್ಟಿಮಾತನಾಡಿ ‘ನಾನು ಪೊಲೀಸ್ ಪಾತ್ರ ಮಾಡುತ್ತಿರುವೆ. ಮರ್ಡರ್ ಮಿಸ್ಟ್ರಿ ಕತೆ ಈ ಚಿತ್ರದಲ್ಲಿದೆ. ಚಿತ್ರಕ್ಕಾಗಿ ನಾನು 12 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ನಟನೆ ಜತೆಗೆ ಸಂಗೀತ ನಿರ್ದೇಶನ ಕೂಡ ನನ್ನದೇ’ ಎಂದರು.
46
ಇದು ನವರಸನ್ ನಿರ್ಮಾಣದ 5ನೇ ಸಿನಿಮಾ. ಚಿತ್ರಕ್ಕೆ ಪಿ ಕೆ ಎಚ್ ದಾಸ್ ಕ್ಯಾಮೆರಾ ಹಿಡಿಯಲಿದ್ದಾರೆ. ತಬಲ ನಾಣಿ, ಗಣೇಶ್ ನಾರಾಯಣ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
56
‘ನವರಸನ್ ಹಾಗೂ ಚಂದನ್ ಶೆಟ್ಟಿನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಮೆಚ್ಚುಗೆ ಆಗುವಂತೆ ಸಿನಿಮಾ ಮಾಡುತ್ತೇನೆ’ ಎಂದರು ನಿರ್ದೇಶಕ ಕಿರಣ್ ರಾಜ್.
66
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮ ಹರೀಶ್, ನಿರ್ಮಾಪಕರಾದ ಕೆಸಿಎನ್ ಕುಮಾರ್, ಗೋವಿಂದರಾಜು, ಸಂಜಯ… ಗೌಡ, ಗಿರೀಶ್ ಹಾಗೂ ನಿವೇದಿತಾ ಗೌಡ ಚಿತ್ರಕ್ಕೆ ಶುಭ ಕೋರಿದರು.