ಸ್ಯಾಂಡಲ್‌ವುಡ್ ನಿರ್ದೇಶಕ ಗುರು ದೇಶಪಾಂಡೆ ಪತ್ನಿ ಪ್ರೀತಿಕಾ ಇದೀಗ ಪೆಂಟಗನ್ ಚಿತ್ರದ ನಾಯಕಿ.
ಮೇ.24 ಪ್ರೀತಿಕಾ ಹುಟ್ಟುಹಬ್ಬದ ಪ್ರಯುಕ್ತಾ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ.
ಪೆಂಟಗನ್ ಚಿತ್ರದಲ್ಲಿ 5 ಕಥೆಗಳಿದ್ದು, 5 ಸಿನಿಮಾ ನಿರ್ದೇಶಕರನ್ನು ಒಟ್ಟಾಗಿಸಿದೆ.
ಈ ಚಿತ್ರದಲ್ಲಿ ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ ಸೇರಿದಂತೆ 5 ನಿರ್ದೇಶಕರು 5 ವಿಭಿನ್ನ ಕಥೆಗಳನ್ನು ನಿರ್ದೇಶಿಸುತ್ತಿದ್ದಾರೆ.
ಮದುವೆಗೂ ಮುನ್ನ ಪ್ರೀತಿಕಾ ಚಿಕ್ಕ ಪುಟ್ಟ ಮಾಡೆಲಿಂಗ್ ಕೂಡ ಮಾಡಿದ್ದಾರೆ.
ಈ ಹಿಂದೆ ಹಲವು ಸಿನಿಮಾಗಳ ಆಫರ್ ಬಂದಿದ್ದವು. ಅಭಿನಯಿಸಲು ಆಗಿರಲಿಲ್ಲ, ಇದೀಗ ಪೆಂಟಗನ್ ಮೂಲಕ ತಮ್ಮ ಕಲೆ ಪ್ರದರ್ಶಿಸಲು ಪ್ರೀತಿಕಾ ಮುಂದಾಗಿದ್ದಾರೆ.
75ರಿಂದ 80 ದಶಕದಲ್ಲಿ ನಡೆದ ಕಥೆ ಇದಾಗಿದ್ದು, ಸಕಲೇಶಪುರ ಸೇರಿ ಸುತ್ತಮುತ್ತ ಇರುವ ಕಾಫಿ ಎಸ್ಟೇಟ್‌ನಲ್ಲಿ ಚಿತ್ರೀಕರಣ ಮಾಡಲಾಗುವುದು.