ವಿಜಯನಗರ (ಜೂ. 02) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿ ಹೊಸಪೇಟೆಯ 16 ವರ್ಷದ ವಿಕಲಚೇತನ ಬಾಲಕ ಆದರ್ಶ ನಿಧನರಾಗಿದ್ದಾರೆ. ಕಾಯಿಲೆಯೊಂದರಿಂದ ಬಳಲುತ್ತಿದ್ದ ಅಪ್ಪು ಅಭಿಮಾನಿ ಕೊನೆ ಉಸಿರು ಎಳೆದಿದ್ದಾರೆ. ಅಪ್ಪು ಸಿನಿಮಾ, ಹಾಡು ಡ್ಯಾನ್ಸ್ ನೋಡಿಯೇ ಬೆಳೆದ ಬಾಲಕ ಪುನೀತ್ ರನ್ನು ಆರಾಧಿಸುತ್ತಿದ್ದರು. ತಮ್ಮ ಅಭಿಮಾನಿಯನ್ನು ಪುನೀತ್ ಬೆಂಗಳೂರಿನ ನಿವಾಸಕ್ಕೆ ಕರೆಸಿಕೊಂಡಿದ್ದರು.. ಕಾಯಿಲೆಗಳಿಂದ ಬಳಲುತ್ತಿದ್ದ ಬಾಲಕನ ಚಿಕಿತ್ಸೆಗೆಂದು ಆಸ್ಪತ್ರೆಯ ಆಡಳಿತ ಮಂಡಳಿತ ಜತೆ ಈ ಹಿಂದೆ ಅಪ್ಪು ಮಾತನಾಡಿದ್ದರು. ಅಮೇರಿಕಾ ಮೂಲದ ವೈದ್ಯರಿಗೂ ಚಿಕಿತ್ಸೆಗೆ ಪುನೀತ್ ಮನವಿ ಮಾಡಿಕೊಂಡಿದ್ದರೂ ಪ್ರಾರ್ಥನೆ ಫಲಿಸಲಿಲ್ಲ. Power star Puneeth rajkumar die hard fan dead Vijayanagara Hospet ಹೊಸಪೇಟೆ; ಪುನೀತ್ ರಾಜ್‌ಕುಮಾರ್ ಅಪ್ಪಟ ಅಭಿಮಾನಿ ಆದರ್ಶ ನಿಧನ