ರಶ್ಮಿಕಾ ಮಂದಣ್ಣ ಮದುವೆ ಬೆನ್ನಲ್ಲೇ, ನಟ ರಕ್ಷಿತ್ ಶೆಟ್ಟಿ ತಮ್ಮ ಫೇಸ್‌ಬುಕ್ ಕವರ್ ಫೋಟೋ ಬದಲಿಸಿದ್ದಾರೆ. ಇದನ್ನು ರಶ್ಮಿಕಾಗೆ ನೀಡಿದ ಟಾಂಗ್ ಎಂದು ಅಭಿಮಾನಿಗಳು ಭಾವಿಸುತ್ತಿರುವಾಗಲೇ, ರಶ್ಮಿಕಾ ಬಗ್ಗೆ ಕೆಟ್ಟದಾಗಿ ಮಾತನಾಡದಂತೆ ರಕ್ಷಿತ್ ಮನವಿ ಮಾಡಿದ್ದ ಹಳೆಯ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ (Rakshit Shetty and Rashmika Mandanna) ಎಂಗೇಜ್ಮೆಂಟ್ ಮಾಡಿಕೊಂಡಿದ್ದು, ಬಳಿಕ ಅದು ಮುರಿದು ಬಿದ್ದ ಸುದ್ದಿ ಸಿನಿ ಪ್ರಿಯರಿಗೆ ತಿಳಿದದ್ದೇ. 2018ರಲ್ಲಿಯೇ ಎಲ್ಲವೂ ನಡೆದಿದ್ದರೂ, ಈಗ ರಶ್ಮಿಕಾ ಅವರ ಮದುವೆಯಿಂದ ಇದು ಮತ್ತೆ ಮುನ್ನೆಲೆಗೆ ಬರುತ್ತಿದೆ.
26
ಪ್ರತಿಕ್ರಿಯೆ ಇಲ್ಲ
ರಶ್ಮಿಕಾ ಮದುವೆಯ ಬಗ್ಗೆ ರಕ್ಷಿತ್ ಶೆಟ್ಟಿ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ರಶ್ಮಿಕಾ ಹೆಸರು ಹೇಳುತ್ತಿದ್ದಂತೆಯೇ ರಿಷಬ್ ಶೆಟ್ಟಿ ಕೂಡ ಏನೂ ಮಾತನಾಡದೇ ಅಲ್ಲಿಂದ ಹೊರಟು ಹೋಗಿದ್ದರು. ಪ್ರಮೋದ್ ಶೆಟ್ಟಿ ಅವರು, ತಮಗೆ ರಶ್ಮಿಕಾ ಮದುವೆ ಇನ್ವಿಟೇಷನ್ ಕೊಟ್ಟಿಲ್ಲ, ಕೊಡುವುದೂ ಇಲ್ಲ ಎಂದಷ್ಟೇ ಹೇಳಿದ್ದರು.
36
ಫೇಸ್‌ಬುಕ್ ಕವರ್ ಫೋಟೋ ಬದಲು
ಇವೆಲ್ಲವುಗಳ ನಡುವೆ, ನಿನ್ನೆ ರಕ್ಷಿತ್ ಶೆಟ್ಟಿ ಏಕಾಏಕಿ ಫೇಸ್‌ಬುಕ್ ಕವರ್ ಫೋಟೋ ಬದಲಿಸಿ ಶಾಕ್ ಕೊಟ್ಟಿದ್ದಾರೆ. ಮೂರು ವರ್ಷಗಳ ಬಳಿಕ ಕವರ್ ಫೋಟೋ ಚೇಂಜ್ ಮಾಡಿದ ನಟ, ಚಾರ್ಲಿ ಚಿತ್ರದ ನಾಯಿಯ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ. ನಾಯಿಗೆ ಇರೋ ನಿಯತ್ತು ಮನುಷ್ಯರಿಗೆ ಇಲ್ಲ ಎಂದು ಇವರು ಪರೋಕ್ಷವಾಗಿ ರಶ್ಮಿಕಾ ಅವರಿಗೇ ಟಾಂಗ್ ಕೊಟ್ಟಿದ್ದಾರೆ ಎಂದು ಅವರ ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆಯೇ ವಿನಾ, ನಟ ಮಾತ್ರ ಏನೂ ಹೇಳಲಿಲ್ಲ.
ಇದರ ನಡುವೆಯೇ, ಇದೀಗ ರಕ್ಷಿತ್ ಶೆಟ್ಟಿ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದು ಬಹುಶಃ 2018ರಲ್ಲಿ ರಶ್ಮಿಕಾ ಜೊತೆ ರಕ್ಷಿತ್ ಅವರ ಮದುವೆ ಮುರಿದುಬಿದ್ದಾಗ ರಶ್ಮಿಕಾ ಬಗ್ಗೆ ಜನರು ಕೆಟ್ಟದ್ದಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ರಕ್ಷಿತ್ ಅವರು ಮಾಡಿರುವ ವಿಡಿಯೋ ಆಗಿದೆ.
56
ಏನೇನೋ ಕಮೆಂಟ್ಸ್ ಹಾಕುತ್ತೀರಾ
ಇದರಲ್ಲಿ ರಕ್ಷಿತ್ ಅವರು, ಸುಮಾರು ಮಂದಿ ಏನೇನೋ ಕಮೆಂಟ್ಸ್ ಹಾಕುತ್ತೀರಾ. ನನ್ನ ಬಗ್ಗೆ ಅಲ್ಲ, ಬೇರೆಯವರ ಬಗ್ಗೆ. ಇದನ್ನು ನೋಡಿದರೆ ತುಂಬಾ ಬೇಜಾರು ಆಗುತ್ತದೆ. ಆಗಿದ್ದು ಆಗಿ ಹೋಗಿದೆ. ಅದರ ಬಗ್ಗೆ ಮಾತನಾಡಿ ಪ್ರಯೋಜನ ಇಲ್ಲ. ದಯವಿಟ್ಟು ಯಾರದ್ದೇ ಬಗ್ಗೆ ಈ ರೀತಿಯ ಕಮೆಂಟ್ಸ್ ಮಾಡಬೇಡಿ ಎಂದಿದ್ದಾರೆ.
66
ಯಾರಿಗೂ ಅಗೌರವ ತೋರಬೇಡಿ
ಯಾರಿಗೂ ಅಗೌರವ ತೋರಬೇಡಿ. ನಮ್ಮ ಬಗ್ಗೆ ಯಾರಾದರೂ ಅಸಹ್ಯಪಟ್ಟುಕೊಂಡಾಗ ನಮಗೆ ಏನೆ ಅನ್ನಿಸ್ತದೆಯೋ, ನೀವು ಯಾರದ್ದಾದರೂ ಬಗ್ಗೆ ಮಾತನಾಡಿದರೆ ಅವರಿಗೂ ಹಾಗೆಯೇ ಅನ್ನಿಸುತ್ತದೆ. ಮೊದಲು ನಾವು ಮನುಷ್ಯರಾಗಿ ಇರಲು ನೋಡೋಣ. ಪರಸ್ಪರ ರಿಸ್ಪೆಕ್ಟ್ ಕೊಡೋಣ. ಎಲ್ಲರಿಗೂ ಪರ್ಸನಲ್ ಲೈಫ್ ಇರುತ್ತದೆ. ಅದಕ್ಕೆ ಧಕ್ಕೆ ತರಬೇಡಿ ಎಂದಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿದ್ದು, ಅದೀಗ ಮತ್ತೆ ವೈರಲ್ ಆಗ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.