ಅನಂತ್ ನಾಗರಕಟ್ಟೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು!

First Published Sep 4, 2020, 5:31 PM IST

ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟರಲ್ಲೊಬ್ಬರಾಗಿ ಮತ್ತು ಬಹುಬೇಡಿಕೆಯ ಪೋಷಕ ನಟರಾಗಿ ಅಂದಿನಿಂದ ಇಂದಿನವರೆಗೂ  ಮಿಂಚುತ್ತಾ  ತಮ್ಮ ಸಹಜ ನಟನೆಯಿಂದ ಇಡೀ ಭಾರತೀಯ ಚಿತ್ರರಂಗಕ್ಕೆ ಪರಿಚಿತರಾಗಿರುವ ಸಹಜ ಸುಂದರ ಅನಂತ್ ನಾಗ್ ಅವರಿಗೆ ಜನ್ಮ ದಿನದ ಶುಭಾಶಯಗಳು .
 

1948 ಸೆಪ್ಟೆಂಬರ್ 4 ರಂದು ಸದಾನಂದ ನಾಗರಕಟ್ಟೆ ಮತ್ತು ಆನಂದಿ ದಂಪತಿಗಳಿಗೆ ಜನಿಸಿದ ಇವರ ಪೂರ್ಣ ಹೆಸರು ಅನಂತ್ ನಾಗರಕಟ್ಟೆ.
undefined
ಇಡೀ ಭಾರತೀಯ ಚಿತ್ರರಂಗದಲ್ಲಿ ಅಪರೂಪದ ನಟರೆನಿಸಿಕೊಂಡಿರುವ ತಮ್ಮ ಸಹಜ ನಟನೆಯಿಂದ ಈಗಲೂ ಬಹುಬೇಡಿಕೆಯ ನಟರಾಗಿದ್ದಾರೆ.
undefined
ಮುಂಬೈನಲ್ಲಿ ನೆಲೆಸಿದ್ದ ಇವರು ಕನ್ನಡ, ಕೊಂಕಣಿ ಮತ್ತು ಮರಾಠಿ ಭಾಷೆಯ ರಂಗಕರ್ಮಿಯಾಗಿ 8 ವರ್ಷಗಳ ಕಾಲ ಸತತವಾಗಿ ದುಡಿದಿದ್ದಾರೆ.
undefined
ಅನಂತ್ ಅವರ ಸಹೋದರ ಕರಾಟೆ ಕಿಂಗ್ ಶಂಕರ್ ನಾಗ್ ಮತ್ತು ಪತ್ನಿ ಗಾಯತ್ರಿ ಅವರು ಕೂಡ ಕಲಾವಿದರಾಗಿ ಗುರುತಿಸಿಕೊಂಡಿರುವುದು ವಿಶೇಷ .
undefined
ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ನಟಿಸಿ ಸಪ್ತಭಾಷಾ ತಾರೆ ಎನಿಸಿಕೊಂಡಿದ್ದಾರೆ.
undefined
1973ರಲ್ಲಿ ಮೂಡಿಬಂದ ಪಿ.ವಿ. ನಂಜರಾಜ ಅರಸ್ ಅವರ ‘ಸಂಕಲ್ಪ’ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
undefined
ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಅನಂತನಾಗ್,ಜೆ.ಹೆಚ್.ಪಟೇಲ್ ಅವರ ಮಂತ್ರಿಮಂಡಲದಲ್ಲಿ ಮಂತ್ರಿಗಳಾಗಿದ್ದರು.
undefined
ಅನಂತ್ ಅವರು ಹಿರಿತೆರೆಯಷ್ಟೇ ಅಲ್ಲದೆ ಕಿರುತೆರೆಯಲ್ಲೂ ತಮ್ಮ ಮನೋಜ್ಞ ಅಭಿನಯದ ಮೂಲಕ ಛಾಪು ಮೂಡಿಸಿದ್ದಾರೆ.
undefined
ಅನಂತ್ ನಾಗ್ ಅವರು ನಿರ್ದೇಶಕರ ನಟ ಎಂಬುದಕ್ಕೆ ಸಾಕ್ಷಿ 'ನಾ ನಿನ್ನ ಬಿಡಲಾರೆ' ಚಿತ್ರದಲ್ಲಿನ ಅವರ ನಟನೆ ಎಂಬುದು ಸಿನಿಪ್ರೇಮಿಗಳ ಅಭಿಪ್ರಾಯ.
undefined
ನಾಯಕ ನಟರಾಗಿದ್ದರೂ ಡಾ , ರಾಜ್ , ವಿಷ್ಣುವರ್ಧನ್ , ರವಿಚಂದ್ರನ್ ಹೀಗೆ ಅನೇಕ ಕಲಾವಿದರ ಜೊತೆ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಅವರ ನಟನಾಭಿರುಚಿಗೆ ಹಿಡಿದ ಕನ್ನಡಿ.
undefined
click me!