Toxic: ವರ್ಷಗಳ ಗಡ್ಡಕ್ಕೆ ಯಶ್​ ಗುಡ್​ಬೈ ಹೇಳೋ ಮುನ್ನ ಪತ್ನಿ ರಾಧಿಕಾ ಪಂಡಿತ್​ ಏನ್​ ಹೇಳಿದ್ರು ನೋಡಿ!

Published : Feb 24, 2026, 04:30 PM IST

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರಕ್ಕಾಗಿ ತಮ್ಮ ಬಹುಕಾಲದ ಗಡ್ಡಕ್ಕೆ ವಿದಾಯ ಹೇಳಿದ್ದಾರೆ. ವೈರಲ್ ಆಗಿರುವ ಮೇಕಿಂಗ್ ವಿಡಿಯೋದಲ್ಲಿ ಅವರ ಹೊಸ ಲುಕ್ ಅನಾವರಣಗೊಂಡಿದ್ದು, ಇದು ಚಿತ್ರದಲ್ಲಿ ಅವರ ದ್ವಿಪಾತ್ರದ ಬಗ್ಗೆ ಕುತೂಹಲ ಮೂಡಿಸಿದೆ.  

PREV
16
ಟಾಕ್ಸಿಕ್​ ಹಲ್​ಚಲ್​

ಯಶ್​ ನಟನೆಯ ಟಾಕ್ಸಿಸ್​ ಚಿತ್ರ ಇದಾಗಲೇ ಸಾಕಷ್ಟು ಹಲ್​ಚಲ್​ ಸೃಷ್ಟಿಸಿದೆ. ಈ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಟೀಸರ್​​ ಮತ್ತು ಪೋಸ್ಟರ್​​ ಮೂಲಕ ಇದಾಗಲೇ ಚಿತ್ರ ಹವಾ ಸೃಷ್ಟಿಸಿದೆ. ಇದಾಗಲೇ ಚಿತ್ರದ ಮೇಕಿಂಗ್​ ವಿಡಿಯೋ ವೈರಲ್​ ಆಗಿದ್ದು, ಅದರಲ್ಲಿ ಯಶ್​ ಅವರು ಗಡ್ಡದ ಶೇವಿಂಗ್​ ಮಾಡುತ್ತಿರುವುದನ್ನು ನೋಡಬಹುದಾಗಿದೆ.

26
ಗಡ್ಡಕ್ಕೆ ವಿದಾಯ

ಹಲವು ವರ್ಷಗಳಿಂದ ಗಡ್ಡ ಬಿಟ್ಟಿದ್ದ ಯಶ್​ ಅವರು ಇದೀಗ ಅದಕ್ಕೆ ಬೀಳ್ಕೊಡುಗೆ ನೀಡುತ್ತಾರೆ. ಗಡ್ಡವನ್ನು ಶೇವ್​ ಮಾಡುವ ಮುನ್ನ ಯಶ್​ ಪತ್ನಿ, ನಟಿ ರಾಧಿಕಾ ಪಂಡಿತ್​​ ಅವರು ಗಂಡನ ಗಡ್ಡ ಮುಟ್ಟಿ, ವಿದಾಯ ಹೇಳಿದ್ದಾರೆ. ಫೈನಲಿ ಈ ಗಡ್ಡಕ್ಕೆ, ಈ ಉದ್ದ ಕೂದಲಿಗೆ ಮುಕ್ತಿ ಸಿಗುತ್ತಿದೆ ಎಂದಿದ್ದಾರೆ.

36
ಡಬಲ್​ ರೋಲ್​?

ಅಷ್ಟಕ್ಕೂ ಈ ಸಿನಿಮಾದಲ್ಲಿ ಯಶ್​ ಅವರದ್ದು ಡಬಲ್​ ರೋಲ್​ ಎಂದೇ ಹೇಳಲಾಗುತ್ತಿದ್ದು, ಇದೀಗ ಈ ವಿಡಿಯೋ ನೋಡಿದರೆ ಅದು ನಿಜ ಎನ್ನುವುದು ತಿಳಿಯುತ್ತದೆ. ಇದಾಗಲೇ ಈ ಚಿತ್ರವನ್ನು ಹಾಲಿವುಡ್​ ರೀತಿಯಲ್ಲಿ ಕೂಡ ಶೂಟ್​ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿರುವ ಕಾರಣ ದೊಡ್ಡ ಮಟ್ಟದ ಯಶಸ್ಸು ಸಿಗುತ್ತದೆ ಎನ್ನುವ ನಿರೀಕ್ಷೆಯೂ ಇದೆ.

46
ಬಿಡುಗಡೆ ಯಾವಾಗ?

ಯುಗಾದಿ ಹಬ್ಬ ಅಂದ್ರೆ ಮಾರ್ಚ್ 19ಕ್ಕೆ ವಿಶ್ವದಾದ್ಯಂತ ಟಾಕ್ಸಿಕ್ ಬಿಡುಗಡೆ ಆಗಲಿದೆ. ಹೇರ್ ಸ್ಟೈಲಿಸ್ಟ್ ವಿಜಯ್ ವಿಖ್ಯಾತ್ ಅವರು ಯಶ್​ ಅವರಿಗೆ ಹೊಸ ಹೇರ್​ಸ್ಟೈಲ್​ ನೀಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಕಳೆದ ಜನವರಿ 8 ರಂದು ಯಶ್​ ಅವರ ಬರ್ತ್​ಡೇ ದಿನವೇ ಟಾಕ್ಸಿಕ್​ ಚಿತ್ರ ಗ್ಲಿಂಪ್ಸ್ ಒಂದನ್ನು ಅನಾವರಣ ಮಾಡಲಾಗಿತ್ತು. ಅದರಲ್ಲಿ ​​ ಅವರನ್ನು ರಾಯ ಎಂದು ಪರಿಚಯಿಸಲಾಗಿತ್ತು. ಆ ಬಳಿಕ, ಫೆಬ್ರವರಿ 20ರಂದು ಟೀಸರ್​ ಬಿಡುಗಡೆಯಾಗಿತ್ತು. ಇದು ಸಾಕಷ್ಟು ಟೀಕೆಗಳನ್ನೂ ಎದುರಿಸಬೇಕಾಗಿ ಬಂದಿತ್ತು. ಉಳಿದೆಲ್ಲವನ್ನೂ ಬಿಟ್ಟು ಕಾರು ಡಾನ್ಸ್​ ಮಾಡುವುದೇ ಹೈಲೈಟ್​ ಆಗಿ, ಜನರು ವಿವಿಧ ಬಗೆಯ ಕಮೆಂಟ್​ ಹಾಕಲು ಶುರು ಮಾಡಿದ್ದರು. ಇದರ ಬಗ್ಗೆ ಪರ-ವಿರೋಧದ ನಿಲುವು ವ್ಯಕ್ತವಾಗಿತ್ತು.

56
ವಿವಿಧ ರೂಪ

ಆದರೆ ಈ ಟೀಸರ್​ನಲ್ಲಿ ಯಶ್​ ಅವರ ವಿವಿಧ ರೂಪವನ್ನು ನೋಡಬಹುದಾಗಿದೆ. ಆ ಬಳಿಕ ಮೊನ್ನೆ ಅಂದರೆ ಫೆ. 21ರಂದು ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಯಿತು. 'Rocking star Yash as Ticket' ಎಂದು ಅದರಲ್ಲಿ ಬರೆಯಲಾಗಿತ್ತು. ಇದು ನಟನನ್ನು ಸಖತ್ ಯಂಗ್ ಆಗಿ ತೋರಿಸಿತ್ತು. ಇದೀಗ ಅನಾವರಣಗೊಂಡಿರುವ ವಿಡಿಯೋ ಇದೇ ಟಿಕೆಟ್​​​ ಪಾತ್ರದ ಸ್ಟೈಲಿಂಗ್​​ ವಿಡಿಯೋ ಆಗಿದೆ.

66
ನಾಯಕಿಯರು ಇವರೇ

ಅಂದಹಾಗೆ,ಚಿತ್ರದ ನಾಯಕಿಯರ ಬಗ್ಗೆ ಇದಾಗಲೇ ಕುತೂಹಲವೂ ಮೂಡಿದ್ದು, ಅದಕ್ಕೂ ಈಗ ಉತ್ತರ ಸಿಕ್ಕಿದೆ. ಮೆಲಿಸಾ ಪಾತ್ರದಲ್ಲಿ ನಟಿ ರುಕ್ಮಿಣಿ ವಸಂತ್, ಗಂಗಾ ಆಗಿ ನಯನತಾರಾ, ನಾದಿಯಾ ಪಾತ್ರದಲ್ಲಿ ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ, ಎಲಿಜಬೆತ್ ಪಾತ್ರದಲ್ಲಿ ಬಾಲಿವುಡ್​ನ ಹುಮಾ ಖುರೇಷಿ, ರೆಬೆಕಾ ಪಾತ್ರದಲ್ಲಿ ಬಾಲಿವುಡ್​​ ನಟಿ-ಗಾಯಕಿ ತಾರಾ ಸುತಾರಿಯಾ ಇದ್ದಾರೆ. ಇಷ್ಟೊಂದು ಮಂದಿ ಇರುವಾಗ ಒಬ್ಬರೇ ನಾಯಕಿ ಡೌಟ್​ ಎಂದೂ ಹೇಳಲಾಗುತ್ತಿದೆ. ಈ ಚಿತ್ರ ಗೀತು ಮೋಹನ್​​ದಾಸ್ ನಿರ್ದೇಶಿಸಿದ್ದು, ಕೆವಿಎನ್ ಪ್ರೊಡಕ್ಷನ್ ಜೊತೆಗೆ ಮಾನ್ಸ್ಟರ್ ಮೈಡ್ ಕ್ರಿಯೇಷನ್ಸ್ ಸೇರಿ ನಿರ್ಮಾಣ ಮಾಡಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories