ಹಸಿರು ಸೀರೆಯುಟ್ಟು ಮುತ್ತು ಕೊಟ್ಟ ಕೆಜಿಎಫ್ ಸುಂದರಿ: ಆದರೆ.. ಶ್ರೀನಿಧಿ ಕಿಸ್‌ಗಾಗಿ ಪಡ್ಡೆಹೈಕ್ಳ ಕಿತ್ತಾಟ!

Published : Mar 10, 2024, 04:14 PM IST

ಕೆಜಿಎಫ್ ಚೆಲುವೆ ಶ್ರೀನಿಧಿ ಶೆಟ್ಟಿ ಕೂಡ ದೇಶಾದ್ಯಂತ ಒಳ್ಳೆ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. ಕೆಜಿಎಫ್ ಯಶಸ್ಸಿನ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿಗೆ ಅದಕ್ಕೆ ತಕ್ಕಂತೆ ಅವಕಾಶಗಳು ಸಿಗುತ್ತಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ನಟಿ ಆ್ಯಕ್ಟಿವ್ ಆಗಿದ್ದಾರೆ.  

PREV
17
ಹಸಿರು ಸೀರೆಯುಟ್ಟು ಮುತ್ತು ಕೊಟ್ಟ ಕೆಜಿಎಫ್ ಸುಂದರಿ: ಆದರೆ.. ಶ್ರೀನಿಧಿ ಕಿಸ್‌ಗಾಗಿ ಪಡ್ಡೆಹೈಕ್ಳ ಕಿತ್ತಾಟ!

ಕೆಜಿಎಫ್ ಸಿನಿಮಾ ದೇಶಾದ್ಯಂತ ದಾಖಲೆಯ ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಶ್ರೀನಿಧಿ ಶೆಟ್ಟಿ ಕೂಡ ದೇಶಾದ್ಯಂತ ಒಳ್ಳೆ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. ಕೆಜಿಎಫ್ ಯಶಸ್ಸಿನ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿಗೆ ಅದಕ್ಕೆ ತಕ್ಕಂತೆ ಅವಕಾಶಗಳು ಸಿಗುತ್ತಿಲ್ಲ ಎಂದೇ ಹೇಳಬೇಕು.

27

'ಕೆಜಿಎಫ್ 2' ಸಿನಿಮಾ ಬಳಿಕ ಶ್ರೀನಿಧಿ ಶೆಟ್ಟಿ ಸೈಲೆಂಟ್ ಆಗಿದ್ದರು. ಆದರೆ, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಫೋಟೊಗಳ ಮೂಲಕ ಶ್ರೀನಿಧಿ ಶೆಟ್ಟಿ ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಸದ್ದು ಮಾಡುವುದಕ್ಕೆ ಆರಂಭಿಸಿದ್ದಾರೆ.

37

ಶ್ರೀನಿಧಿ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಸಿರು ಸೀರೆಯುಟ್ಟು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳಲ್ಲಿ ಅಪ್ಪಟ ದಕ್ಷಿಣ ಭಾರತದ ನಟಿಯಂತೆ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. 'ಕೆಜಿಎಫ್' ಬ್ಯೂಟಿ ಶ್ರೀನಿಧಿ ಶೆಟ್ಟಿಯ ಈ ಫೋಟೊಗಳಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫ್ಯಾನ್ಸ್‌ ಕಮೆಂಟ್ ಮಾಡುತ್ತಿದ್ದಾರೆ.

47

ಶ್ರೀನಿಧಿ ಶೆಟ್ಟಿ ಫೋಟೊಗಳನ್ನು ಅಭಿಮಾನಿಗಳು ಮೆಚ್ಚಿ ಡಿಸೈನ್ ಡಿಸೈನ್ ಆಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ, ಇದು ಮ್ಯಾಟ್ರಿಮೋನಿ ಸೈಟ್‌ಗಾಗಿ ತೆಗೆಸಿದ ಫೋಟೋಗಳಾ ಎಂದು ಕಮೆಂಟ್ ಮಾಡುತ್ತಿದ್ದಾರೆ.

57

ಶ್ರೀನಿಧಿ ಶೆಟ್ಟಿ 'ಕೆಜಿಎಫ್' ಸೀರಿಸ್‌ನಿಂದ ಫೇಮಸ್ ಆಗಿದ್ದಾರೆ. ಅವರ ಈ ಸಿನಿಮಾ ನೋಡಿದವರು ಅವರ ಸೌಂದರ್ಯವನ್ನಷ್ಟೇ ಹೊಗಳಿಲ್ಲ. ಬದಲಾಗಿ, ಅವರ ನಟನೆಯನ್ನೂ ಹೊಗಳಿದ್ದರು. ನಟನೆಯ ಮೊದಲ ಹೆಜ್ಜೆಯಲ್ಲೇ 'ಕೆಜಿಎಫ್' ಸಿನಿಮಾ ಶ್ರೀನಿಧಿ ಶೆಟ್ಟಿಗೆ ಅಪಾರ ಜನಮನ್ನಣೆ ನೀಡಿತ್ತು. 

67

'ಕೆಜಿಎಫ್ 2' ಮಾಡುವಾಗಲೇ ಶ್ರೀನಿಧಿ ಶೆಟ್ಟಿ ತಮಿಳಿನ 'ಕೋಬ್ರಾ' ಸಿನಿಮಾದಲ್ಲಿ ನಟಿಸಿದ್ದರು. ಚಿಯಾನ್ ವಿಕ್ರಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಮೂಲಕ ಶ್ರೀನಿಧಿ ಶೆಟ್ಟಿ ಗಮನ ಸೆಳೆದಿದ್ದರು. ಆದರೆ, 'ಕೋಬ್ರಾ' ಬಾಕ್ಸಾಫೀಸ್‌ನಲ್ಲಿ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ.

77

ಸದ್ಯ ಶ್ರೀನಿಧಿ ಶೆಟ್ಟಿ 'ತೆಲುಸು ಕದಾ' ಅನ್ನುವ ತೆಲುಗು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇದು ಬಿಟ್ಟರೆ ಶ್ರೀನಿಧಿ ಶೆಟ್ಟಿ ಬೇರೆ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories