ಸೌತ್‌ನ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ಈಗ ದೇಶಾದ್ಯಂತ ತಮ್ಮದೇ ಆದ ಶೈಲಿಯಲ್ಲಿ ಹೊಸ ಅಲೆಸೃಷ್ಟಿಸುತ್ತಿದ್ದಾರೆ.
ಅಮಿತಾಬ್ ಬಚ್ಚನ್ ಜೊತೆ ಗುಡ್‌ಬೈ ಮತ್ತು ಸಿಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಮಿಷನ್ ಮಜ್ನು ಸಿನಿಮಾಗಳ ನಂತರ ರಶ್ಮಿಕಾ ಜನಪ್ರಿಯತೆ ದುಪ್ಪಟ್ಟಾಗಿದೆ.
ರಶ್ಮಿಕಾ ಇತ್ತೀಚೆಗೆ rapperಬಾದ್‌ಶಾ ಅವರ ಮ್ಯೂಸಿಕ್ ವಿಡಿಯೋ 'ಟಾಪ್ ಟಕರ್' ನಲ್ಲೂ ಕಾಣಿಸಿಕೊಂಡಿದ್ದರು.
ವಿಶ್ವದ ಅತಿದೊಡ್ಡ ಬರ್ಗರ್ ಬ್ರಾಂಡ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಕಿರಿಕ್ ಚೆಲುವೆ.
ಕಳೆದ ವರ್ಷ, ಜನವರಿಯಲ್ಲಿ ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ರಶ್ಮಿಕಾಮನೆಮೇಲೆ ಐಟಿ ದಾಳಿ ನಡೆಸಿದಾಗ ಸಾಕಷ್ಟು ಸುದ್ದಿಯಾಗಿತ್ತು.
ನಟಿ 2016-2017ರ ಅವಧಿಯವರೆಗೆ ಮಾತ್ರ ತೆರಿಗೆ ಪಾವತಿಸಿದ್ದರು ಎಂದು ವರದಿಗಳು ಹೇಳುತ್ತವೆ.
ಡೆಕ್ಕನ್ ಕ್ರಾನಿಕಲ್ ವರದಿಪ್ರಕಾರ ಐಟಿ ಅಧಿಕಾರಿಗಳು 25 ಲಕ್ಷ ರೂ ಲೆಕ್ಕವಿಲ್ಲದಹಣ, ದಾಖಲೆಗಳು ಮತ್ತು 3.94 ಕೋಟಿ ರೂ.ಗಳ ಮೌಲ್ಯದ ಅಘೋಷಿತ ಆಸ್ತಿ ವಶಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಹಾಗೇ ರಶ್ಮಿಕಾ 1.5 ಕೋಟಿ ರೂ ತೆರಿಗೆ ಬಾಕಿ ಉಳಿಸಿಕೊಂಡಿದ್ದರು ಎನ್ನಲಾಗುತ್ತಿದೆ.
ಅಲ್ಲದೆ, ರಶ್ಮಿಕಾಗೆ ಎರಡು ಪ್ಯಾನ್ ಆಕೌಂಟ್‌ಗಳಿವೆಎಂಬ ಸುದ್ದಿಯೂ ಹರಿದಾಡಿತ್ತು.
ನಂತರ, ರಶ್ಮಿಕಾ ಮತ್ತು ಅವರ ತಂದೆ ಮದನ್ ಮಂದಣ್ಣ ಐಟಿ ಕಚೇರಿಗೆ ಭೇಟಿ ನೀಡಿ, ಅಗತ್ಯವಿರುವ ಎಲ್ಲ ದಾಖಲೆಗಳನ್ನು ನೀಡಿದರು.
'ಐ-ಟಿ ಅಧಿಕಾರಿಗಳು ಕೆಲವು ದಾಖಲೆಗಳನ್ನು ಕೋರಿದ್ದಾರೆ ಮತ್ತು ಅವುಗಳನ್ನು ಸಲ್ಲಿಸಲು ತೆರಳಿದ್ದವು,'ಎಂದು ಮಾಧ್ಯಮಗಳ ಜೊತೆ ಮಾತನಾಡಿದ ರಶ್ಮಿಕಾರ ತಂದೆ ಹೇಳಿದ್ದರು.