ರೋಹಿತ್ ಪದಕಿ ನಿರ್ದೇಶನದ ‘ರತ್ನನ್‌ಪ್ರಪಂಚ’ ಚಿತ್ರದಲ್ಲಿ ಇವರಿಬ್ಬರನ್ನು ಒಟ್ಟಾಗಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಧನಂಜಯ್ ನಾಯಕ ಹಾಗೂ ರೀಬಾ ಮೋನಿಕಾ ಜಾನ್ ನಾಯಕಿಯಾಗಿ ಆಗಿದ್ದು, ಇಲ್ಲಿ ಧನಂಜಯ್ ಅವರಿಗೆ ತಮ್ಮನ ಪಾತ್ರದಲ್ಲಿ ಪ್ರಮೋದ್ ಕಾಣಿಸಿಕೊಳ್ಳುತ್ತಿದ್ದಾರೆ.
‘ಸಾಕಷ್ಟುನೆನಪಿನಲ್ಲಿ ಉಳಿಯುವಂತಹ ಪಾತ್ರವಿದು. ಮಾಸ್ ಲುಕ್ ಇರುವ ಕ್ಯಾರೆಕ್ಟರ್. ಕತೆಗೆ ತುಂಬಾ ಮಹತ್ವ ಇರುವ ಪಾತ್ರ ಆಗಿರುವ ಕಾರಣ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ'
ಒಳ್ಳೆಯ ತಂಡ. ರೋಹಿತ್ ಪದಕಿ ಅವರು ಪ್ರೀಮಿಯರ್ ಪದ್ಮಿನಿ ಚಿತ್ರಕ್ಕೆ ಕೆಲಸ ಮಾಡುವಾಗಲೇ ಈ ಕತೆ ಬರೆದುಕೊಳ್ಳುತ್ತಿದ್ದರು.
ಆಗಲೇ ನನಗೆ ಈ ಚಿತ್ರದಲ್ಲಿ ನಿನಗಾಗಿ ಚಿತ್ರದಲ್ಲಿ ಒಳ್ಳೆಯ ಪಾತ್ರ ಇದೆ ಎಂದಿದ್ದರು’ ಎನ್ನುತ್ತಾರೆ ಪ್ರಮೋದ್.