ಗಾಜನೂರಿಗೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್; ಹಳ್ಳಿ ಮಕ್ಕಳನ್ನು ಮುದ್ದಾಡಿದ ದೊಡ್ಡ ಮನೆ ಸೊಸೆ!

First Published | Nov 13, 2024, 10:59 AM IST

ಗಾಜನೂರು ಜನರ ಜೊತೆ ಸಮಯ ಕಳೆದ ಅಶ್ವಿನಿ ಪುನೀತ್ ರಾಜ್‌ಕುಮಾರ್. ತಾತನ ಮನೆಯಲ್ಲಿ ವಿಶ್ರಾಂತಿ ಪಡೆದ ಮೊಮ್ಮಕ್ಕಳು......

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ತಮ್ಮ ಶೂಟಿಂಗ್ ಬಿಡುವಿನ ಸಮಯದಲ್ಲಿ ತಪ್ಪದೆ ಗಾಜನೂರಿಗೆ ಭೇಟಿ ನೀಡುತ್ತಾರೆ. 

ಈಗ ಅಪ್ಪು ನಡೆಸಿಕೊಂಡ ಬಂದಿರುವ ಹಾದಿಯಲ್ಲಿ ಪತ್ನಿ ಅಶ್ವಿನಿ ನಡೆಯುತ್ತಿದ್ದಾರೆ. ದೊಡ್ಡ ಮನೆಯ ಸೊಸೆ ಇದೀಗ ಮಕ್ಕಳು ಮತ್ತು ಮೊಮ್ಮಕ್ಕಳ ಜೊತೆ ಗಾಜನೂರಿಗೆ ಭೇಟಿ ನೀಡಿದ್ದಾರೆ.

Tap to resize

ಗಾಜನೂರಿನಲ್ಲಿ ಇರುವ ಅಣ್ಣಾವ್ರ ಹಳೆ ಮನೆಗೆ ಭೇಟಿ ನೀಡಿದ್ದು ಕೆಲ ಸಮಯ ಕಳೆದಿದ್ದಾರೆ. ಮೊಮ್ಮಕಳು ಜಲಗಿ ಮೇಲೆ ವಿಶ್ರಾಂತಿಸಿದ್ದಾರೆ. 

ಗಾಜನೂರಿನಲ್ಲಿ ಇರುವ ಮನೆಯ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಆಗ ಊರಿನ ಜನರು ಆಗಮಿಸಿದ್ದಾರೆ. ಊರಿನ ಜನರ ಜೊತೆ ಅಶ್ವಿನಿ ಮಾತುಕತೆ ಮಾಡಿದ್ದಾರೆ. 

ಇದೀಗ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ಗೆ ಬಿಗ್ ಸಪೋರ್ಟ್‌  ಆಗಿ ನಿಂತಿರುವುದು ಯುವ ರಾಜ್‌ಕುಮಾರ್ ಮತ್ತು ವಿನಯ್ ರಾಜ್‌ಕುಮಾರ್. ಎಲ್ಲೇ ಹೋದರು ಚಿಕ್ಕಮ್ಮಗೆ ಸಪೋರ್ಟ್ ಆಗಿರುತ್ತಾರೆ.

ಯುವ ರಾಜ್‌ಕುಮಾರ್ ನಟನೆಯ ಎರಡನೇ ಚಿತ್ರಕ್ಕೆ ಯುವ-2 ಅನ್ನೋ ಟೈಟಲ್ ಸದ್ಯಕ್ಕೆ ನೀಡಿದ್ದಾರೆ. ಈ ಚಿತ್ರವನ್ನು ಪಿಆರ್‌ಕೆ ಸಂಸ್ಥೆಯ ಅಡಿಯಲ್ಲಿ ಅಶ್ವಿನಿ ನಿರ್ಮಾಣ ಮಾಡುತ್ತಿದ್ದಾರೆ. 

Latest Videos

click me!