ಅವಳಿ ಮಕ್ಕಳ ಮುಡಿ ಕೊಟ್ಟ ಅಮೂಲ್ಯಾ ದಂಪತಿ; ಅಥರ್ವ್-ಆಧವ್ ಹೊಸ ಲುಕ್ ಹೇಗಿದೆ ನೋಡಿ

First Published Nov 20, 2022, 1:13 PM IST

ನಾಮಕರಣ ಆಗಿ ಕೆಲವೇ ದಿನಗಳಲ್ಲಿ ಅಮೂಲ್ಯಾ ಮತ್ತು ಜಗದೀಶ್ ದಂಪತಿ ಮಕ್ಕಳ ಮುಡಿ ಕೊಟ್ಟಿದ್ದಾರೆ. ತಿರುಪತಿಯಲ್ಲಿ ಅವಳಿ ಮಕ್ಕಳ ಮುಡಿ ಶಾಸ್ತ್ರ ಮಾಡಿ ಮುಗಿಸಿದ್ದಾರೆ. 

ಸ್ಯಾಂಡಲ್ ವುಡ್ ನಟಿ ಅಮೂಲ್ಯಾ ಮತ್ತು ಜಗದೀಶ್ ದಂಪತಿ ಇತ್ತೀಚಿಗಷ್ಟೆ ತಮ್ಮ ಮುದ್ದಾದ ಮಕ್ಕಳಿಗೆ ನಾಮಕರಣ ಮಾಡಿದರು. ನವೆಂಬರ್ 10ರಂದು ಖಾಸಗಿ ಹೋಟೆಲ್ ನಲ್ಲಿ ನಡೆದ ನಾಮಕರಣ ಸಮಾರಂಭದಲ್ಲಿ ಸ್ಯಾಂಡಲ್ ವುಡ್‌ನ ಅನೇಕ ಗಣ್ಯರು ಹಾಜರಿದ್ದರು. ಅಮೂಲ್ಯಾ ಮಕ್ಕಳ ನಾಮಕರಣದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಮುದ್ದಾದ ಅವಳಿ ಮಕ್ಕಳಿಗೆ ಅಮೂಲ್ಯಾ ದಂಪತಿ ಅಥರ್ವ್ ಮತ್ತು ಆಧವ್ ಎಂದು ನಾಮಕರಣ ಮಾಡಿದ್ದಾರೆ. ನಾಮಕರಣ ಸಮಾರಂಭದಲ್ಲಿ ಡಾರ್ಲಿಂಗ್ ಕೃಷ್ಣ ಜೋಡಿ, ಗಣೇಶ್ ದಂಪತಿ, ಅಜಯ್ ರಾವ್, ಸೇರಿದಂತೆ ಅನೇಕ ಸ್ಯಾಂಡಲ್ ವುಡ್ ಸ್ಟಾರ್ಸ್ ಭಾಗಿಯಾಗಿದ್ದರು. ನಾಮಕರಣ ಸಂಭ್ರಮದಲ್ಲಿ ಅಥರ್ವ್ ಮತ್ತು ಆಧವ್ ಇಬ್ಬರೂ ಸುಂದರವಾಗಿ ಕಂಗೊಳಿಸಿದ್ದರು. 

ನಾಮಕರಣ ಆಗಿ ಕೆಲವೇ ದಿನಗಳಲ್ಲಿ ಅಮೂಲ್ಯಾ ಮತ್ತು ಜಗದೀಶ್ ದಂಪತಿ ಮಕ್ಕಳ ಮುಡಿ ಕೊಟ್ಟಿದ್ದಾರೆ. ತಿರುಪತಿಯಲ್ಲಿ ಅವಳಿ ಮಕ್ಕಳ ಮುಡಿ ಶಾಸ್ತ್ರ ಮಾಡಿದ್ದಾರೆ. ಮಕ್ಕಳ ಮುಡಿ ಶಾಸ್ತ್ರಕ್ಕೆ ಇಡೀ ಕುಟುಂಬ ತಿರುಪತಿಗೆ ತೆರಳಿತ್ತು. 
 

ಹೊಸ ಲುಕ್‌ಲ್ಲಿ ಕಾಣಿಸಿಕೊಂಡಿರುವ ಅಥರ್ವ್ ಮತ್ತು ಆಧವ್ ಜೊತೆ ಇಡೀ ಕುಟುಂಬ ಕ್ಯಾಮರಾಗೆ ಪೋಸ್ ನೀಡಿದೆ. ಅಥರ್ವ ಮತ್ತು ಆಧವ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಿರುಪತಿ ದೇವ್ಥಾನದ ಮುಂದೆ ನಿಂತು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ನಟಿ ಅಮೂಲ್ಯಾ ಮಾರ್ಚ್ 1, 2022ರಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ನಾಲ್ಕು ತಿಂಗಳ ಬಳಿಕ ಮಕ್ಕಳ ಕ್ಯೂಟ್ ಕೈಗಳ ಪೋಟೋವನ್ನು ರಿವೀಲ್ ಮಾಡಿದ್ದರು. ಅಮೂಲ್ಯಾ ಕ್ಯೂಟ್ ಮಕ್ಕಳು ಹೇಗಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಬಳಿಕ 6 ತಿಂಗಳಿಗೆ ಮಕ್ಕಳ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದರು. 

ಅಮೂಲ್ಯಾ ಮಕ್ಕಳ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತರಹೇವಾರಿ ಫೋಟೋಗಳು ಅಭಿಮಾನಿಗಳ ಹೃದಯ ಗೆದ್ದಿತ್ತು. ಬಳಿಕ ನಾಮಕರಣದಲ್ಲಿ ಅಥರ್ವ್ ಮತ್ತು ಆಧವ್ ಇಬ್ಬರೂ ಸುಂದರವಾಗಿ ಕಂಗೊಳಿಸಿದ್ದರು. ಇದೀಗ ಮುಡಿ ಕೊಡುವ ಮೂಲಕ ವಿಭಿನ್ನವಾಗಿ ಕಾಣಿಸುತ್ತಿದ್ದಾರೆ.   

click me!