ಕೆಂಪು ಸೀರೇಲಿ ರಂಗಿತರಂಗ ಬೆಡಗಿ… ನಿಮ್ಮ ನಗು ನೋಡಿ ಹಾರ್ಟ್ ಬೀಟ್ ಹೆಚ್ಚಾಗ್ತಿದೆ ಎಂದ ಫ್ಯಾನ್ಸ್

Published : Apr 24, 2024, 04:03 PM IST

ರಂಗಿತರಂಗ ಸಿನಿಮಾ ಮೂಲಕ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿಕೊಟ್ಟ ನೀಳ ಸುಂದರಿ ರಾಧಿಕಾ ನಾರಾಯಣ್, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಂಪು ಸೀರೆಯುಟ್ಟ ಫೋಟೋ ಶೇರ್ ಮಾಡೋ ಮೂಲಕ ಸುದ್ದಿಯಾಗಿದ್ದಾರೆ.   

PREV
17
ಕೆಂಪು ಸೀರೇಲಿ ರಂಗಿತರಂಗ ಬೆಡಗಿ… ನಿಮ್ಮ ನಗು ನೋಡಿ ಹಾರ್ಟ್ ಬೀಟ್ ಹೆಚ್ಚಾಗ್ತಿದೆ ಎಂದ ಫ್ಯಾನ್ಸ್

ಕನ್ನಡ ಸಿನಿಮಾರಂಗದಲ್ಲಿ ಹೊಸ ಭರವಸೆ ಹುಟ್ಟಿಸಿದಂತಹ ಹೊಸತನದ ಸೂಪರ್ ಹಿಟ್ ಸಿನಿಮಾ ರಂಗಿತರಂಗ. ಹೊಸಬರೇ ತುಂಬಿದ ಈ ಸಿನಿಮಾದಲ್ಲಿ ನಾಯಕಿಯಾಗಿ ಸ್ಯಾಂಡಲ್ ವುಡ್‌ಗೆ ಎಂಟ್ರಿಕೊಟ್ಟ ನಟಿ ರಾಧಿಕಾ ನಾರಾಯಣ್ (Radhika Narayan). 
 

27

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಾಧಿಕಾ ನಾರಾಯಣ್ ಇದೀಗ ಕೆಂಪು ಸೀರೆಯುಟ್ಟಿರುವ ಹಳೆಯ ಫೋಟೋಗಳನ್ನು ಶೇರ್ ಮಾಡಿದ್ದು, ರಾಧಿಕಾ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದು ಅಭಿಮಾನಿಗಳು ಖುಷಿಯಾಗಿದ್ದಾರೆ. 
 

37

ಸೀರೆಲಿ ರಾಧಿಕಾರ ಫೋಟೋ ನೊಡಿ ಫ್ಯಾನ್ಸ್ ಏನೇನೋ ಕಾಮೇಂಟ್ ಮಾಡಿದ್ದು, ಒಬ್ಬರು ಫ್ಯಾನ್ ಸ್ಕೂಲಲ್ಲಿ ಹೇಳಿಕೊಡ್ಬೇಕಿತ್ತು ಟೀಚರ್ರು.. ಈಗ ಹಾಳಾಗಿ ಹೋದ್ವಿ ಎಂದು ಹೇಳಿದ್ರೆ, ಮತ್ತೊಬ್ಬರು ನಿಮ್ಮ ನಗು ನೋಡಿದ್ರೆ ಹಾರ್ಟ್ ಬೀಟ್ ಹೆಚ್ಚಾಗ್ತಿದೆ ಎಂದು ಹೇಳಿದ್ದಾರೆ. 
 

47

ಸಿಲ್ವರ್ ಬಾರ್ಡರ್ ಇರುವ ರಕ್ತಕೆಂಪು ಬಣ್ಣದ ಸೀರೆಗೆ, ಸಿಲ್ವರ್ ಬಣ್ಣದ ಸ್ಲೀವ್ ಲೆಸ್ ಬ್ಲೌಸ್ ಧರಿಸಿರುವ ರಾಧಿಕಾ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಡಿಂಪಲ್ ಬ್ಯೂಟಿ ತುಂಬಾನೆ ಕ್ಯೂಟ್ ಮತ್ತು ಸುಂದರವಾಗಿ ಕಾಣಿಸುತ್ತಿದ್ದಾರೆ ಅಂತ ಫ್ಯಾನ್ಸ್ ಕವನಗಳನ್ನೇ ಗೀಚಿದ್ದಾರೆ. 
 

57

ಇನ್ನು ಕರಿಯರ್ ವಿಷ್ಯಕ್ಕೆ ಬರೋದಾದ್ರೆ ರಾಧಿಕಾ ನಾರಾಯಣ್ ರಂಗಿತರಂಗ (Rangitaranga), ಯೂಟರ್ನ್, ಕಾಫಿ ತೋಟ ಮೊದಲಾದ ಥ್ರಿಲ್ಲರ್ ಸಿನಿಮಾಗಳಲ್ಲಿ ನಟಿಸಿರುವ ಇವರು, ಕೊನೆಯದಾಗಿ ರಮೇಶ್ ಅರವಿಂದ್ ಜೊತೆ ಶಿವಾಜಿ ಸುರತ್ಕಲ್ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 
 

67

ಉಡುಪಿ ಮೂಲದ ರಾಧಿಕಾ, ವೃತ್ತಿಯಲ್ಲಿ ಇಂಜಿನಿಯರ್ (engineer). ಮಾಡೆಲ್ ಆಗುವ ಬಣ್ಣದ ಲೋಕಕ್ಕೆ ಕಾಲಿಟ್ಟ ರಾಧಿಕಾ ಬಳಿಕ ಹಲವು ಜಾಹೀರಾತುಗಳಲ್ಲಿ, ಸಿನಿಮಾಗಳಲ್ಲಿ ಮತ್ತು ಶಾರ್ಟ್ ಫಿಲಂಗಳಲ್ಲಿ ಅಭಿನಯಿಸಿದ್ದಾರೆ. 
 

77

ರಾಧಿಕಾ ಕೇವಲ ನಟಿ ಮಾತ್ರವಲ್ಲ ಟ್ರೈಂಡ್ ಕಥಕ್ ಡ್ಯಾನ್ಸರ್ ಕೂಡ ಹೌದು. ಅಷ್ಟೇ ಅಲ್ಲ ಇವರು ಯೋಗ ತರಬೇತುದಾರರೂ (Yoga instructor) ಆಗಿದ್ದು, ಸ್ವಾಮಿ ವಿವೇಕಾನಂದ ಯೋಗ ಅನುಸಾಧನಾ ಸಂಸ್ಥಾನದಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories