ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿಯಲ್ಲಿ (Mr and Mrs Ramachari) ಮಿಂಚಿರುವ ನಟಿ ಅಶ್ವಿತಿ- ಅದ್ವಿತಿ.
ಅಪ್ಪ ನೀನು ಎಲ್ಲೇ ಇದ್ದರೂ ಖುಷಿಯಾಗಿರು ನೆಮ್ಮದಿಯಾಗಿ ಮಲಗು ಎಂದು ಅಶ್ವಿತಿ ಶೆಟ್ಟಿ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಅಪ್ಪ ದಯವಿಟ್ಟು ಮರಳಿ ಬಾ, ಅಪ್ಪ ಓಂ ಶಾಂತಿ ಎಂದು ಅದ್ವಿತಿ ಶೆಟ್ಟಿ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಅದ್ವಿತಿ ಶೆಟ್ಟಿಗೆ ಅಭಿಮಾನಿಗಳು ಧೈರ್ಯ ಹೇಳಿದ್ದಾರೆ. ತಂದೆಯನ್ನು ಕಳೆದುಕೊಂಡು ನೋವಿನಲ್ಲಿರುವ ನಟಿಯರಿಗೆ ಸಮಾಧಾನ ಮಾಡಿದ್ದಾರೆ.
ಮಂಗಳೂರಿನ ಈ ಕ್ಯೂಟಿ,ಬಾಲ್ಯದಿಂದಲೂ ಸಾಂಸ್ಕತಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡ ಪ್ರತಿಭೆ. ನೃತ್ಯವೆಂದರೆ ನಿಂತಲ್ಲೇ ಕಾಲು ಕುಣಿವಷ್ಟು ಕ್ರೇಜ್ ಅದ್ವಿತಿಗಿದೆ.
ಐಎಎಸ್ ಅಧಿಕಾರಿ ಆಗುವ ಎಲ್ಲಾ ತಯಾರಿಯಲ್ಲೂ ತೊಡಗಿದ್ದಇವರಿಗೆ ಅದೃಷ್ಟ ಬರೆದಿದ್ದು ಮಾತ್ರ ಬೇರೆನೇ. ತಾನು ನಟಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತೇನೆ ಎಂದು ಕನಸಿನಲ್ಲೂ ಎನಿಸಿರದ ಇವರಿಗೆ ಬಣ್ಣದ ಲೋಕ ಕೈ ಬೀಸಿ ಕರೆುತು,ಅದರ ಫಲವಾಗಿ ಇಂದು ಕನ್ನಡ ಚಿತ್ರರಂಗದಲ್ಲಿಉದಯೋನ್ಮುಖ ಪ್ರತಿಭೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.