Ashwini Puneeth Rajkumar ಹುಟ್ಟುಹಬ್ಬ; ನಾವಿದ್ದೀವಿ ಅತ್ತಿಗೆ ಎಂದ ಅಭಿಮಾನಿಗಳು

First Published | Mar 14, 2023, 8:53 AM IST

 ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಫೋಟೋ ಮತ್ತು ವಿಡಿಯೋ. ಈ ವರ್ಷ ಆಚರಣೆಗೆ ಬ್ರೇಕ್? 

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ದೊಡ್ಡ ಮನೆಯ ಕಿರಿಯ ಸೊಸೆ ಆಗಿ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಶ್ವಿನಿ ರೇವಂತ್‌ ಅವರಿಗೆ ಹುಟ್ಟುಹಬ್ಬದ ಸಂಭ್ರಮ.

ಮೂಲಕಃ ಚಿಕ್ಕಮಗಳೂರಿನವರಾದ ಅಶ್ವಿನಿ ಡಿಸೆಂಬರ್ 1, 1999ರಲ್ಲಿ ಪುನೀತ್ ಕೈ ಹಿಡಿಯುತ್ತಾರೆ. ಈ ಜೋಡಿಗೆ ಧೃತಿ  ಮತ್ತು ವಂದಿತಾ ಎಂಬ ಮುದ್ದಾಗ ಹೆಣ್ಣು ಮಕ್ಕಳಿದ್ದಾರೆ. 

Tap to resize

ಕನ್ನಡ ಚಿತ್ರರಂಗದಲ್ಲಿ ಹೊಸ ಕಲಾವಿದರಿಗೆ ಹೊಸ ನಿರ್ದೇಶಕರಿಗೆ ಹೊಸ ತಂಡಗಳಿಗೆ ಅವಕಾಶಗಳನ್ನು ನೀಡಬೇಕು ಎಂದು ಪುನೀತ್‌ 'ಫಿಆರ್‌ಕೆ' ಸಂಸ್ಥೆಯನ್ನು ಆರಂಭಿಸುತ್ತಾರೆ. 

2017ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಗೆ ಒಡತಿ ಅಶ್ವಿನಿ. ಒಟ್ಟು 8 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇನ್ನು 2 ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿ. 

ಪುನೀತ್ ನಟನೆಯ ಕೊನೆಯ 'ಗಂಧದ ಗುಡಿ' ಚಿತ್ರಕ್ಕೆ ಸ್ವತಃ ಅಶ್ವಿನಿ ಬಂಡವಾಳ ಹಾಕಿದ್ದು. ರಾಜಕೀಯ ಗಣ್ಯರು, ಅಭಿಮಾನಿಗಳು ಮತ್ತು ಸಿನಿಮಾ ಸ್ನೇಹಿತರ ಸಮ್ಮುಖದಲ್ಲಿ ಅದ್ಧೂರಿಯಾಗಿ ತೆರೆ ಮೇಲೆ ತಂದರು.

ಅಪ್ಪು ಇಲ್ಲ ಅನ್ನೋ ಕೊರಗು ಅಭಿಮಾನಿಗಳಿಗೆ ಕಾಡಬಾರದು ಎಂದು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರೂ ಖುಷಿಯಿಂದ ಭಾಗಿಯಾಗುತ್ತಾರೆ. 

ಅಭಿಮಾನಿಗಳು ಕ್ರಿಯೇಟ್ ಮಾಡಿದ ದಾಖಲೆಗಳನ್ನು ಗುರುತಿಸಿದ್ದಾರೆ. ಕಾಶ್ಮೀರದಿಂದ ಸೈಕಲ್ ಓಡಿಸಿಕೊಂಡು ಬಂದ ಅಭಿಮಾನಿಗೆ ಅಪ್ಪು ಬಳಸುತ್ತಿದ್ದ ಕೂಲಿಂಗ್‌ ಗ್ಲಾಸ್‌ನ ಗಿಫ್ಟ್‌ ಆಗಿ ಕೊಟ್ಟರು. 

ಅಣ್ಣನಿಲ್ಲದೆ ಮೌನವಾಗಿರುವ ಅತ್ತಿಗೆ ಮುಖದಲ್ಲಿ ಸದಾ ನಗು ಕಾಣಬೇಕು ನಿಮ್ಮ ಪರ ನಾವಿದ್ದೀವಿ ಅತ್ತಿಗೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

Latest Videos

click me!