ಸಮಂತಾ, ಮೃಣಾಲ್ ಠಾಕೂರ್ ಮೊದಲಾದ ಘಟಾನುಘಟಿ ನಾಯಕಿಯರ ನಡುವೆ ನಮ್ಮ ಕನ್ನಡದ ಹುಡುಗಿ ನೇಹಾ ಶೆಟ್ಟಿ ಸೈಮಾ ಅವಾರ್ಡ್ ರೇಸ್‌ನಲ್ಲಿದ್ದಾರೆ.
ಅತ್ಯುತ್ತಮ ನಾಯಕಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡವರ ಪಟ್ಟಿಯಲ್ಲಿ ಈ ‘ಮುಂಗಾರು ಮಳೆ 2’ ಹುಡುಗಿಯ ಹೆಸರೂ ಇರುವುದು ವಿಶೇಷ.
ತೆಲುಗಿನ ಜನಪ್ರಿಯ ಚಿತ್ರ ‘ಡಿಜೆ ತಿಲ್ಲು’ ನಾಯಕಿಯಾಗಿರುವ ನೇಹಾ ಆ ಸಿನಿಮಾ ಮೂಲಕವೇ ಸೈಮಾ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ.
23ರ ಹರೆಯದ ಈ ತುಳುನಾಡಿನ ಪ್ರತಿಭೆಯ ಸಾಧನೆ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ‘ಮುಂಗಾರು ಮಳೆ 2’ ಸಿನಿಮಾ ಬಳಿಕ ನೇಹಾ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ.
ಪ್ರಸ್ತುತ ಮೂರ್ನಾಲ್ಕು ಚಿತ್ರಗಳು ಕೈಯಲ್ಲಿವೆ. ಟಾಲಿವುಡ್‌ನ ಉದಯೋನ್ಮುಖ ನಟ ಕಿರಣ್ ಅಬ್ಬಾವರಂ ಜೊತೆಗೆ ನೇಹಾ ಶೆಟ್ಟಿ ನಾಯಕಿಯಾಗಿ ನಟಿಸಿರುವ ‘ರೂಲ್ಸ್ ರಂಜನ್’ ಸಿನಿಮಾದ ಟ್ರೇಲರ್ ಮುಂದಿನ ವಾರ ಬಿಡುಗಡೆಯಾಗಲಿದೆ.
ಈ ಚಿತ್ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಹೀಗೆ ಸದ್ಯ ಶೂಟಿಂಗ್, ಟ್ರೇಲರ್ ರಿಲೀಸ್ ಈವೆಂಟ್ ಅಂತೆಲ್ಲ ನೇಹಾ ಶೆಟ್ಟಿ ಸಖತ್ ಬ್ಯುಸಿ ಆಗಿದ್ದಾರೆ.