ಅಮೃತವರ್ಷಿಣಿ-2 ಸಿನಿಮಾಕ್ಕೆ ಲಕ್ಷ್ಮೀನಿವಾಸ ಸೈಕೋ ಜಯಂತೇ ನಾಯಕ! ಅನೌನ್ಸ್​ ಮಾಡಿದ್ರು ರಮೇಶ್​...

Published : Aug 18, 2025, 11:19 PM IST

೧೯೯೭ರ ಬ್ಲಾಕ್‌ಬಸ್ಟರ್ ಚಿತ್ರ 'ಅಮೃತವರ್ಷಿಣಿ' ಮಧುರ ಗೀತೆಗಳು ಮತ್ತು ಕಥೆಯಿಂದ ಇಂದಿಗೂ ಜನಮನದಲ್ಲಿ ಉಳಿದಿದೆ. ಈ ಚಿತ್ರದ ರೀಮೇಕ್ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ರಮೇಶ್ ಅರವಿಂದ್ ಅವರು ಲಕ್ಷ್ಮೀ ನಿವಾಸ ಸೈಕೋ ಜಯಂತ್ ಮತ್ತು ವಂಶಿ ಅವರನ್ನು ನಾಯಕ-ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

PREV
18
27 ವರ್ಷಕಳೆದರೂ ಎವರ್​ಗ್ರೀನ್​ ಚಿತ್ರ

ಕೆಲವು ಚಿತ್ರಗಳೇ ಹಾಗೆ. ಎಷ್ಟೇ ದಶಕ ಕಳೆದರೂ ಆ ಸಿನಿಮಾಗಳನ್ನು ಮತ್ತೆ ಮತ್ತೆ ನೋಡಬೇಕು ಎನ್ನುವ ಆಸೆ ಹುಟ್ಟುತ್ತದೆ. ಅದರಲ್ಲಿ ಇರುವ ಹಾಡುಗಳನ್ನು ಮೆಲುಕು ಹಾಕಿದರೆ ಅದೇನೋ ಆನಂದ. ಇತ್ತೀಚಿನ ಹೊಡಿ, ಬಡಿ, ಲಾಂಗು, ಮಚ್ಚು, ಕೊ*ಲೆ, ರ*ಕ್ತಪಾತವನ್ನೇ ವಿಜೃಂಭಿಸುವ ದೊಡ್ಡ ನಾಯಕರ ದಂಡೇ ಇದೆ. ಆದರೆ ಅವುಗಳ ಪೈಕಿ ಅಂಥದ್ದೇ ಮನಸ್ಥಿತಿ ಇರುವ ಸಿನಿಪ್ರಿಯರಿಂದ ಕೆಲವು ಬ್ಲಾಕ್​ ಬಸ್ಟರ್​ ಎಂದು ಸಾಬೀತಾದರೂ ಕೆಲವೇ ವರ್ಷಗಳಲ್ಲಿ ಮರೆತು ಹೋಗುತ್ತವೆ. ಆದರೆ ಇನ್ನು ಕೆಲವು ನವೀರಾದ ಕಥೆಯುಳ್ಳ ಚಿತ್ರಗಳ ಜನಮಾನಸದಲದಲ್ಲಿ ಅಚ್ಚಳಿಯದೇ ನಿಲ್ಲುವುದು ಉಂಟು. ಅವುಗಳಲ್ಲಿ ಒಂದು 1997ರಲ್ಲಿ ತೆರೆಕಂಡ ಚಿತ್ರ ಅಮೃತವರ್ಷಿಣಿ.

28
ಹಾಡುಗಳೂ ಸೂಪರ್​ ಡೂಪರ್​

ಇದರ ಕಥೆ ಮಾತ್ರವಲ್ಲದೇ, ಬಹುತೇಕ ಎಲ್ಲಾ ಹಾಡುಗಳೂ ಸೂಪರ್ ಡೂಪರ್​. ದೇವಾ ಸಂಗೀತ ಸಂಯೋಜನೆಯ ‘ತುಂತುರು..’, ‘ಈ ಸುಂದರ ಬೆಳದಿಂಗಳ..’, ‘ಮನಸೇ ಬದುಕು..’, ‘ತಂಪು ತಂಗಾಳಿ..’, ‘ಭಲೇ ಭಲೇ ಚಂದದ ಚಂದುಳ್ಳಿ ಹೆಣ್ಣು ನೀನು..’, ‘ಎಲ್ಲಾ ಶಿಲ್ಪಗಳಿಗೂ..’ ಹಾಡುಗಳನ್ನು ಕೇಳಿದರೆ ಏನೋ ಖುಷಿ ಕೊಡುವಂತಿದೆ. ರಮೇಶ್ ಅರವಿಂದ್ , ಸುಹಾಸಿನಿ , ಶರತ್ ಬಾಬು, ನಿವೇದಿತಾ ಜೈನ್ ಅಭಿನಯದ ತ್ರಿಕೋನ ಪ್ರೇಮಕಥೆಯ ಸಿನಿಮಾ ಇದಾಗಿದೆ. 1997ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪೈಕಿ ‘ಅಮೃತವರ್ಷಿಣಿ’ ಕೂಡ ಒಂದು.

38
ದಿನೇಶ್ ಬಾಬು ನಿರ್ದೇಶನದ ಚಿತ್ರ

ದಿನೇಶ್ ಬಾಬು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದರು. ಇಂದಿಗೂ ಅದರ ರೀಮೇಕ್​ ಮಾಡಿದರೆ ಖಂಡಿತವಾಗಿಯೂ ಮತ್ತೊಮ್ಮೆ ಚಿತ್ರ ಹಿಟ್​ ಆಗುವಲ್ಲಿ ಆಶ್ಚರ್ಯವೇ ಇಲ್ಲ. ಇದೀಗ ರಿಮೇಕ್​ ಮಾಡಿದರೆ ಹೀರೋ, ಹೀರೋಯಿನ್​ ಯಾರಾಗಬೇಕು ಎಂಬ ಪ್ರಶ್ನೆಗೆ ಹಲವರು ತಮ್ಮ ನೆಚ್ಚಿನ ನಾಯಕ-ನಾಯಕಿಯ ಹೆಸರು ಹೇಳುತ್ತಾರೆ.

48
ಸೈಕೋ ಜಯಂತ್​ ಅಮೃತವರ್ಷಿಣಿ ರೀಮೇಕ್​ಗೆ ನಾಯಕ

ಆದರೆ, ಈ ಚಿತ್ರದ ನಾಯಕ ರಮೇಶ್​ ಅರವಿಂದ್​ ಅವರು ಈ ಚಿತ್ರಕ್ಕೆ ಲಕ್ಷ್ಮಿ ನಿವಾಸ ಸೈಕೋ ಜಯಂತ್​ ಅರ್ಥಾತ್​ ದೀಪಕ್​ ಸುಬ್ರಹ್ಮಣ್ಯ ಅವರೇ ಎಂದಿದ್ದಾರೆ. ನಾಯಕಿಯಾಗಿ ಮಹಾನಟಿಯಲ್ಲಿ ನಟಿಸ್ತಿರೋ ವಂಶಿ ಎಂದಿದ್ದಾರೆ ರಮೇಶ್​. ಅಷ್ಟಕ್ಕೂ ಮಹಾನಟಿ ಸೀಸನ್​-2 ನಲ್ಲಿ ಈ ವಾರ ಅಮೃತವರ್ಷಿಣಿಯ ಕ್ಲೈಮ್ಯಾಕ್ಸ್​ ಸೀನ್​ಗೆ ಈ ಇಬ್ಬರು ನಟಿಸಿದ್ದರು. ಅವರ ಅದ್ಭುತ ನಟನೆಯನ್ನು ಕಂಡು ರಮೇಶ್​ ಮನಸೋತಿದ್ದಾರೆ.

58
ಅಮೃತವರ್ಷಿಣಿ ರೀಮೇಕ್​ಗೆ ನಾಯಕ-ನಾಯಕಿ

ಆದ್ದರಿಂದ ಇವರಿಬ್ಬರೇ ಅಮೃತವರ್ಷಿಣಿ ರೀಮೇಕ್​ಗೆ ನಾಯಕ-ನಾಯಕಿ ಆಗಬೇಕು ಎಂದಿದ್ದಾರೆ. 2025ರಲ್ಲಿ ಒಂದು ವೇಳೆ ಈ ಚಿತ್ರವನ್ನು ರೀಮೇಕ್​ ಮಾಡಿದ್ದೇ ಆದಲ್ಲಿ ಇವರೇ ನಾಯಕ-ನಾಯಕಿ ಎಂದಿದ್ದಾರೆ.

68
ಸಿನಿಮಾ ಸ್ಟೋರಿ ಹೀಗಿದೆ...

ಇನ್ನು ಈ ಸಿನಿಮಾ ಸ್ಟೋರಿ ಹೇಳುವುದಾದರೆ, ಹೇಮಂತ್ ಮತ್ತು ವೀಣಾ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿರುತ್ತಾರೆ. ಇವರಿಬ್ಬರ ಹೇಮಂತ್ ಗೆಳೆಯನಾದ ಅಭಿಷೇಕ್ ಭಾರದ್ವಾಜ್ ಬರುತ್ತಾನೆ. ಗೆಳತಿ ಶ್ರುತಿ ಸಾವಿನಿಂದ ಅಭಿಷೇಕ್ ಮಾನಸಿಕವಾಗಿ ಖಿನ್ನತೆಗೊಳಗಾಗಿರುತ್ತಾನೆ. ಈ ವೇಳೆ ಗೆಳೆಯ ಶರತ್ ಪತ್ನಿ ವೀಣಾ ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ಹುಚ್ಚು ಹಠಕ್ಕೆ ಬರುತ್ತಾನೆ.

78
ತ್ರಿಕೋನ ಪ್ರೇಮಕಥೆ ಅಮೃತವರ್ಷಿಣಿ

ಹೀಗಿರುವಾಗ ಒಮ್ಮೆ ಪ್ರವಾಸಿ ಸ್ಥಳದಲ್ಲಿ ಬೆಟ್ಟದಿಂದ ಗೆಳೆಯನನ್ನು ಬೆಟ್ಟದಿಂದ ತಳ್ಳಿ ಸಾಯಿಸಿ, ನಂತರ ಅದೊಂದು ಅಪಘಾತ ಎಂಬಂತೆ ಬಿಂಬಿಸುವಲ್ಲಿಯೂ ಅಭಿಷೇಕ್ ಯಶಸ್ವಿಯಾಗುತ್ತಾನೆ. ಗಂಡನ ಸಾವಿನ ಬಳಿಕ ಒಂಟಿಯಾದ ವೀಣಾ ಸ್ವಲ್ಪ ಸಮಯದವರೆಗೆ ಮನೆಯಲ್ಲಿರುವಂತೆ ಅಭಿಷೇಕ್ ಬಳಿ ಮನವಿ ಮಾಡಿಕೊಳ್ಳುತ್ತಾಳೆ. ವೀಣಾ ಮಾತಿನಿಂದ ಖುಷಿಯಾಗಿ ಅಭಿಷೇಕ್ ಸಹ ಉಳಿದುಕೊಳ್ಳುತ್ತಾನೆ.

88
ಅಮೃತವರ್ಷಿಣಿ ಕ್ಲೈಮ್ಯಾಕ್ಸ್​

ಮುಂದೆ ವೀಣಾಗೆ ತನ್ನ ಗಂಡನ ಸಾವು ಕೊಲೆ ಮತ್ತು ಅದು ಅಭಿಷೇಕ್ ಮಾಡಿದ್ದು ಅನ್ನೋದು ಗೊತ್ತಾಗುತ್ತದೆ. ಮುಂದೆ ವೀಣಾ ತೆಗೆದುಕೊಳ್ಳುವ ನಿರ್ಧಾರಗಳು ಅಭಿಷೇಕ್‌ನನ್ನು ತೀವ್ರ ವಿಚಲಿತನಾಗುವಂತೆ ಮಾಡುತ್ತದೆ. ಅಭಿಷೇಕ್‌ನನ್ನು ವೀಣಾ ಕ್ಷಮಿಸ್ತಾಳಾ? ಅಭಿಷೇಕ್ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನಾ ಅನ್ನೋದು ಚಿತ್ರದ ಸಸ್ಪೆನ್ಸ್.

Read more Photos on
click me!

Recommended Stories