ಅಂಬಿ ಪುತ್ರನ ಮೆಹಂದಿ ಶಾಸ್ತ್ರ: ಅಭಿಷೇಕ್ ಕೈಯಲ್ಲಿ ಪ್ರೀತಿಯಿಂದ ಮೂಡಿದ ಹೆಸರುಗಳೇನು?

Published : Jun 03, 2023, 12:52 PM IST

ರೆಬಲ್ ಸ್ಟಾರ್ ಅಂಬರೀಷ್ ಪುತ್ರನ ಮದುವೆ ಸಂಭ್ರಮ ಜೋರಾಗಿದೆ. ಅಭಿಷೇಕ್ ಮೆಹಂದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ.

PREV
17
ಅಂಬಿ ಪುತ್ರನ ಮೆಹಂದಿ ಶಾಸ್ತ್ರ: ಅಭಿಷೇಕ್ ಕೈಯಲ್ಲಿ ಪ್ರೀತಿಯಿಂದ ಮೂಡಿದ ಹೆಸರುಗಳೇನು?

ರೆಬೆಲ್ ಸ್ಟಾರ್ ಅಂಬರೀಶ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಅಂಬಿ ಪುತ್ರನ ಮದುವೆಗೆ ಕೌಂಟ್‌ಡೌನ್ ಶುರುವಾಗಿದ್ದು ಈಗಾಗಲೇ ಶಾಸ್ತ್ರಗಳು ಭರ್ಜರಿಯಾಗಿ ನಡೆಯುತ್ತಿವೆ. ನಿನ್ನೆ (ಜೂನ್ 2) ಅಭಿಷೇಕ್ ಅರಿಶಿಣ ಶಾಸ್ತ್ರದ ಸಂಭ್ರಮ ಜೋರಾಗಿತ್ತು. ಇದೀಗ ಮೆಹಂದಿ ಶಾಸ್ತ್ರದಲ್ಲಿ ಮಿಂಚುತ್ತಿದ್ದಾರೆ.  

27

ಅಭಿಷೇಕ್ ಮದುವೆ ಶಾಸ್ತ್ರದ ಫೋಟೋಗಳು ಮತ್ತು ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 
ಅಭಿಷೇಕ್ ಅಂಬರೀಶ್ ಅರಿಶಿಣ ಶಾಸ್ತ್ರಕ್ಕೆ ಬಿಳಿ ಶರ್ಟ್ ಮತ್ತು ಪಂಚೆಯಲ್ಲಿ ಕಂಗೊಳಿಸಿದ್ದರು. ಅಂಬಿ ಮನೆ ಅದ್ದೂರಿಯಾಗಿ ಸಿಂಗಾರಗೊಂಡಿದ್ದು ಅರಿಶಿಣ ಶಾಸ್ತ್ರಕ್ಕೆ ಹಸಿರು ಹಾಗೂ ಹಳದಿ ಹೂವಿನ ಅಲಂಕಾರ ಮಾಡಲಾಗಿತ್ತು.

37

ಮೆಹಂದಿ ಶಾಸ್ತ್ರಕ್ಕೆ ಅಭಿಷೇಕ್ ಹಸಿರು ಮತ್ತು ಬಿಳಿ ಬಣ್ಣದ ಜುಬ್ಬಾ ಪೈಜಾಮದಲ್ಲಿ ಮಿಂಚಿದ್ದರು. ವಿಶೇಷ ಎಂದರೆ ಅಭಿಷೇಕ್ ಕೈಯಲ್ಲಿ ಪ್ರೀತಿಯಿಂದ ಮೂಡಿಬಂದ ಹೆಸರುಗಳು. ಅಭಿಷೇಕ್ ಕೈಯಲ್ಲಿ ತನ್ನ ಪ್ರೀತಿಯ ಕುಟುಂಬದ ಹೆಸರನ್ನು ಬರೆಸಿಕೊಂಡಿದ್ದಾರೆ. 

47
Abhishek Ambareesh

ಅಂಗೈಯಲ್ಲಿ ರೆಬಲ್ ಸ್ಟಾರ್, ಸುಮ, ಅವಿವಾ ಹಾಗೂ ಮಂಡ್ಯ ಹೆಸರುಗಳು ಮದರಂಗಿಯಲ್ಲಿ  ಮೂಡಿಬಂದಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದೆ. 

57

ಇನ್ನೂ ಹಳದಿ ಮತ್ತು ಮೆಹಂದಿ ಶಾಸ್ತ್ರಕ್ಕೆ ಚಿತ್ರರಂಗದ ಅನೇಕ ಗಣ್ಯರು ಹಾಜರಾಗಿ ಶುಭಹಾರೈಸಿದ್ದಾರೆ. ಪ್ರಿಯಾಂಕಾ ಉಪೇಂದ್ರ ಶೇರ್ ಮಾಡಿರುವ ಫೋಟೋದಲ್ಲಿ ಅಭಿಷೇಕ್ ಮತ್ತು ಸುಮಲತಾ ಜೊತೆ ಪೋಸ್ ಮಾಡಿದ್ದಾರೆ. ಜೊತೆಗೆ ಮೇಘನಾ ರಾಜ್ ಕೂಡ ಭಾಗಿಯಾಗಿದ್ದರು. 

67

ಜೂನ್​ 4ರಂದು ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 5 ಮಾಣಿಕ್ಯ-ಚಾಮರ ವಜ್ರದಲ್ಲಿ  9.30 ರಿಂದ 10.30ರ ಸಮಯದಲ್ಲಿ ಕರ್ಕಾಟಕ ಲಗ್ನದಲ್ಲಿಮದುವೆ ಸಮಾರಂಭ ನಡೆಯಲಿದೆ. 

77

ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮಂಡ್ಯದಲ್ಲೂ ಅದ್ದೂರಿ ಬಾಡೂಟ ವ್ಯವಸ್ಥೆ ಹಾಗೂ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories