ಧರ್ಮಸ್ಥಳ ಮಂಜುನಾಥ, ಕೊರಗಜ್ಜನ ದೇಗುಲದಲ್ಲಿ ರಕ್ಷಿತಾ ಪ್ರೇಮ್; ಸೆಲ್ಫಿ ಕೊಡಲಿಲ್ಲ ಎಂದ ಫ್ಯಾನ್!

First Published | Jan 6, 2024, 12:20 PM IST

ಸ್ನೇಹಿತರ ಜೊತೆ ದೇಗುಲಕ್ಕೆ ಭೇಟಿ ನೀಡಿ ಹೊಸ ವರ್ಷ ಆರಂಭಿಸಿದ ಕ್ರೇಜಿ ಕ್ವೀನ್. ಸೆಲ್ಫಿ ಹಂಚಿಕೊಂಡ ನಟಿ.... 

ಕನ್ನಡ ಚಿತ್ರರಂಗದ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ 2024 ಹೊಸ ವರ್ಷವನ್ನು ದೇಗುಲಕ್ಕೆ ಭೇಟಿ ನೀಡುವ ಮೂಲಕ ಆರಂಭಿಸಿದ್ದಾರೆ. 

'ಹೊಸ ವರ್ಷವನ್ನು ಬೆಸ್ಟ್‌ ರೀತಿಯಲ್ಲಿ ಆರಂಭಿಸಿರುವೆ.ಕಟೀಲು ದುರ್ಗಾಪರಮೇಶ್ವರಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಮತ್ತು ಕೊರಗಜ್ಜ ನಿಮಗೂ ಆಶೀರ್ವಾದ ಮಾಡಲಿ'

Tap to resize

 'ಈ ವರ್ಷ ನಿಮಗೆ ಒಳೆಯದಾಗಲಿ. ನಿಮ್ಮ ಕನಸುಗಳು ನನಸಾಗಲಿ' ಎಂದು ರಕ್ಷಿತಾ ಪ್ರೇಮ್ ಬರೆದುಕೊಂಡಿದ್ದಾರೆ. ರಕ್ಷತಾ ಜೊತೆ ಫೋಟೋದಲ್ಲಿ ಸ್ನೇಹಿತರಿದ್ದಾರೆ.

ಒಳ್ಳೆಯದಾಗಲಿ ಎಂದು ವಿಶ್ ಮಾಡಿರುವ ಅಭಿಮಾನಿಗಳ ನಡುವೆ ಒಬ್ಬ ಅಭಿಮಾನಿ ಬೇಸರ ಮಾಡಿಕೊಂಡಿದ್ದಾರೆ. ನೀವು ನನಗೆ ಸೆಲ್ಫಿ ಕೊಡಲಿಲ್ಲ ಮೇಡಂ  ಎಂದು ಕಾಮೆಂಟ್ ಮಾಡಿದ್ದಾರೆ. 

'ನಾನು ಕಳೆದ ಎರಡು ವರ್ಷಗಳಿಂದ ಬರುತ್ತಿರುವೆ. ಕುತ್ತಾರು ಕೊರಗಜ್ಜನ ಆದಿಸ್ಥಳ ಭಂಡಾರ ಬೈಲು ಪಂಜಂದಾಯ ಬಂಟ ವೈದ್ಯನಾಥ ಕ್ಷೇತ್ರಕ್ಕೆ ನಾನು ಆಗಮಿಸಿರುವುದು ಎರಡನೇ ಸಲ' ಎಂದು ಈ ಹಿಂದೆ ರಕ್ಷಿತಾ ಮಾತನಾಡಿದ್ದಾರೆ.

'ಮೂರು ತಿಂಗಳಿಗೊಮ್ಮೆ ಊರಿನಲ್ಲಿರುವ ಎಲ್ಲಾ ದೇವಸ್ಥಾನಕ್ಕೆ ಬಂದು ಹೋಗುವುದಕ್ಕೆ ನೆಮ್ಮದಿ ಇರುತ್ತದೆ. ನಾನು ಅಂದುಕೊಂಡ ಕೆಲಸಗಳು ನಡೆಯುತ್ತಿದೆ ಹೀಗಾಗಿ ಪದೇ ಪದೇ ಬರುತ್ತಿರುವೆ' ಎಂದು ರಕ್ಷಿತಾ ಹೇಳಿದ್ದರು. 

ವಿಶೇಷವಾಗಿ ಭಂಡಾರ ಬೈಲಿನ ಪಂಜಂದಾಯ ದೈವದ ಕ್ಷೇತ್ರವು ಪ್ರಶಾಂತವಾಗಿ ಮನಸಿಗೆ ನೆಮ್ಮದಿ ಕೊಡುತ್ತದೆ. ಹಾಗಾಗಿ ಕುತ್ತಾರಿಗೆ ಭೇಟಿ ನೀಡಿದಾಗ ಪಂಜಂದಾಯ ಕ್ಷೇತ್ರದಲ್ಲಿ ಕುಳಿತು ಹೋಗುತ್ತೇನೆ ಎಂದಿದ್ದರು. 

Latest Videos

click me!