ಪುನೀತ್ ರಾಜ್‌ಕುಮಾರ್ ಅವರು ಆರು ತಿಂಗಳ ಶಿಶುವಾಗಿದ್ದಾಗ 'ಪ್ರೇಮದ ಕಾಣಿಕೆ' ಚಿತ್ರದ ಮೂಲಕ ಬಾಲನಟರಾಗಿ ಪಾದಾರ್ಪಣೆ ಮಾಡಿದರು. ಡಾ. ರಾಜ್‌ಕುಮಾರ್ ಅವರೇ ತಮ್ಮ ಮಗನನ್ನು ಚಿತ್ರೀಕರಣಕ್ಕೆ ಕರೆತಂದಿದ್ದರು. ಸಮಾಜಮುಖಿ ಕಾರ್ಯಗಳ ಮೂಲಕ ಕರುನಾಡಿನ ಮನೆಮಾತಾದ ಅಪ್ಪು, ಇಂದಿಗೂ ಜನಮಾನಸದಲ್ಲಿ ಅಜರಾಮರ.
ಕರುನಾಡಿನ ಕಣ್ಮಣಿಯಾಗಿ, ನಿಧನರಾದ ಮೇಲೂ ಕೆಲವರ ಜೀವನಕ್ಕೆ ಬೆಳಕಾಗಿ ಹೋದವರು ಎಲ್ಲರ ಪ್ರೀತಿಯ ಅಪ್ಪು ಪುನೀತ್ ರಾಜ್‌ಕುಮಾರ್ Puneet Raj kumar. 17ರ ಮಾರ್ಚ್ 1975ರಲ್ಲಿ ಹುಟ್ಟಿದ್ದ ಪುನೀತ್ ಅವರು ಇಂದು ಬದುಕಿದ್ದರೆ ಎಲ್ಲರ ಜೊತೆ 51ನೇ ಹುಟ್ಟಿದ ದಿನವನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ ಅವರ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಅಪ್ಪು ಹುಟ್ಟುಹಬ್ಬಕ್ಕೆ ಇಂದು ಸಾಕ್ಷಿಯಾಗುತ್ತಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ನಟನ ಬರ್ತ್ಡೇ ಸೆಲಬ್ರೇಟ್ ಮಾಡುತ್ತಿದ್ದಾರೆ.
26
ಆರು ತಿಂಗಳ ಶಿಶುವಾಗಿದ್ದಾಗ...
ಅಷ್ಟಕ್ಕೂ ಅಪ್ಪು ಬಾಲನಟನಾಗಿ ಪ್ರವೇಶಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಆರು ತಿಂಗಳ ಶಿಶುವಾಗಿದ್ದಾಗ, ಡಾ. ರಾಜ್‌ಕುಮಾರ್ ಅವರು ತಮ್ಮ ಪುತ್ರನನ್ನೇ ಅಖಾಡಕ್ಕಿಳಿಸಿದ್ದ ರೋಚಕ ಸ್ಟೋರಿ ಕೆಲವೇ ಜನರಿಗೆ ಗೊತ್ತಿರಲಿಕ್ಕೆ ಸಾಕು. ಪುನೀತ್ ಆಗ ಲೋಹಿತ್ ಆಗಿದ್ದರು.
36
ಮಗುವನ್ನು ಅಖಾಡಕ್ಕಿಳಿಸಿದ್ದ ಡಾ.ರಾಜ್
ಅಪ್ಪು ಅವರಿಗೆ ಕೇವಲ ಆರು ತಿಂಗಳು ಇದ್ದಾಗ, ‘ಪ್ರೇಮದ ಕಾಣಿಕೆ’ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ, ಒಂದು ಮಗುವಿನ ಅವಶ್ಯಕತೆ ಇತ್ತು. ಆದರೆ ಅಷ್ಟು ಚಿಕ್ಕ ಶಿಶುವನ್ನು, ಅಂಥ ಕ್ಯಾಮೆರಾ ಎದುರು ಅಪ್ಪ-ಅಮ್ಮ ಬಿಡಲು ಹೆದರಿದ್ದರು. ಈಗ ಬೇಕಿದ್ದರೆ ಹುಟ್ಟಿದ ತಕ್ಷಣ ಹಲವರು ತಮ್ಮ ಮಕ್ಕಳನ್ನು ಕೊಡುವವರು ಇದ್ದಾರೆ. ಆದರೆ 50 ವರ್ಷಗಳ ಹಿಂದೆ ಹಾಗಿರಲಿಲ್ಲವಲ್ಲ!
ಆ ಸಂದರ್ಭದಲ್ಲಿ ಆರು ತಿಂಗಳ ತಮ್ಮ ಕಂದನನ್ನೇ ಅಖಾಡಕ್ಕಿಳಿಸಿ ಈ ಚಿತ್ರದ ಶೂಟಿಂಗ್ಗೆ ಕರೆದುಕೊಂಡು ಹೋಗಿದ್ದರು ಡಾ. ರಾಜ್‌ಕುಮಾರ್. ಈ ಮೂಲಕ ಪ್ರೇಮದ ಕಾಣಿಕೆ ಪುನೀತ್ ರಾಜ್ ಅವರ ಮೊದಲ ಚಿತ್ರವಾಯಿತು. ಅದು ಆರು ತಿಂಗಳ ಮಗುವಾಗಿದ್ದಾಗ! ತಮ್ಮ ಮಗುವನ್ನು ಚಿತ್ರೀಕರಣಕ್ಕೆ ಕರೆದುಕೊಂಡು ಹೋದರೆ ಯಾವ ಅಮ್ಮಂಗಾದರೂ ಭಯ ಆಗುವುದು ಸಹಜವೇ. ಅದೇ ರೀತಿ ಪಾರ್ವತಮ್ಮನವರು ಕೂಡ ಪ್ರತಿದಿನವೂ ತಮ್ಮ ಕಂದನನ್ನು ಶೂಟಿಂಗ್ಗೆ ಕರೆದುಕೊಂಡು ಹೋಗುತ್ತಿದ್ದು, ಅಲ್ಲಿಯೇ ಅವರು ಇರುತ್ತಿದ್ದರು.
56
ಸಿನಿಮಾದಲ್ಲಿ ಮಿಂಚು
ಅದಾದ ಬಳಿಕ ಕೆಲವು ಸಿನಿಮಾಗಳಲ್ಲಿ ಲೋಹಿತ್ ಅರ್ಥಾತ್ ಪುನೀತ್ ಅವರು ಕಾಣಿಸಿಕೊಂಡರು. ಪ್ರಶಸ್ತಿಗಳನ್ನು ಬಾಚಿಕೊಂಡರು. ಕೊನೆಗೆ ಬಣ್ಣದ ಲೋಕದಿಂದ ದೂರ ಸರಿದು ಬಿಜಿನೆಸ್ ಮಾಡಿದರೂ, ಕೊನೆಗೆ ಅವರನ್ನು ಎಳೆ ತಂದದ್ದು ಚಿತ್ರರಂಗವೇ.
66
ಸಮಾಜಮುಖಿ ಕಾರ್ಯ
2002 ರಲ್ಲಿ ಅಪ್ಪು ಆಗಿ ಅಪ್ಪು ಚಿತ್ರದ ಮೂಲಕ ನಾಡಿನ ಮನೆಮಾತಾದ ಪುನೀತ್ ರಾಜ್, ಅಲ್ಲಿಂದ ಚಿತ್ರರಂಗದಲ್ಲಿ ಏರುತ್ತಲೇ ಸಾಗಿದರು. ಅದರ ಜೊತೆಗೆ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಅದೆಷ್ಟೋ ಅವರ ಕಾರ್ಯಗಳು ಅವರ ನಿಧನದ ಬಳಿಕ ಬೆಳಕಿಗೆ ಬಂದದ್ದು ಇದೆ. ಇನ್ನೂ ಎಷ್ಟೋ ಯಾರಿಗೂ ಗೊತ್ತಿಲ್ಲದ ಕಾರ್ಯಗಳೂ ಇವೆ. 2021 ರಲ್ಲಿ 46 ನೇ ವಯಸ್ಸಿನಲ್ಲಿ ಹಠಾತ್ ಹೃದಯಾಘಾತದಿಂದ ಎಲ್ಲರನ್ನೂ ಅಗಲಿದ ಅಪ್ಪು, ಜನಮಾನಸಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.