ನಮ್ಮ ಜೀವನಕ್ಕೆ ಬಂದದ್ದಕ್ಕಾಗಿ ಥ್ಯಾಂಕ್ಯೂ…. ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಪ್ರಣಿತಾ ಸುಭಾಷ್

Published : Aug 18, 2025, 06:31 PM IST

ಚಂದನವನದ ಬ್ಯೂಟಿ ಪ್ರಣಿತಾ ಸುಭಾಷ್ ತಮ್ಮ ಮಗ ಜೈ ಹುಟ್ಟುಹಬ್ಬದ ಸಂಭ್ರದಲ್ಲಿದ್ದು, ಮೊದಲನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಗನಿಗೆ ನಮ್ಮ ಜೀವನಕ್ಕೆ ಬಂದದ್ದಕ್ಕಾಗಿ ಥ್ಯಾಂಕ್ಯೂ ಎಂದಿದ್ದಾರೆ.

PREV
18

ಪೊರ್ಕಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ, ಬಳಿಕ ತಮ್ಮ ಅಭಿನಯದ ಮೂಲಕ ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಸಿನಿಮಾದಲ್ಲಿ ಮೋಡಿ ಮಾಡಿದ ಬೆಡಗಿ ಪ್ರಣಿತಾ ಸುಭಾಷ್ (Pranitha Subhash) ಇದೀಗ ಇಬ್ಬರು ಮುದ್ದಿನ ಮಕ್ಕಳ ತಾಯಿ.

28

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಪ್ರಣಿತಾ, ತಮ್ಮ ಮಕ್ಕಳ ಜೊತೆಗಿನ ಮಧುರ ಕ್ಷಣಗಳ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೃಷ್ಣ ಜನ್ಮಾಷ್ಟಮಿಯಂದು ಮಗ ಜೈಗೆ ಕೃಷ್ಣನ ವೇಷ ಧರಿಸಿ, ತಾವು ಯಶೋಧೆಯಾಗಿ ಪೋಸ್ ಕೊಟ್ಟಿದ್ದರು.

38

ಇದೀಗ ತಮ್ಮ ಪುಟ್ಟ ಮಗನ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಪ್ರಣಿತಾ ಸುಭಾಷ್. ಈ ಹಿನ್ನೆಲೆಯಲ್ಲಿ ಮಗನ ಜೊತೆಗಿನ ಮುದ್ದಾದ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡು ಶುಭ ಕೋರಿದ್ದಾರೆ.

48

ಜೈ! ನಮ್ಮ ಜೀವನದಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು, ನೀವು ನಮ್ಮ ಸುತ್ತಲೂ ಇರುವುದು ನಮ್ಮ ಅದೃಷ್ಟ. ಜೀವನ ಎಷ್ಟು ಮಜವಾಗಿರುತ್ತದೆ ಎಂಬುದನ್ನು ನನಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು. ಐ ಲವ್ ಯೂ ಎಂದು ಬರೆದುಕೊಂಡಿದ್ದಾರೆ ಪ್ರಣಿತಾ.

58

ಈ ಫೋಟೊಗಳಲ್ಲಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಮಗುವನ್ನು ಕೈಯಲ್ಲಿ ಹಿಡಿದು, ಮುದ್ದಾಗಿ ನಗುತ್ತಿರುವ ಪ್ರಣಿತಾರನ್ನು ಕಾಣಬಹುದು. ಜೊತೆಗೆ ಅಲ್ಲಿಂದ ಇಲ್ಲಿವರೆಗಿನ ಮಗನ ಸ್ಪೆಷಲ್ ಕ್ಷಣಗಳನ್ನು ನಟಿ ಸೆರೆ ಹಿಡಿದು ಶೇರ್ ಮಾಡಿದ್ದಾರೆ.

68

ಇದರ ಜೊತೆಗೆ ಮಗುವಿಗೆ ಮುದ್ದು ಮಾಡುವ, ಪತಿ ಕೈಯಲ್ಲಿ ಮಗುವನ್ನು ಹಿಡಿದಿರುವ ಹಾಗೂ ನಾಮಕರಣ ಶಾಸ್ತ್ರದಲ್ಲಿ ಮಗುವಿಗೆ ಆರತಿ ಮಾಡುತ್ತಿರುವ ಫೋಟೊಗಳು ಕೂಡ ಸೇರಿವೆ. ಇವುಗಳನ್ನು ಹಂಚಿಕೊಳ್ಳುವ ಮೂಲಕ ಮಗು ಬಂದ ಮೇಲೆ ಜೀವನ ಎಷ್ಟೊಂದು ಸುಂದರವಾಗಿದೆ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.

78

ಪ್ರಣಿತಾ ಸುಭಾಷ್ ಸಿನಿಮಾ ರಂಗದಲ್ಲಿ ಟಾಪ್ ನಲ್ಲಿ ಮಿಂಚುತ್ತಿರುವಾಗಲೇ 2021ರಲ್ಲಿ ಬ್ಯುಸಿನೆಸ್ ಮ್ಯಾನ್ ನಿತಿನ್ ರಾಜು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2022ರಲ್ಲಿ ಮೊದಲ ಮಗಳು ಆರ್ನಾಗೂ, ಕಳೆದ ವರ್ಷ ಎರಡನೇ ಮಗು ಜೈ ಕೃಷ್ಣನಿಗೂ ಜನ್ಮ ನೀಡಿದರು. ಇದೀಗ ಮಗನ ಮೊದಲನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

88

ಮದುವೆಯಾಗಿ ಮಕ್ಕಳಾದ ಬಳಿಕ ಪ್ರಣಿತಾ ಸುಭಾಷ್, ಸಿನಿಮಾದಿಂದ ದೂರವಿದ್ದಾರೆ, ಆದರೆ ಫ್ಯಾಷನ್ ಶೋ, ಫ್ಯಾಷನ್ ಈವೆಂಟ್ ಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಇತ್ತೀಚೆಗೆ ಕೇನ್ಸ್ ಫಿಲಂ ಫೆಸ್ಟಿವಲ್ ನಲ್ಲೂ ಭಾಗಿಯಾಗಿದ್ದರು. ಪ್ರಣಿತಾ ಕೊನೆಯದಾಗಿ ಕನ್ನಡದಲ್ಲಿ ರಾಮನ ಅವತಾರ ಸಿನಿಮಾದಲ್ಲಿ ನಟಿಸಿದ್ದರು.

Read more Photos on
click me!

Recommended Stories