ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಕಿಚ್ಚ ಸುದೀಪ್‌: 'ಬಿಲ್ಲ ರಂಗ ಭಾಷ' ಶೂಟಿಂಗ್‌ ಕುರಿತು ಹೇಳಿದ್ದೇನು?

Published : Feb 20, 2025, 04:31 PM ISTUpdated : Feb 20, 2025, 05:02 PM IST

‘ಬಿಲ್ಲ ರಂಗ ಭಾಷ’ ಸಿನಿಮಾದ ಶೂಟಿಂಗ್‌ ಮಾರ್ಚ್‌ 2ನೇ ವಾರಕ್ಕೆ ಮುಂದೂಡಿಕೆ ಆಗಿದೆ. ಕಿಚ್ಚ ಸುದೀಪ್‌ ಸೋಷಿಯಲ್‌ ಮೀಡಿಯಾದಲ್ಲಿ ಈ ವಿಷಯ ಪೋಸ್ಟ್ ಮಾಡಿದ್ದಾರೆ.

PREV
16
ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಕಿಚ್ಚ ಸುದೀಪ್‌: 'ಬಿಲ್ಲ ರಂಗ ಭಾಷ' ಶೂಟಿಂಗ್‌ ಕುರಿತು ಹೇಳಿದ್ದೇನು?

ಸಿಸಿಎಲ್ ಕ್ರಿಕೆಟ್‌ ಟೂರ್ನಮೆಂಟ್‌ನಲ್ಲಿ ಸುದೀಪ್‌ ಬ್ಯುಸಿ ಆಗಿರುವ ಕಾರಣ ಅನೂಫ್ ಭಂಡಾರಿ ನಿರ್ದೇಶನದ ‘ಬಿಲ್ಲ ರಂಗ ಭಾಷ’ ಸಿನಿಮಾದ ಶೂಟಿಂಗ್‌ ಮಾರ್ಚ್‌ 2ನೇ ವಾರಕ್ಕೆ ಮುಂದೂಡಿಕೆ ಆಗಿದೆ. ಕಿಚ್ಚ ಸುದೀಪ್‌ ಸೋಷಿಯಲ್‌ ಮೀಡಿಯಾದಲ್ಲಿ ಈ ವಿಷಯ ಪೋಸ್ಟ್ ಮಾಡಿದ್ದಾರೆ.

26

‘ಮೈಸೂರಿನಲ್ಲಿ ಮಾ.1 ಹಾಗೂ 2ಕ್ಕೆ ಸಿಸಿಎಲ್ ಕ್ರಿಕೆಟ್‌ ಪಂದ್ಯಾಟದ ಎರಡು ಸೆಮಿ ಫೈನಲ್‌ ಮ್ಯಾಚ್‌ಗಳು ನಡೆಯಲಿವೆ. ಮಾರ್ಚ್‌ 2ನೇ ವಾರದಿಂದ ನಮ್ಮ ಬಿಲ್ಲ ರಂಗ ಭಾಷ ಸಿನಿಮಾ ಶೂಟಿಂಗ್ ಆರಂಭವಾಗಲಿದೆ’ ಎಂದು ಸುದೀಪ್‌ ತಿಳಿಸಿದ್ದಾರೆ.

36

ಅನೂಪ್‌ ಭಂಡಾರಿ ನಿರ್ದೇಶನದ ‘ಬಿಲ್ಲ ರಂಗ ಭಾಷ’ ಸಿನಿಮಾಕ್ಕಾಗಿ ಸುದೀಪ್‌ ಬಾಡಿ ಬಿಲ್ಡ್‌ ಮಾಡಿದ್ದಾರೆ. ಕಟ್ಟುಮಸ್ತಾದ ಮೈಕಟ್ಟಿನ ಫೋಟೋಶೂಟ್‌ ಮಾಡಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ‘ಬಿಲ್ಲ ರಂಗ ಭಾಷ ಸಿನಿಮಾದ ಪಾತ್ರಕ್ಕೆ ಆಲ್‌ಮೋಸ್ಟ್ ರೆಡಿಯಾಗಿದ್ದೀನಿ’ ಎಂದು ಸುದೀಪ್‌ ಹೇಳಿದ್ದಾರೆ.

46

ಈ ವರ್ಷವೇ ತನ್ನ ನಟನೆಯ ‘ಬಿಲ್ಲಾ ರಂಗಾ ಭಾಷಾ’ ಸಿನಿಮಾದ ಕೆಲಸಗಳು ಶುರುವಾಗಲಿವೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇತ್ತೀಚೆಗೆ ‘ಆಸ್ಕ್‌ ವಿತ್‌ ಕಿಚ್ಚ’ ಹ್ಯಾಶ್‌ಟ್ಯಾಗ್‌ನಡಿ ಅಭಿಮಾನಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಸುದೀಪ್ ಈ ವಿಷಯ ತಿಳಿಸಿದ್ದಾರೆ.

56

ನಿರ್ದೇಶಕ ಅನೂಪ್‌ ಭಂಡಾರಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ‘ ಈ ಬಗ್ಗೆ ಈಗಲೇ ಏನೂ ಹೇಳಲಾಗದು. ಇನ್ನೊಂದು ತಿಂಗಳಲ್ಲಿ ಸುದೀಪ್‌ ಜೊತೆಗೆ ಚರ್ಚಿಸಿ ಅಪ್‌ಡೇಟ್‌ ನೀಡುತ್ತೇನೆ. ಚಿತ್ರದ ಕೆಲಸಗಳಂತೂ ನಡೆಯುತ್ತಿವೆ’ ಎಂದಿದ್ದಾರೆ. ಐದು ವರ್ಷಗಳ ಹಿಂದೆಯೇ ಸುದೀಪ್ ನಟನೆಯ ‘ಬಿಲ್ಲಾ ರಂಗಾ ಭಾಷಾ’ ಸಿನಿಮಾ ಘೋಷಣೆಯಾಗಿತ್ತು.

66

ಇನ್ನು ಈ ಮೊದಲು ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಿಚ್ಚ ಸುದೀಪ್ ಹಾಗು ಅನೂಪ್ ಭಂಡಾರಿ ಕಾಂಬಿನೇಶನ್‌ ಇತ್ತು. ಆ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಸಹ ಇಡಲಾಗಿತ್ತು. ಆದರೆ, ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೆಚ್ಚುಗೆ ಗಳಿಸಲಿಲ್ಲ, ಕಲೆಕ್ಷನ್ ಮಾಡಲಿಲ್ಲ. 

Read more Photos on
click me!

Recommended Stories