ನಟಿ ಮೇಘನಾ ರಾಜ್ ಮುದ್ದಿನ ಸಾಕು ನಾಯಿ ಬ್ರೂನೋ ಇನ್ನಿಲ್ಲ.
'ನಾನು ತುಂಬಾ ಜನರನ್ನು ಕಳೆದು ಕೊಂಡಿರುವೆ. ಈ ವ್ಯಕ್ತಿಗೆ ಯಾವುದೇ ಇಂಟ್ರಡಕ್ಷನ್ ಬೇಡ. ನಮ್ಮ ಬ್ರೂನೋ.'
'ನನ್ನ ಬೆಸ್ಟ್ ಫ್ರೆಂಡ್ ಬ್ರೂನೋ ಇಂದು ಕೊನೆ ಉಸಿರೆಳೆದಿದ್ದಾನೆ. ಜೂನಿಯರ್ ಚಿರು ಅವನ ಜೊತೆ ಆಟವಾಡಬೇಕು ಎಂಬ ಆಸೆ ನನಗಿತ್ತು.'
'ಬ್ರೂನೋಗೆ ಮಕ್ಕಳು ಕಂಡ್ರೆ ಇಷ್ಟ ಇಲ್ಲ. ಆದರೆ ಅದ್ಹೇಗೋ ಜೂನಿಯರ್ ಚಿರು ಜೊತೆ ಸೂಪರ್ ಆಗಿ ಹೊಂದಿಕೊಂಡಿದ್ದ. ಅವನ ಮಾಸ್ಟರ್ ಯಾರು ಅಂತ ಬ್ರೂನೋಗೆ ಗೊತ್ತಿದೆ.'
'ಇನ್ನು ಮುಂದೆ ಮನೆಯ ವಾತಾವರಣ ಹೀಗೆ ಇರುವುದಿಲ್ಲ. ಎಲ್ಲರಿಗೂ ಬ್ರೂನೋ ಗೊತ್ತು. ಮನೆಗೆ ಬಂದವರೆಲ್ಲಾ ಬ್ರೂನೋ ಎಲ್ಲಿ ಎಂದೇ ಮೊದಲು ಕೇಳುವುದು.'
'ನನಗೆ ಗೊತ್ತು ಬ್ರೂನೋ ನೀನು ಚಿರು ಬಳಿ ಹೋಗಿರುವೆ. ಅಲ್ಲಿ ಅವನಿಗೆ ಕಾಟ ಕೊಡುತ್ತಾ ಆಟವಾಡುತ್ತಿರುವೆ,' ಎಂದು ಮೇಘನಾ ರಾಜ್ ಬರೆದುಕೊಂಡಿದ್ದಾರೆ.