ನಟಿ ರಾಗಿಣಿ ನಿಶ್ಚಿತಾರ್ಥ?; ಕೈಯಲ್ಲಿರುವ ಡೈಮೆಂಡ್‌ ಉಂಗುರ ಪ್ರಶ್ನಿಸಿದ ನೆಟ್ಟಿಗರು

First Published Jul 21, 2023, 10:12 AM IST

ರಾಗಿಣಿ ಪ್ರತಿಯೊಂದು ಫೋಟೋದಲ್ಲೂ ಡೈಮೆಂಡ್ ಉಂಗುರ. ನಿಶ್ಚಿತಾರ್ಥ ಆಗಿದೆ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು...
 

ಕನ್ನಡ ಚಿತ್ರರಂಗದ ಬೋಲ್ಡ್‌ ಹುಡುಗಿ, ತುಪ್ಪದ ಬೆಡಗಿ ರಾಗಿಣಿ ಇದೀ ಹೊಸ ವಿಚಾರಕ್ಕೆ ಸುದ್ದಿಯಲ್ಲಿದೆ. ಅದುವೇ ಕೈಯಲ್ಲಿರುವ ಡೈಮೆಂಡ್ ಉಂಗುರದಿಂದ. 

ಕಳೆದ ತಿಂಗಳು ರಾಗಿಣಿ ಹಾಕಿರುವ ಪೋಸ್ಟ್‌ ಈಗ ವೈರಲ್ ಆಗುತ್ತಿದೆ. ಕೈ ತುಂಬಾ ಮೆಹೆಂದಿ ಮತ್ತು ಡೈಮೆಂಡ್ ಉಂಗುರವನ್ನು ತೋರಿಸಿದ್ದಾರೆ.

 'ಮೆಹೆಂದಿ...ಜೀವನದ ಸಣ್ಣ ಪುಟ್ಟ ಕ್ಷಣಗಳು ತುಂಬಾ ಮುಖ್ಯವಾಗುತ್ತದೆ. ಪ್ರೀತಿಸಿ ಖುಷಿಯಾಗಿರಿ ಹಾಗೂ ಬದುಕಿ..ಇದನ್ನು ರಿಪೀಟ್ ಮಾಡಿ' ಎಂದು ಬರೆದುಕೊಂಡಿದ್ದಾರೆ.

ಎರಡು ಮೂರು ಮೆಹೆಂದಿ ಹಾಕಿಸಿಕೊಂಡಿರುವ ವಿಡಿಯೋ ಹಾಕಿದ್ದಾರೆ. ರಾಗಿಣಿ ಮುಖದಲ್ಲಿ ಖುಷಿ ನೋಡಬಹುದು. ಮನೆಯಲ್ಲಿ ಸೆರೆ ಹಿಡಿದಿರುವ ವಿಡಿಯೋ ಇದು.

ಮತ್ತೊಂದು ಫೋಟೋದಲ್ಲಿ ರಾಗಿಣಿ ಮುಖದ ಮೇಲೆ ಸೂರ್ಯನ ಕಿರಣಗಳು ಬೀಳುತ್ತಿದೆ ಕೈಯಲ್ಲಿರುವ ಉಂಗುರವನ್ನು ಕ್ಯಾಮೆರಾಗೆ ತೋರಿಸಿದ್ದಾರೆ.

ಸೈಲೆಂಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಖಂಡಿತಾ ಇದು ಎಂಗೇಜ್‌ಮೆಂಟ್ ಉಂಗುರ, ಹುಡುಗ ಯಾರು? ಯಾಕೆ ರಿವೀಲ್ ಮಾಡುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಾಗಿಣಿ ತಮ್ಮ ಲೈಫ್‌ಸ್ಟೈಲ್, ಸಿನಿಮಾ ಮತ್ತು ಊಟದ ಬಗ್ಗೆ ಡಿಫರೆಂಟ್ ಕಂಟೆಂಟ್ ಇರುವ ಫೋಟೋ ವಿಡಿಯೋ ಅಪ್ಲೋಡ್ ಮಾಡುತ್ತಾರೆ.

click me!