ಜೂ. ರಾಕಿಂಗ್ ಸ್ಟಾರ್ ಬರ್ತ್‌ಡೇಗೆ ರಾಧಿಕಾ ಪಂಡಿತ್ ವಿಶೇಷ ಪೋಸ್ಟ್, ಅಪ್ಪ-ಮಗನ ಮುದ್ದಾದ ಫೋಟೊ ವೈರಲ್!

Published : Oct 30, 2026, 04:23 PM IST

Yatharv's Birthday: ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಮುದ್ದಿನ ಮಗ ಯಥರ್ವ್ ಇಂದು 7ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಮ್ಮ ರಾಧಿಕಾ ಮಗನ ವಿಶೇಷ ಫೋಟೊಗಳನ್ನು ಹಂಚಿಕೊಂಡು ವಿಶ್ ಮಾಡಿದ್ದಾರೆ.

PREV
15
ಯಥರ್ವ್ ಹುಟ್ಟುಹಬ್ಬ

ಸ್ಯಾಂಡಲ್‌ವುಡ್‌ನ ಜನಪ್ರಿಯ ತಾರಾ ಜೋಡಿ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ತಮ್ಮ ಮುದ್ದಿನ ಮಗ ಯಥರ್ವ್ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಹಿನ್ನೆಲೆಯಲ್ಲಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಸುಂದರವಾದ ಹಾಗೂ ಮಗನ ಜೊತೆಗಿನ ಎಂದೂ ನೋಡಿರದ ಸ್ಪೆಷಲ್ ಕ್ಷಣಗಳ ಫೋಟೋ ಹಂಚಿಕೊಂಡು ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.

25
ಮಗನಿಗೆ ರಾಧಿಕಾ ಪಂಡಿತ್ ಪ್ರೀತಿಯ ಶುಭಾಶಯ

ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಯಥರ್ವ್ ಜೊತೆಗಿನ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಯಶ್ ತಮ್ಮ ಮಗನನ್ನು ಪ್ರೀತಿಯಿಂದ ತಬ್ಬಿಕೊಂಡಿರುವುದನ್ನು ಕಾಣಬಹುದು. ಈ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

35
ಹ್ಯಾಪಿ ಬರ್ತ್ ಡೇ ಯಥರ್ವ

ಫೋಟೋ ಜೊತೆಗೆ, "ನಮ್ಮ ಮುದ್ದಿನ ಮಗನೇ, ಹುಟ್ಟುಹಬ್ಬದ ಶುಭಾಶಯಗಳು ಯಥರ್ವ್. ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇವೆ" (To our forever little one, happy birthday, Yatharv! Love you always) ಎಂಬ ಅರ್ಥ ಬರುವ ಪ್ರೀತಿಯ ಸಂದೇಶವನ್ನು ಬರೆದುಕೊಂಡಿದ್ದಾರೆ.

45
ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ

ರಾಧಿಕಾ ಪಂಡಿತ್ ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಕಾಮೆಂಟ್ ಮೂಲಕ ಯಥರ್ವ್‌ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ನಟಿ ರಾಗಿಣಿ ಪ್ರಜ್ವಲ್ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಮುದ್ದಾದ ಫೋಟೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

55
2019ರಲ್ಲಿ ಯಥರ್ವ ಜನನ

ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ರಾಧಿಕಾ ಪಂಡಿತ್ - ಯಶ್‌ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. 2018ರಲ್ಲಿ ದಂಪತಿಗೆ ಆಯ್ರಾ ಜನಿಸಿದರೆ, 2019ರಲ್ಲಿ ಗಂಡು ಮಗುವಿಗೆ ರಾಧಿಕಾ ಪಂಡಿತ್ ಜನ್ಮ ನೀಡಿದರು. ಮಗನಿಗೆ ಯಥರ್ವ್ ಎಂದು ದಂಪತಿ ನಾಮಕರಣ ಮಾಡಿದ್ದಾರೆ. ಇದೀಗ ಜೂ ರಾಕಿಂಗ್ ಸ್ಟಾರ್ ತಮ್ಮ 7ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories