ಅದ್ವಿತಿ ನಟಿಸಿರುವ ಶುಗರ್ ಫ್ಯಾಕ್ಟರಿ ಸಿನಿಮಾ ಪ್ರಚಾರದ ವೇಳೆ ಲವ್ ಆಂಡ್ ಬ್ರೇಕಪ್ ಬಗ್ಗೆ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಪ್ರಪೋಸ್ ಮಾಡಲು ರೆಡಿಯಾಗಿದ್ದಾರೆ.
ನನ್ನ ಮದುವೆ ಬಗ್ಗೆ ನನ್ನ ಮನೆಯಲ್ಲಿ ಯಾರೂ ಕೇಳುತ್ತಿಲ್ಲ ತಲೆ ಕೆಡಿಸಿಕೊಂಡಿಲ್ಲ ಆದರೆ ನನ್ನ ಸ್ನೇಹಿತರು, ಡಾರ್ಲಿಂಗ್ ಕೃಷ್ಣ, ಸೋನಲ್ ಮತ್ತು ಮೀಡಿಯಾ ಸ್ನೇಹಿತರು ನನ್ನ ಮದುವೆ ಬಗ್ಗೆ ಪ್ರಶ್ನೆ ಮಾಡುತ್ತಾರೆ.
ನೋಡಲು ನಾನು ವಯಸ್ಸಾಗಿರುವ ಹುಡುಗಿ ರೀತಿ ಕಾಣಿಸುತ್ತೀನಾ? ನನಗೆ ಹುಡುಗ ಸಿಕ್ಕಿದ ಮೇಲೆ ನಾನು ಮದುವೆ ಮಾಡಿಕೊಳ್ಳುವ ಪ್ಲ್ಯಾನ್ ಮಾಡುತ್ತಿದ್ದೀನಿ.
ನಾನು ಮೈಸೂರ್ ಹುಡುಗ ಬೇಕು ಅಂತೇನು ಇಲ್ಲ. ನನಗೆ ಕನ್ನಡದ ಹುಡುಗ ತುಂಬಾ ಸಿಂಪಲ್ ಆಗಿರಬೇಕು ಸಪೋರ್ಟ್ ಕೊಡಬೇಕು. ಉತ್ತರ ಇರಬೇಕು ಫೇರ್ ಇರಬೇಕು ಅನ್ನೋ ಕಲ್ಪನೆನೇ ಇಲ್ಲ.
Adhvithi Shetty
ಸಿನಿಮಾದಲ್ಲೂ ನನ್ನ ಪಾತ್ರ ಪ್ರೀತಿ, ಕಮಿಟ್ಮೆಂಟ್ ಮತ್ತು ಮದುವೆ ಅನ್ನೋ ತರ ಇದೆ. ನನಗೆ ಪ್ರೀತಿನೂ ಅಗಿದೆ ಹಾಗೂ ಬ್ರೇಕಪ್ ಕೂಡ ಆಗಿದೆ ಜೀವನದಲ್ಲಿ.
ಬ್ರೇಕಪ್‌ನಿಂದ ಸಾಕಷ್ಟು ಪಾಠ ಕಲಿತಿದ್ದೀನಿ. ಟೀನೇಜ್ ಸಮಯದಲ್ಲಿ ಮೆಚ್ಯೂರಿಟಿ ಬರುವ ಮುನ್ನ ಏನು ರಿಲೇಷನ್‌ಶಿಪ್‌ನಲ್ಲಿ ಇರ್ತೀವಿ ಆ ಸಮಯದಲ್ಲಿ ನಾವು ವೃತ್ತಿ ಜೀವನ ಎಷ್ಟು ಮುಖ್ಯ ಅನ್ನೋ ವಿಚಾರವನ್ನು ಅರ್ಥ ಮಾಡಿಕೊಂಡಿರುವುದಿಲ್ಲ.
ಒಂದು ಸಂಬಂಧದಲ್ಲಿ ಕಮ್ಯೂನಿಕೇಷನ್ ತುಂಬಾ ಮುಖ್ಯ ಆಗುತ್ತದೆ. ನಾವು ವೃತ್ತಿ ಜೀವನದ ಕಡೆ ಹೆಚ್ಚಿಗೆ ಗಮನ ಹರಿಸಿದಾಗ ರಿಲೇಷನ್‌ಶಿಪ್ ಎಲ್ಲೋ ಹಾಗೆ ಹೀಗೆ ಆಗುತ್ತೆ. ಬ್ರೇಕಪ್ ಕಾರಣ ಅಷ್ಟೆ.
ಇಬ್ರು ಕೆಲಸ ಕೆಲಸ ಅಂತ ಹೆಚ್ಚಿಗೆ ಬ್ಯುಸಿ ಇರುತ್ತೀವಿ ಆಗ ಸಮಯ ಕೊಡಲು ಆಗ ಮ್ಯಾನೇಜ್ ಮಾಡಿಲ್ಲ ಅಂದ್ರೆ ಮುರಿದು ಬೀಳುತ್ತದೆ. ರಿಲೇಷನ್‌ಶಿಪ್ ಆರಂಭದಲ್ಲಿ ನಾವು ಒಂದು ಕೆರಿಯರ್‌ನಲ್ಲಿದ್ದೆ ಅದಾನ ಮೇಲೆ ಮತ್ತೊಂದು ಕೆಲಸಕ್ಕೆ ಜಂಪ್ ಮಾಡಿಕೊಂಡರೆ ಹೊಂದಾಣಿಕೆ ಮತ್ತು ಸಮಯ ಸಿಗುವುದಿಲ್ಲ.
ಈ ಘಟನೆ ನಡೆದಿರುವುದು ತುಂಬಾ ವರ್ಷಗಳ ಹಿಂದೆ. ಈಗ ನಮಗೆ ಯಾರು ಬೀಳುತ್ತಾರೆ. ನಮ್ಮನ್ನು ನೋಡಿದ ತಕ್ಷಣ ಪಕ್ಕ ಬಾಯ್‌ಫ್ರೆಂಡ್ ಇರುತ್ತಾರೆ ಅಂದುಕೊಳ್ಳುತ್ತಾರೆ ಆದರೆ ಯಾರೂ ಬೀಳುವುದಿಲ್ಲ.