Pooja Gandhi ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಳೆ ಹುಡುಗಿ ಪೂಜಾ ಗಾಂಧಿ

Published : Nov 29, 2023, 09:47 PM IST

ಮಳೆ ಹುಡುಗಿ ಎಂದೇ ಪ್ರಖ್ಯಾತರಾಗಿದ್ದ ನಟಿ ಪೂಜಾ ಗಾಂಧಿ ಬುಧವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಗೆಳೆಯ ಹಾಗೂ ಉದ್ಯಮಿ ವಿಜಯ್‌ ಘೋರ್ಪಡೆಯನ್ನು ಅವರು ಮಂತ್ರಮಾಂಗಲ್ಯ ಪದ್ಧತಿಯಲ್ಲಿ ವಿವಾಹವಾದರು.

PREV
19
Pooja Gandhi ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಳೆ ಹುಡುಗಿ ಪೂಜಾ ಗಾಂಧಿ

ರಸಋಷಿ ಕುವೆಂಪು ಅವರ ಆಶಯದ ಮಂತ್ರಮಾಂಗಲ್ಯ ಪದ್ಧತಿಯಲ್ಲಿ ನಟಿ ಪೂಜಾ ಗಾಂಧಿ ಬುಧವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

29

ತಮಗೆ ಕನ್ನಡ ಕಲಿಸಿದ ಗೆಳೆಯ ಹಾಗೂ ಉದ್ಯಮಿ ವಿಜಯ್‌ ಘೋರ್ಪಡೆ ಅವರನ್ನು ಸರಳ ಸಮಾರಂಭದಲ್ಲಿ ಮಳೆ ಹುಡುಗಿ ಎಂದೇ ಖ್ಯಾತರಾದ ಪೂಜಾ ಗಾಂಧಿ ವರಿಸಿದರು.

39

ಗೋಧೂಳಿ ಮಹೂರ್ತದಲ್ಲಿ ಪೂಜಾ ಗಾಂಧಿ ಹಾಗೂ ವಿಜಯ್‌ ಘೋರ್ಪಡೆ ಹಾರ ಬದಲಾಯಿಸಿಕೊಳ್ಳುವ ಮೂಲಕ ಮುಂದಿನ ಜೀವನವನ್ನು ಆರಂಭಿಸಿದ್ದಾರೆ.

49

ಇವರಿಬ್ಬರ ಮದುವೆಗಗೆ ಯಾವುದೇ ಮಂತ್ರಘೋಷಗಳು, ಹೋಮ ಹವನಗಳಾಗಲಿ ಇದ್ದಿರಲಿಲ್ಲ. ತೀರಾ ಸರಳವಾಗಿ ಹಾರವನ್ನು ಬದಲಾಯಿಸಿಕೊಂಡರು.

59

ವಿಜಯ್‌ ಘೋರ್ಪಡೆ ಅವರನ್ನು ವಿವಾಹವಾಗುತ್ತಿರುವ ಬಗ್ಗೆ ಮುಂಗಾರು ಮಳೆ ಚಿತ್ರದ ಖ್ಯಾತಿಯ ಪೂಜಾ ಗಾಂಧಿ ಒಂದು ದಿನದ ಹಿಂದೆಯಷ್ಟೇ ಪ್ರಕಟಿಸಿದ್ದರು.

69

ಅಚ್ಚಕನ್ನಡದಲ್ಲಿ ತೀರಾ ಸರಳವಾಗಿ ಬರೆದಿರುವ ಪತ್ರದಲ್ಲಿ ತಾವು ಮಂತ್ರ ಮಾಂಗಲ್ಯ ಪದ್ಧತಿಯಂತೆ ಸರಳ ವಿವಾಹ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು.

79

ಪೂಜಾ ಗಾಂಧಿ ಹಾಗೂ ವಿಜಯ್‌ ಘೋರ್ಪಡೆ ಅವರ ವಿವಾಹಕ್ಕೆ ತೀರಾ ಆಪ್ತ ಸಿನಿಮಾ ತಾರೆಯರು ಮಾತ್ರವೇ ಆಗಮಿಸಿದ್ದರು. ಮುಂಗಾರು ಮಳೆ ಚಿತ್ರದ ನಿರ್ದೇಶಕ ಯೋಗರಾಜ್‌ ಬಟ್‌ ಹಾಜರಿದ್ದರು.

89

ಯೋಗರಾಜ್‌ ಬಟ್‌ ಮಾತ್ರವಲ್ಲದೆ, ನಟಿ ಸುಧಾರಾಣಿ, ಪೂಜಾ ಗಾಂಧಿಯವರ ಸ್ನೇಹಿತೆ ನಟಿ ಶುಭಾ ಪೂಜಾ ಕೂಡ ಆಗಮಿಸಿ ಹೊಸ ದಂಪತಿಗಳನ್ನು ಹಾರೈಸಿದರು.

99

ಮದುವೆಯ ಚಿತ್ರ, ವಿಡಿಯೋ ಮಾಡಲು ಅನುಮತಿ ಇದ್ದಿರಲಿಲ್ಲ. ಮದುವೆಯ ಚಿತ್ರಗಳನ್ನು ತಾವೇ ಪ್ರಕಟಿಸುವುದಾಗ ಪೂಜಾ ಗಾಂಧಿ ತಿಳಿಸಿದ್ದರು.

Read more Photos on
click me!

Recommended Stories