ಕುಸ್ತಿ ಪೈಲ್ವಾನ್‌ ಆಗಿ ಮಿಂಚಿದ ರಾಜವರ್ಧನ್: ಆಕ್ಷನ್ ಪ್ಯಾಕ್ಡ್ ಗಜರಾಮ ಟ್ರೇಲರ್ ರಿಲೀಸ್!

Published : Jan 30, 2025, 04:38 PM IST

ಬಹುಭಾಷಾ ನಟ ಕಬೀರ್‌ ಸಿಂಗ್ ಖಳನಾಯಕನಾಗಿ ಅಭಿನಯಿಸಿದ್ದು, ತಪಸ್ವಿನಿ ಪೂಣಚ್ಚ ನಾಯಕಿಯಾಗಿ ನಟಿಸಿದ್ದಾರೆ. ಟ್ರೇಲರ್‌ನಲ್ಲಿ ಆ್ಯಕ್ಷನ್, ಎಮೋಷನ್, ಸೆಂಟಿಮೆಂಟ್, ಲವ್ ಎಲ್ಲಾ ಅಂಶಗಳು ಚಿತ್ರಣಗೊಂಡಿದ್ದು, ಸಿನಿಮಾ ಮೇಲೆ ನಿರೀಕ್ಷೆ ಹುಟ್ಟಿಸುವಂತೆ ಮೂಡಿಬಂದಿದೆ.

PREV
16
ಕುಸ್ತಿ ಪೈಲ್ವಾನ್‌ ಆಗಿ ಮಿಂಚಿದ ರಾಜವರ್ಧನ್: ಆಕ್ಷನ್ ಪ್ಯಾಕ್ಡ್ ಗಜರಾಮ ಟ್ರೇಲರ್ ರಿಲೀಸ್!

ವಿಭಿನ್ನ ರೀತಿಯ ಸಿನಿಮಾಗಳನ್ನು ಮಾಡುತ್ತಿರುವ ಭರವಸೆಯ ನಾಯಕ ನಟ ರಾಜವರ್ಧನ್‌ ಇದೀಗ ಕುಸ್ತಿ ಪೈಲ್ವಾನ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ನಟಿಸಿರುವ ಆಕ್ಷನ್ ಪ್ಯಾಕ್ಡ್ ‘ಗಜರಾಮ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

26

ಬಹುಭಾಷಾ ನಟ ಕಬೀರ್‌ ಸಿಂಗ್ ಖಳನಾಯಕನಾಗಿ ಅಭಿನಯಿಸಿದ್ದು, ತಪಸ್ವಿನಿ ಪೂಣಚ್ಚ ನಾಯಕಿಯಾಗಿ ನಟಿಸಿದ್ದಾರೆ. ಟ್ರೇಲರ್‌ನಲ್ಲಿ ಆ್ಯಕ್ಷನ್, ಎಮೋಷನ್, ಸೆಂಟಿಮೆಂಟ್, ಲವ್ ಎಲ್ಲಾ ಅಂಶಗಳು ಚಿತ್ರಣಗೊಂಡಿದ್ದು, ಸಿನಿಮಾ ಮೇಲೆ ನಿರೀಕ್ಷೆ ಹುಟ್ಟಿಸುವಂತೆ ಮೂಡಿಬಂದಿದೆ.

36

ನರಸಿಂಹಮೂರ್ತಿ ಈ ಚಿತ್ರ ನಿರ್ಮಾಣ ಮಾಡಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಕ್ಸೇವಿಯರ್ ಫೆರ್ನಾಂಡಿಸ್ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು, ಮಜಾ ಟಾಕೀಸ್ ಪವನ್, ವಿಜಯ್ ಚೆಂಡೂರು ತಾರಾಬಳಗದಲ್ಲಿದ್ದಾರೆ. ರಾಗಿಣಿ ದ್ವಿವೇದಿ ವಿಶೇಷ ಹಾಡೊಂದರಲ್ಲಿ ಕಾಣಸಿಕೊಂಡಿರುವ ಈ ಸಿನಿಮಾ ಫೆ.7ರಂದು ಬಿಡುಗಡೆಯಾಗುತ್ತಿದೆ.

46

ಸಾರಾಯಿ ಶಾಂತಮ್ಮ ಹಾಡು ಬಿಡುಗಡೆ: ರಾಜವರ್ಧನ್‌ ನಟನೆಯ ‘ಗಜರಾಮ’ ಚಿತ್ರದ ಸ್ಪೆಷಲ್‌ ಹಾಡು ಬಿಡುಗಡೆ ಆಗಿದೆ. ‘ಸಾರಾಯಿ ಶಾಂತಮ್ಮ’ ಎಂದು ಸಾಗುವ ಈ ಹಾಡಿಗೆ ರಾಗಿಣಿ ಹೆಜ್ಜೆ ಹಾಕಿದ್ದಾರೆ. ಚಿನ್ಮಯ್‌ ಭಾವಿಕೆರೆ ಸಾಹಿತ್ಯ ಬರೆದಿದ್ದು, ಮಂಗ್ಲಿ ಹಾಗೂ ಕುನಲ್‌ ಗಾಂಜಾವಾಲಾ ಹಾಡಿದ್ದಾರೆ.

56

ರಾಜವರ್ಧನ್‌, ‘ಈ ಹಾಡಿಗಾಗಿ ತುಂಬಾ ಕಾಯುತ್ತಿದ್ದೇವು. ವಿಡಿಯೋ ಸಾಂಗ್ ತುಂಬಾ ಚೆನ್ನಾಗಿ ಬಂದಿದೆ. ಈ ಹಾಡಿಗೆ ಸಾಕಷ್ಟು ಖರ್ಚಾಗಿದೆ’ ಎಂದರು. ರಾಗಿಣಿ, ‘ಒಂದು ಒಳ್ಳೆಯ ತಂಡದ ಜತೆಗೆ ಕೆಲಸ ಮಾಡಿದ ಖುಷಿ ಕೊಡುತ್ತಿದೆ. ಈ ವಿಶೇಷ ಹಾಡು ಚಿತ್ರತಂಡಕ್ಕೆ ಸ್ಫೂರ್ತಿ. 

66

ಮನೋಮೂರ್ತಿ ಅವರು ಇಷ್ಟು ಚೆನ್ನಾಗಿ ಸಂಗೀತ ಕೊಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ತುಂಬಾ ಇಷ್ಟಪಟ್ಟು ಮಾಡಿರುವ ಸಿನಿಮಾ ಇದು’ ಎಂದರು. ಸುನೀಲ್‌ ಕುಮಾರ್‌ ವಿ ಎ ನಿರ್ದೇಶನದ ಈ ಚಿತ್ರದ ನಾಯಕಿಯಾಗಿ ತಪಸ್ವಿನಿ ಪೂಣಚ್ಚ ನಟಿಸಿದ್ದಾರೆ. 

Read more Photos on
click me!

Recommended Stories